ಮಂತ್ರಿ ಸ್ಥಾನ ಕೈ ತಪ್ಪಿದ್ದರ ಬಗ್ಗೆ ಮೌನಮುರಿದ ಬಿಎಸ್​​ವೈ ಪುತ್ರ ಬಿ.ವೈ ವಿಜಯೇಂದ್ರ ಹೇಳಿದ್ದೇನು?

ಮಂತ್ರಿ ಸ್ಥಾನ ಕೈ ತಪ್ಪಿದ್ದರ ಬಗ್ಗೆ ಮೌನಮುರಿದ ಬಿಎಸ್​​ವೈ ಪುತ್ರ ಬಿ.ವೈ ವಿಜಯೇಂದ್ರ ಹೇಳಿದ್ದೇನು?

ಬೆಂಗಳೂರು: ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿದ ಕುರಿತು ಬಿ.ಎಸ್​ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಮೊದಲ ಬಾರಿಗೆ ಪ್ರತಿಕ್ರಿಯಿಸಿದರು. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಬಿ.ವೈ ವಿಜಯೇಂದ್ರ, ನನಗೆ ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲ ಎಂಬ ನೋವಿಲ್ಲ. ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಯಡಿಯೂರಪ್ಪ ಒತ್ತಡ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಷರತ್ತು ಹಾಕಿದ್ರು ಅನ್ನೋದೆ ಸುಳ್ಳು. ಪುತ್ರನಿಗೆ ಡಿಸಿಎಂ ಕೊಡ್ಬೇಕು ಎಂಬ ಬೇಡಿಕೆ ಇಟ್ಟಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರು ಪಕ್ಷವನ್ನ ಈ ಹಂತಕ್ಕೆ ತಂದಿದ್ದಾರೆ. ವಿಜಯೇಂದ್ರಗೆ ಮಂತ್ರಿ ಸ್ಥಾನ ನೀಡಿ ಎಂದು ಯಡಿಯೂರಪ್ಪ ಕೇಳಲೇ ಇಲ್ಲ ಎಂದರು.

ಇದನ್ನೂ ಓದಿ: ಮೇಕೆದಾಟು ಕನ್ನಡಿಗರ ಹಕ್ಕು, ಯಾರಿಂದಲೂ ತಡಿಯೋಕೆ ಸಾಧ್ಯವಿಲ್ಲ; ಅಣ್ಣಾಮಲೈಗೆ ವಿಜಯೇಂದ್ರ ತಿರುಗೇಟು

ಹೀಗೆ ಮುಂದುವರಿದ ವಿಜಯೇಂದ್ರ, ಯಡಿಯೂರಪ್ಪ ಯಾವುದೇ ಕಂಡೀಷನ್ ಇಟ್ಟಿಲ್ಲ. ನನಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ ಎಂಬ ಅಸಮಾಧಾನವೂ ಇಲ್ಲ. ಹೈಕಮಾಂಡ್​​ ಪಕ್ಷ ಸಂಘಟನೆಗೆ ಅವಕಾಶ ಕೊಟ್ಟಿದೆ. ಅದರಲ್ಲೇ ಮುಂದುವರಿಯುತ್ತೇನೆ ಎಂದು ಹೇಳಿದರು.

Source: newsfirstlive.com Source link