ಕೇರಳದಲ್ಲಿ ಕೊರೊನಾ ಅರ್ಭಟ; ಗಡಿ ಚೆಕ್ ಪೋಸ್ಟ್​ಗೆ ವಾರದಲ್ಲಿ 2 ಬಾರಿ ಭೇಟಿ ಕೊಟ್ಟ ಜಿಲ್ಲಾಧಿಕಾರಿ

ಕೇರಳದಲ್ಲಿ ಕೊರೊನಾ ಅರ್ಭಟ; ಗಡಿ ಚೆಕ್ ಪೋಸ್ಟ್​ಗೆ ವಾರದಲ್ಲಿ 2 ಬಾರಿ ಭೇಟಿ ಕೊಟ್ಟ ಜಿಲ್ಲಾಧಿಕಾರಿ

ಚಾಮರಾಜನಗರ: ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಅರ್ಭಟ ಹಿನ್ನೆಲೆ ಜಿಲ್ಲೆಯ ಗಡಿಭಾಗದ ಚೆಕ್​ಪೋಸ್ಟ್​ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದು, ಕರ್ನಾಟಕ ಕೇರಳ ಗಡಿಭಾಗದ ಮೂಲೆಹೊಳೆ ಚೆಕ್ ಪೋಸ್ಟ್​ಗೆ ಜಿಲ್ಲಾಧಿಕಾರಿ ಎಂ.ಆರ್. ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

blank

ಕೊರೊನಾ ನೆಗೆಟಿವ್ ರಿಪೋರ್ಟ್ ಇಲ್ಲದಿರುವವರನ್ನು ಜಿಲ್ಲೆಗೆ ಎಂಟ್ರಿ‌ ಕೊಡದಂತೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ನೆರೆ ರಾಜ್ಯಗಳಿಂದ ಬರುವವರಿಗೆ 72 ಗಂಟೆಗಳ RTPCR ಟೆಸ್ಟ್ ನೆಗೆಟಿವ್ ರಿಪೋರ್ಟ್ ಕಡ್ಡಾಯವೆಂಬ ಆದೇಶ ಹೊರಡಿಸಿದ್ದಾರೆ.

blank

ಭೇಟಿಯ ವೇಳೆ ಗುಂಡ್ಲುಪೇಟೆ ತಹಶೀಲ್ದಾರ್ ರವಿಶಂಕರ್ ಉಪಸ್ಥಿತರಿದ್ದು, ರಾಜ್ಯಕ್ಕೆ ಆಗಮಿಸುವವರ ಮೇಲೆ ತೀವ್ರ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ಚಾಮರಾಜನಗರಕ್ಕೆ BSY ಬರ್ಲಿಲ್ಲ, ನೀವಾದ್ರೂ ಬನ್ನಿ; ಬೊಮ್ಮಾಯಿಗೆ ಸವಾಲು​ ಎಸೆದಿದ್ದು ಯಾರು?​​​

Source: newsfirstlive.com Source link