ಟೋಕಿಯೋ ಒಲಿಂಪಿಕ್ಸ್: ಪದಕ ಗೆದ್ದ ಭಾರತ ಹಾಕಿ ಟೀಮ್​​ಗೆ ಕರೆ ಮಾಡಿ ಮೋದಿ, ಪಟ್ನಾಯಕ್ ಮಾತು

ಟೋಕಿಯೋ ಒಲಿಂಪಿಕ್ಸ್: ಪದಕ ಗೆದ್ದ ಭಾರತ ಹಾಕಿ ಟೀಮ್​​ಗೆ ಕರೆ ಮಾಡಿ ಮೋದಿ, ಪಟ್ನಾಯಕ್ ಮಾತು

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಪುರುಷರ ಹಾಕಿ ತಂಡದೊಂದಿಗೆ ಫೋನ್​​ ಕರೆ ಮಾಡಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ  ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಕಿ ತಂಡದ ನಾಯಕ ಮನ್​​ಪ್ರೀತ್​​ ಜತೆ ದೂರವಾಣಿಯಲ್ಲಿ ಮಾತಾಡಿದ ಮೋದಿ, ಇಂದು ನಡೆದ ಮಹತ್ವದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಭಾರತ ತಂಡಕ್ಕೆ ಧನ್ಯವಾದಗಳು ತಿಳಿಸಿದರು. 41 ವರ್ಷಗಳ ಬಳಿಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಭಾರತ ತಂಡಕ್ಕೆ ಅಭಿನಂದನೆಗಳು ಎಂದರು.

ಇದನ್ನೂ ಓದಿ: ಪುರುಷರ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ -41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಟೀಂ ಇಂಡಿಯಾ ಸಾಧನೆ

ಇನ್ನು ಒಡಿಶಾ ಸಿಎಂ ನವೀನ್ ಪಟ್ನಾಯಕ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ರು. ಭಾರತಕ್ಕೆ ಕಂಚಿನ ಪದಕ ತರುತ್ತಿರುವ ಹಾಕಿ ತಂಡಕ್ಕೆ ಅಭಿನಂದನೆಗಳು. ನಿಮ್ಮೊಂದಿಗೆ ಸದಾ ನಾವಿದ್ದೇವೆ, ಒಳ್ಳೆಯದಾಗಲೀ ಎಂದು ಶುಭಾಶಯ ಕೋರಿದರು.

Source: newsfirstlive.com Source link