ಪುಟ್ಟ ಅಭಿಮಾನಿಗಳಿಗೆ ಗಿಫ್ಟ್​ ನೀಡಿ ಮನ ಗೆದ್ದ ಕ್ಯಾಪ್ಟನ್ ಕೊಹ್ಲಿ

ಪುಟ್ಟ ಅಭಿಮಾನಿಗಳಿಗೆ ಗಿಫ್ಟ್​ ನೀಡಿ ಮನ ಗೆದ್ದ ಕ್ಯಾಪ್ಟನ್ ಕೊಹ್ಲಿ

ಭಾರತ-ಇಂಗ್ಲೆಂಡ್​ ಮೊದಲ ಟೆಸ್ಟ್​ ಪಂದ್ಯದಲ್ಲಿ ನಾಯಕತ್ವದ ನಿರ್ಧಾರದಿಂದ ಗಮನ ಸೆಳೆದಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಆಫ್ ದಿ ಫೀಲ್ಡ್​ನಲ್ಲಿ ಪುಟ್ಟ ಅಭಿಮಾನಿಗಳಿಗೆ ಉಡುಗೊರೆ ನೀಡಿ ಸುದ್ದಿಯಾಗಿದ್ದಾರೆ. ಟ್ರೆಂಟ್​​​ಬ್ರಿಡ್ಜ್​ನ ನಾಟಿಂಗ್​ಹ್ಯಾಮ್​​ ಸ್ಟೇಡಿಯಂನಲ್ಲಿ ಕಾಣಿಸಿಕೊಂಡ ಪುಟ್ಟ ಅಭಿಮಾನಿಗಳಿಗೆ ಕೊಹ್ಲಿ, ತಮ್ಮ ಸ್ಪೈಕ್​​ ಶೂಗಳನ್ನ ಉಡುಗೊರೆಯಾಗಿ ನೀಡುವ ಮೂಲಕ​, ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದಾರೆ. ಈ ಬಗ್ಗೆ ಗಿಫ್ಟ್​ ಪಡೆದ ಬಾಲಕನ ತಂದೆ ಟ್ವಿಟರ್‌ನಲ್ಲಿ ತಮ್ಮ ಸಂಭ್ರಮ ಹಂಚಿಕೊಂಡಿದ್ದು, ನಾಯಕ ವಿರಾಟ್​ ಕೊಹ್ಲಿಗೆ ಧನ್ಯವಾದ ತಿಳಿಸಿದ್ದಾರೆ. ಲೂಕಸ್‌ ಬರ್ನ್ಸ್‌ ಕಡೆಯಿಂದ ವಿರಾಟ್‌ ಕೊಹ್ಲಿಗೆ ಧನ್ಯವಾದಗಳು. ಒಬ್ಬ ಉತ್ಸಾಹಿ ಬಾಲಕನ ಸಂತಸಕ್ಕೆ ಕಾರಣರಾಗಿದ್ದೀರಿ. ಜಾಗತಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್‌ ಆಟಗಾರನಿಂದ ನನ್ನ ಮಗನಿಗೆ ಶೂ ಸಿಕ್ಕಿದೆ ಎಂದು ಬರೆದುಕೊಂಡಿದ್ದಾರೆ.

Source: newsfirstlive.com Source link