IMA ಹಗರಣದ ಲಿಂಕ್​​​; ಜಮೀರ್ ಮೇಲೆ ED ಅಧಿಕಾರಿಗಳು ದಿಢೀರ್ ದಾಳಿ​​​ ಮಾಡಿದ್ಯಾಕೆ?

IMA ಹಗರಣದ ಲಿಂಕ್​​​; ಜಮೀರ್ ಮೇಲೆ ED ಅಧಿಕಾರಿಗಳು ದಿಢೀರ್ ದಾಳಿ​​​ ಮಾಡಿದ್ಯಾಕೆ?

ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಖಾನ್​​​​ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಂಎ ಹಗರಣದ ಆರೋಪಿ ಮನ್ಸೂರ್ ಅಲಿ ಖಾನ್ ವಿಚಾರಣೆ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಹೆಸರು ಉಲ್ಲೇಖಿಸಿದ್ದರು. ಹೀಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಮೀರ್​​ ಖಾನ್​​​​​ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದಾರೆ.

ಜಮೀರ್​​​ ಬೆಂಗಳೂರಿನ ಪ್ರತಿಷ್ಠಿತ ಏರಿಯಾ ರಿಚ್ಮಂಡ್​​ ಸರ್ಕಲ್​​ನಲ್ಲಿರುವ ನಿವೇಶನವನ್ನು ಮನ್ಸೂರ್​​ಗೆ ಮಾರಾಟ ಮಾಡಿದ್ದರು. ಸುಮಾರು 9.38 ಕೋಟಿ ರೂಪಾಯಿಗೆ ನಿವೇಶನ ಮಾರಾಟ ಮಾಡಿದ್ದ ಜಮೀರ್​​ ಹೆಸರನ್ನು ಮನ್ಸೂರ್​​ ಅಲಿ ಖಾನ್ ಐಎಂಎ ವಂಚನೆ ಪ್ರಕರಣದ ತನಿಖೆ ವೇಳೆ ​​​ಪ್ರಸ್ತಾಪಿಸಿದ್ದರು. ಜತೆ ಇಡಿ ಅಧಿಕಾರಿಗಳಿಗೆ ಲಭ್ಯವಾದ ಕೆಲ ದಾಖಲೆಗಳ ಪ್ರಕಾರ ಜಮೀರ್​​ ಮನ್ಸೂರ್​ ಖಾನ್ ಬಳಿ ಹೆಚ್ಚು ಹಣ ಪಡೆದಿದ್ದರು ಎನ್ನಲಾಗಿತ್ತು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ಗೆ ಇಡಿ ಶಾಕ್​ -ಮನೆ, ಕಚೇರಿ ಮೇಲೆ ಇಡಿ ದಾಳಿ

ಈ ಹಿಂದೆಯೇ ಐಎಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್​​ ಹೆಸರು ಕೇಳಿ ಬಂದಿತ್ತು. 2019ರಲ್ಲೇ ಇಡಿ ಅಧಿಕಾರಿಗಳು ಜಮೀರ್​​​ ಅವರನ್ನು ಎರಡು ಬಾರಿ ನೋಟಿಸ್​​ ನೀಡಿ ವಿಚಾರಣೆಗೆ ಒಳಪಡಿಸಿದ್ದರು.

Source: newsfirstlive.com Source link