ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜಿ ಇಲ್ಲ; ಅಣ್ಣಾಮಲೈಗೆ ತಪರಾಕಿ ಹಾಕಿದ ಸಿಎಂ ಬೊಮ್ಮಾಯಿ

ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜಿ ಇಲ್ಲ; ಅಣ್ಣಾಮಲೈಗೆ ತಪರಾಕಿ ಹಾಕಿದ ಸಿಎಂ ಬೊಮ್ಮಾಯಿ

ಬೆಂಗಳೂರು: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಹೋರಾಟಕ್ಕೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಮೇಕೆದಾಟು ವಿಷಯದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ಸಿಎಂ ಬಸವರಾಜ್​​ ಬೊಮ್ಮಾಯಿ.

ಮೇಕೆದಾಟು ವಿಷಯವನ್ನು ರಾಜಕಾರಣಕ್ಕೆ ಬಳಕೆ ಮಾಡ್ತಿದ್ದಾರೆ ಎಂದ ಸಿಎಂ, ತಮಿಳುನಾಡಿನಲ್ಲಿ ಯಾವುದೇ ಪಕ್ಷವಿದ್ದರೂ  ಮೇಕೆದಾಟು ಯೋಜನೆಗೆ ವಿರೋಧ ಮಾಡುತ್ತಾರೆ. ಜನರು ತುಂಬಾ ಕಷ್ಟದಲ್ಲಿದ್ದು ಅಗತ್ಯಕ್ಕನುಸಾರ ನೀರು ಹಂಚಿಕೆ ಮಾಡುವ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯವೇ ಎಂದು ಕಿಡಿಕಾರಿದರು.

ಇದನ್ನೂ ಓದಿ: ‘ಉಪವಾಸನಾದ್ರೂ ಕೂರಲಿ.. ಊಟನಾದ್ರೂ ಮಾಡಲಿ..’ – ಅಣ್ಣಾಮಲೈಗೆ ಸಿಎಂ ಟಾಂಗ್

ಇನ್ನು, ಈ ವಿಷಯ ಕುರಿತು ಕೇಂದ್ರ ನೀರಾವರಿ ಸಚಿವರ ಭೇಟಿ ಮಾಡಿ ಚರ್ಚಿಸಿದ್ದೇನೆ. ಯೋಜನೆ ಆರಂಭಿಸಿಲು ಕೇಂದ್ರ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಲಿದ್ದು, ಎಲ್ಲವು ಕ್ಲಿಯರ್ ಆದ ಕೂಡಲೇ ಕಾಮಗಾರಿ ಆರಂಭ ಮಾಡ್ತೇವೆ. ಈ ವೇಳೆ ಯಾರಾದ್ರೂ ಪ್ರತಿಭಟನೆ ಮಾಡಿದ್ರೆ ನಮಗೆ ಸಂಬಂಧವಿಲ್ಲ ಎಂದು ಪರೋಕ್ಷವಾಗಿ ಅಣ್ಣಾಮಲೈಗೆ ಠಕ್ಕರ್​ ಕೊಟ್ಟರು.

ನೂತನ ಸಚಿವರಾದ ಗೋವಿಂದ ಕಾರಜೋಳ, ಹಾಲಪ್ಪ ಆಚಾರ್ ಸಿಎಂ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದು,  ಇಂದು 10.30 ಮೇಕೆದಾಟು ವಿಚಾರಕ್ಕೆ ಸಂಬಂಧಿಸಿ ಬ್ರಿಟಿಷ್ ಹೈ ಕಮಿಷನರ್ ಜೊತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.

 

Source: newsfirstlive.com Source link