ಆಂಗ್ಲರ ನಾಡಲ್ಲಿ ಘರ್ಜಿಸಿದ ಟೀಮ್​ ಇಂಡಿಯಾ ಬೌಲರ್ಸ್ -ಯಾರ್ಕರ್​ ಸ್ಪೆಷಲಿಸ್ಟ್​ 4 ವಿಕೆಟ್

ಆಂಗ್ಲರ ನಾಡಲ್ಲಿ ಘರ್ಜಿಸಿದ ಟೀಮ್​ ಇಂಡಿಯಾ ಬೌಲರ್ಸ್ -ಯಾರ್ಕರ್​ ಸ್ಪೆಷಲಿಸ್ಟ್​ 4 ವಿಕೆಟ್

ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆಂಗ್ಲರ ನಾಡಲ್ಲಿ ಘರ್ಜಿಸಿದ ಟೀಮ್​ ಇಂಡಿಯಾ ಬೌಲರ್ಸ್ ಮೊದಲ ದಿನವೇ ಎದುರಾಳಿ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 183 ರನ್​ಗಳಿಗೆ ಕಟ್ಟಿಹಾಕಲು ಯಶಸ್ವಿಯಾಗಿದ್ದಾರೆ. ಮೊದಲ ಟೆಸ್ಟ್​​ನ ಮೊದಲ ದಿನದಾಟದಲ್ಲಿ ಟೀಮ್​ ಇಂಡಿಯಾ ಬೌಲರ್​​ಗಳ ವಿಕೆಟ್​ ಬೇಟೆ ಹೇಗಿತ್ತು ಎಂದು ನೋಡುವುದಾದರೇ..

ನಾಟಿಂಗ್​ಹ್ಯಾಮ್​ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದ್ರೆ, ಬ್ಯಾಟಿಂಗ್​ಗಿಳಿದ ಇಂಗ್ಲೆಂಡ್ ತಂಡಕ್ಕೆ, ವೇಗಿ ಜಸ್ಪ್ರೀತ್ ಬೂಮ್ರಾ ಆರಂಭಿಕ ಆಘಾತ ನೀಡಿದ್ರು. ಮೊದಲ ಓವರ್​ನ 5ನೇ ಎಸೆತದಲ್ಲೇ ರೋರಿ ಬರ್ನ್ಸ್ ಔಟಾದ್ರು. ನಂತರ 27 ರನ್​ಗಳಿಸಿ ಜ್ಯಾಕ್ ಕ್ರಾವ್ಲೆ, ಮೊಹಮ್ಮದ್ ಸಿರಾಜ್​ಗೆ ವಿಕೆಟ್​​ ಒಪ್ಪಿಸಿದ್ರು. ಅಂತಿಮವಾಗಿ ಮೊದಲ ಸೆಷನ್ ಅಂತ್ಯಕ್ಕೆ ಇಂಗ್ಲೆಂಡ್, 2 ವಿಕೆಟ್ ನಷ್ಟಕ್ಕೆ 61 ರನ್​ಗಳಿಸಿತು.

2 ವಿಕೆಟ್​​ ಕಳೆದುಕೊಂಡು 61 ರನ್​ಗಳೊಂದಿಗೆ 2ನೇ ಸೆಷನ್​ ಆರಂಭಿಸಿದ ಇಂಗ್ಲೆಂಡ್​​, ತಂಡಕ್ಕೆ 5 ರನ್​ಗಳನ್ನ ಸೇರಿಸುವಷ್ಟರಲ್ಲೇ ಡಾಮಿನಿಕ್​ ಸಿಬ್ಲೆ ವಿಕೆಟ್​ ಕಳೆದುಕೊಳ್ತು. ಆ ಬಳಿಕ ಜೊತೆಯಾದ ರೂಟ್​​, ಜಾನಿ ಬೇರ್​ಸ್ಟೋ ಅರ್ಧಶತಕದ ಜೊತೆಯಾಟವಾಡಿದ್ರು. ಆದ್ರೆ, ಶಮಿ ಎಸೆದ 51ನೇ ಓವರ್​ನ 2 ಎಸೆತದಲ್ಲಿ ಬೇರ್​​ ಸ್ಟೋ ಔಟಾಗೋದ್ರು. 2ನೇ ಸೆಷನ್​ನಲ್ಲಿ 25.2 ಓವರ್​ ಆಡಿದ ಇಂಗ್ಲೆಂಡ್​​ 77 ರನ್​ ಕಲೆ ಹಾಕಿದ್ರೆ, ಭಾರತ 2 ವಿಕೆಟ್​ ಕಬಳಿಸಿತು.

3ನೇ ಸೆಷನ್​ ಆರಂಭದಲ್ಲೇ ಟೀಮ್​ ಇಂಡಿಯಾ ಬೌಲರ್​​ಗಳು ಪಾರುಪತ್ಯ ಸಾಧಿಸಿದ್ರು. ಡೇನಿಯಲ್​ ಲಾರೆನ್ಸ್​​, ಜೋಸ್​​ ಬಟ್ಲರ್​​ ಬ್ಯಾಕ್​ ಟು ಬ್ಯಾಕ್​ ಡಕೌಟ್​ ಆಗಿ ನಿರ್ಗಮಿಸಿದ್ರು. ಬಳಲಿದ ತಂಡಕ್ಕೆ ಸ್ಟುವರ್ಟ್​​ ಬ್ರಾಡ್​​ ಕೂಡ ಆಸರೆಯಾಗಲಿಲ್ಲ. ಅಂತಿಮ ಹಂತದಲ್ಲಿ ಸ್ಯಾಮ್​ ಕರನ್​ ಹೋರಾಟ ನಡೆಸಿದ್ರು. ಅಂತಿಮವಾಗಿ ಆ್ಯಂಡರ್ಸನ್​ ವಿಕೆಟ್​ ಪತನದೊಂದಿಗೆ ಇಂಗ್ಲೆಂಡ್​ 183 ರನ್​ಗಳಿಗೆ ಆಲೌಟ್​ ಆಯ್ತು. ಆ ಬಳಿಕ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 21 ರನ್​​ಗಳಿಸಿತ್ತು.

Source: newsfirstlive.com Source link