ED ದಾಳಿ; ಶಾಸಕ ಜಮೀರ್​ ಅಹ್ಮದ್​ಗೆ ಮುಳುವಾಯ್ತಾ ಭವ್ಯ ಬಂಗಲೆ?

ED ದಾಳಿ; ಶಾಸಕ ಜಮೀರ್​ ಅಹ್ಮದ್​ಗೆ ಮುಳುವಾಯ್ತಾ ಭವ್ಯ ಬಂಗಲೆ?

ಬೆಂಗಳೂರು: ಕಾಂಗ್ರೆಸ್​ ಶಾಸಕ, ಮಾಜಿ ಸಚಿವ ಜಮೀರ್​ ಅಹ್ಮದ್​ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಗರದ ಕಂಟೋನ್ಮೆಂಟ್ ಬಳಿಯಿರೋ ನಿವಾಸದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

blank

ಜಮೀರ್ ಅವರ ನಿವಾಸ ಮಾತ್ರವಲ್ಲದೇ ಚಾಮರಾಜಪೇಟೆಯಲ್ಲಿರೋ ಕಚೇರಿ, ಜಮೀರ್​ ಮಾಲೀಕತ್ವದ ನ್ಯಾಷನಲ್​ ಟ್ರಾವೆಲ್ಸ್​ ಹಾಗೂ ಫ್ಲ್ಯಾಟ್​ ಮೇಲೆ ಏಕಕಾಲದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಧಿಕಾರಿಗಳು ಜಮೀರ್ ನಿವಾಸ ಹಾಗೂ ಕಚೇರಿಯಲ್ಲಿರೋ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಜಮೀರ್ ವಿರುದ್ಧ ತೆರಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ನಡುವೆ ಜಮೀರ್ ಮೇಲೆ ಇಡಿ ದಾಳಿ ನಡೆಸಲು ಭವ್ಯ ಬಂಗಾಲೆಯೇ ಕಾರಣವಾಗಿದೆಯಾ ಎಂಬ ಚರ್ಚೆಯೂ ಜೋರಾಗಿದೆ.

blank

ಶಾಸಕ ಜಮೀರ್ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ, ಸುಮಾರು ಅರ್ಧ ಎಕರೆ ಜಾಗದಲ್ಲಿ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿ ಭವ್ಯ ಬಂಗಲೆ ನಿರ್ಮಾಣ ಮಾಡಿದ್ದಾರೆ. ಸಂಪೂರ್ಣ ಮನೆಯನ್ನು ಅರೇಬಿಕ್‌ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅರಮನೆಯಂತೆ ಭವ್ಯ ಬಂಗಲೆ ನಿರ್ಮಾಣ ಮಾಡುವ ಸಂದರ್ಭದಲ್ಲೇ ಇಡಿ ಅಧಿಕಾರಿಗಲು ಕಣ್ಣಿಟ್ಟಿದ್ದರ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇಷ್ಟು ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ಬಂಗಲೇಯ ಆದಾಯದ ಮೂಲದ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.

blank

blank

Source: newsfirstlive.com Source link