ಕುಡಿದ ಮತ್ತಿನಲ್ಲಿದ್ದ ಯುವತಿಯಿಂದ ನಡುರಸ್ತೆಯಲ್ಲೇ ಹಲ್​ಚಲ್

ಕುಡಿದ ಮತ್ತಿನಲ್ಲಿದ್ದ ಯುವತಿಯಿಂದ ನಡುರಸ್ತೆಯಲ್ಲೇ ಹಲ್​ಚಲ್

ಮಹಾರಾಷ್ಟ್ರ: ಮದ್ಯದ ಅಮಲಿನಲ್ಲಿದ್ದ ಎನ್ನಲಾದ ಯುವತಿಯೊರ್ವಳು ಜನನಿಬಿಡ ರಸ್ತೆಯಲ್ಲಿ ಮಲಗಿಕೊಂಡು, ಪ್ರಯಾಣಿಕರಿಗೆ ಕಿರಿಕಿರಿ ಮಾಡಿ ಕೆಲಹೊತ್ತು ಟ್ರಾಫಿಕ್​​ಗೆ ಜಾಮ್​​ಗೆ ಕಾರಣವಾದ ಘಟನೆ ಪುಣೆಯ ತಿಲಕ್​ ರಸ್ತೆಯಲ್ಲಿ ನಡೆದಿದ್ದು, ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಹಾರಾಷ್ಟ್ರದ ಸ್ವರ್ಗೇಟ್ ಪ್ರದೇಶದಲ್ಲಿ ತಡರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಸ್ವರ್ಗೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆ ಖಡಕ್ ವಾಸ್ಲಾ ಪ್ರದೇಶದಿಂದ ಹೀರಾಬಾಗ್‌ಗೆ ಬರುತ್ತಿದ್ದಳು. ಆದರೆ ಕುಡಿದ ಅಮಲಿನಲ್ಲಿ ಇದ್ದ ಕಾರಣ ಆಕೆ ಕೆಲ ಹೊತ್ತು ರಸ್ತೆಯ ಮೇಲೆ ಮಲಗಿ ಸಂಚಾರಕ್ಕೆ ಅಡ್ಡಿ ಮಾಡಿದ್ದಳು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸುವ ವೇಳೆಗೆ ಯುವತಿ ಪರಾರಿಯಾಗಿದ್ದಾಳೆ ಎಂದು ಸ್ವರ್ಗೇಟ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಬಾಳಾಸಾಹೇಬ್ ಕೊಪ್ನಾರ್ ಹೇಳಿದ್ದಾರೆ.

ಪುಣೆ ನಗರ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಘಟನೆ ಕುರಿತು ಮಾತನಾಡಿದ್ದು, ವೈರಲ್​ ಆದ ವಿಡಿಯೋದಿಂದ ಯುವತಿ ಮಾದಕ ದ್ರವ್ಯ ಸೇವನೆ ಮತ್ತು ಕುಡಿದ ಮತ್ತಿನಲ್ಲಿರುವುದು ಸ್ಪಷ್ಟವಾಗಿ ಗೋಚರಿಸುತ್ತೆಯಾದರು, ವೈದ್ಯಕೀಯ ಪರೀಕ್ಷೆಯನ್ನು ಮಾಡದ ಹೊರತು ನಾವು ಯಾವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆಕೆಯನ್ನು ಬಂಧಿಸಿದ ನಂತರ ವಿಚಾರಣೆ ಕೈಗೊಂಡು ಸಾರ್ವಜನಿಕರಿಗೆ ಕಿರುಕುಳ ಉಂಟುಮಾಡಿದ ಕಾರಣಕ್ಕಾಗಿ ಆಕೆಯ ಮೇಲೆ ದೂರು ದಾಖಲಿಸಬಹುದು ಎಂದಿದ್ದಾರೆ.

 

Source: newsfirstlive.com Source link