ಮೇಕೆದಾಟು ಕನ್ನಡಿಗರ ಹಕ್ಕು, ಯಾರಿಂದಲೂ ತಡಿಯೋಕೆ ಸಾಧ್ಯವಿಲ್ಲ; ಅಣ್ಣಾಮಲೈಗೆ ವಿಜಯೇಂದ್ರ ತಿರುಗೇಟು

ಮೇಕೆದಾಟು ಕನ್ನಡಿಗರ ಹಕ್ಕು, ಯಾರಿಂದಲೂ ತಡಿಯೋಕೆ ಸಾಧ್ಯವಿಲ್ಲ; ಅಣ್ಣಾಮಲೈಗೆ ವಿಜಯೇಂದ್ರ ತಿರುಗೇಟು

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ ಬೆನ್ನಲ್ಲೀಗ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಬಿ.ಎಸ್​​ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹೇಳಿದಂತೆಯೇ ಮೇಕೆದಾಟು ಯೋಜನೆ ನಮ್ಮ ಹಕ್ಕು. ಇದನ್ನು ಯಾರಿಂದಲೂ ತಡಿಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಖಡಕ್​​ ಆಗಿ ಹೇಳಿದರು.

ಈ ಸಂಬಂಧ ಪಕ್ಷದ ಕಚೇರಿಯಲ್ಲಿ ಮಾತಾಡಿದ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ಕೋರ್ಟ್​ ನಮ್ಮ ಪರವಾಗಿ ತೀರ್ಪು ನೀಡಿದೆ. ಅಣ್ಣಾಮಲೈ ಯಾವ ಕಾರಣಕ್ಕೆ ಮೇಕೆದಾಟು ಯೋಜನೆಗೆ ಅಡ್ಡಿ ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಯೋಜನೆ ಕನ್ನಡಿಗರ ಹಕ್ಕು ಎಂದು ತಿಳಿಸಿದರು.

ಇದನ್ನೂ ಓದಿ: IMA ಹಗರಣದ ಲಿಂಕ್​​​; ಜಮೀರ್ ಮೇಲೆ ED ಅಧಿಕಾರಿಗಳು ದಿಢೀರ್ ದಾಳಿ​​​ ಮಾಡಿದ್ಯಾಕೆ?

ಇನ್ನು, ಇದೇ ವೇಳೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಜಮೀರ್​​ಗೆ ಗೊತ್ತಿದೆ. ಇಡಿ ಅಧಿಕಾರಿಗಳೋ, ಐಟಿ ಅಧಿಕಾರಿಗಳೋ ದಾಳಿ ಮಾಡಿದ್ದು ವಿಚಾರಣೆ ನಡೆಯುತ್ತಿದೆ ನೋಡೋಣ ಎಂದರು.

Source: newsfirstlive.com Source link