ಮೊನ್ನೆ ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ.. ಈಗ ನೂತನ ಸಚಿವರುಗಳ ಮಠಗಳ ಯಾತ್ರೆ!

ಮೊನ್ನೆ ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ.. ಈಗ ನೂತನ ಸಚಿವರುಗಳ ಮಠಗಳ ಯಾತ್ರೆ!

ಬೆಂಗಳೂರು/ತುಮಕೂರು: ಸಿಎಂ ಬಸವರಾಜ ಬೊಮ್ಮಾಯಿ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಜೆ.ಸಿ.ಮಾಧುಸ್ವಾಮಿ ಮತ್ತು ಪ್ರಭು ಚೌವ್ಹಾಣ, ಕೆ. ಗೋಪಾಲಯ್ಯನವರು ಮಠಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ.

ನಗರದ ಸಿದ್ಧಗಂಗಾ ಮಠಕ್ಕೆ  ನಿನ್ನೆ ಬೆಳಗ್ಗೆ ಪ್ರಮಾಣವಚನ ಸ್ವೀಕಾರಕ್ಕೆ ತೆರಳೋ ಮುನ್ನವೂ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದ ಮಾಧುಸ್ವಾಮಿ ಅವರು, ಪ್ರಮಾಣವಚನ ಸ್ವೀಕಾರದ ಬಳಿಕವೂ ನೇರವಾಗಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದು ಬಳಿಕ ಸಿದ್ದಲಿಂಗಸ್ವಾಮಿಜಿ ಜೊತೆ ಕೆಲಕಾಲ‌ ಚರ್ಚೆ ಮಾಡಿದ್ದಾರೆ. ಬಳಿಕ ಶ್ರೀಮಠದ ವತಿಯಿಂದ ನೂತನ ಸಚಿವರಿಗೆ ಶಾಲು ಹೊದಿಸಿ ಸನ್ಮಾನಿಸಲಾಗಿದೆ.

ಇನ್ನು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಇನ್ನೊರ್ವ ಸಚಿವ ಪ್ರಭು ಚೌವ್ಹಾಣ ಬೀದರ್​ಗೆ ತೆರಳುವ ಮುನ್ನ ಶ್ರೀಮಠಕ್ಕೆ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದಿದ್ದಾರೆ. ಬಳಿಕ ಸಿದ್ಧಲಿಂಗ​ ಸ್ವಾಮಿಗಳ ಜೊತೆ ಮಾತುಕತೆ ನಡೆಸಿದ ಅವರಿಗೆ ಶುಭಾಶಯ ಕೋರಿ ಸನ್ಮಾನಿಸಲಾಗಿದೆ.

blank

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ  ಸಚಿವ ಕೆ. ಗೋಪಾಲಯ್ಯನವರು ಸಹ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಮಠಾಧೀಶರಾದ ಜಗದ್ಗುರು ನಿರ್ಮಾಲಾನಂದನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದರು.

Source: newsfirstlive.com Source link