ಒಲಿಂಪಿಕ್ಸ್‌ನಲ್ಲಿ ಗೆದ್ರೆ ಮನೆ ಕಟ್ಟಲು 11 ಲಕ್ಷ – ಮಹಿಳಾ ಹಾಕಿ ತಂಡದ ಆಟಗಾರರಿಗೆ ಭರ್ಜರಿ ಆಫರ್

– ಗುಜರಾತಿನ ವಜ್ರದ ವ್ಯಾಪಾರಿಯ ಘೋಷಣೆ

ಗಾಂಧಿನಗರ: ಭಾರತೀಯ ಮಹಿಳಾ ಹಾಕಿ ತಂಡದ ಪ್ರೋತ್ಸಾಹ ಹೆಚ್ಚಿಸಲು ಗುಜರಾತಿನ ಬಿಲಿಯನೇರ್ ವಜ್ರ ವ್ಯಾಪಾರಿ ಸಾವಜಿ ಡೋಲಾಕಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಮಹಿಳಾ ಆಟಗಾರ್ತಿಯರು ದೇಶಕ್ಕಾಗಿ ಟೋಕಿಯೋ 2020 ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರೆ ಅವರಿಗೆ ದುಬಾರಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ದುಬಾರಿ ಬಹುಮಾನಗಳನ್ನು ನೀಡುವುದರಲ್ಲಿ ಫೇಮಸ್ ಆಗಿರುವ ಧೋಲಾಕಿಯಾ, ಟೋಕಿಯಾ ಒಲಿಂಪಿಕ್ಸ್‌ನಲ್ಲಿ ಗೆದ್ದರೆ ತಮ್ಮ ಕನಸಿನ ಮನೆಯನ್ನು ಕಟ್ಟಲು ಭಾರತೀಯ ಮಹಿಳಾ ಹಾಕಿ ತಂಡದ ಆಟಗಾರರಿಗೆ ತಮ್ಮ ಕಂಪನಿ ಹರಿಕೃಷ್ಣ ಗ್ರೂಪ್ ವತಿಯಿಂದ 11 ಲಕ್ಷ ರೂಪಾಯಿ ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಸ್ವಂತ ಮನೆ ಬೇಡವಾದ ಆಟಗಾರರಿಗೆ 5 ಲಕ್ಷ ಮೌಲ್ಯದ ಹೊಸ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದಾರೆ. ಸೆಮಿಫೈನಲ್‍ನಲ್ಲಿ ಅರ್ಜೆಂಟೀನಾ ವಿರುದ್ಧ 1-2 ಅಂತರದಿಂದ ಭಾರತೀಯ ಮಹಿಳಾ ಹಾಕಿ ತಂಡ ಸೋತಿದೆ. ಇದೀಗ ಗ್ರೇಟ್ ಬ್ರಿಟನ್‍ನೊಂದಿಗೆ ಕಂಚಿನ ಪದಕಕ್ಕಾಗಿ ಸೆಣಸಲಿದೆ.

ಸದ್ಯ ಈ ಕುರಿತಂತೆ ಗುಜರಾತ್ ಬಿಲಿಯನೇರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಂಬಲಾರದಷ್ಟು ಹೆಮ್ಮೆ ನನ್ನ ಹೃದಯ ಪಡುತ್ತಿದ್ದು, ನಮ್ಮ ಮಹಿಳಾ ಹಾಕಿ ತಂಡದ ಆಟಗಾರರನ್ನು ಗೌರವಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಹೆಚ್.ಕೆ ಗ್ರೂಪ್ ನಿರ್ಧರಿಸಿದೆ ಎಂದು ಘೋಷಿಸುತ್ತಿದೆ. ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಇಚ್ಛಿಸುವ ಪ್ರತಿ ಆಟಗಾರರಿಗೂ 11 ಲಕ್ಷ ರೂಪಾಯಿ ನೆರವನ್ನು ನೀಡುತ್ತೇವೆ. ಟೋಕಿಯೋ 2020ರ ಪ್ರತಿ ಹೆಜ್ಜೆಯಲ್ಲಿಯೂ ನಮ್ಮ ಹುಡುಗಿಯರು ಇತಿಹಾಸ ರಚಿಸುತ್ತಿದ್ದಾರೆ. ನಮ್ಮ ಆಟಗಾರರ ಮನೋಬಲವನ್ನು ಹೆಚ್ಚಿಸಲು ಇದು ನಮ್ಮ ಪ್ರಯತ್ನ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.  ಇದನ್ನೂ ಓದಿ:ಐಎಂಎ ಗೋಲ್ಡ್‌ನಿಂದ 5 ಕೋಟಿ ಮೌಲ್ಯದ ಚಿನ್ನಾಭರಣ ಪಡೆದಿದ್ದ ಶಾಸಕ ಜಮೀರ್!

Source: publictv.in Source link