ಪಕ್ಷಕ್ಕೆ ದಲಿತ ನಾಯಕ ಸೇರಿದ್ದಾನೆಂಬುದು ಸಿಎಂಗೆ ಗೊತ್ತಿದೆ; ಮಹೇಶ್​ಗೆ ಬಿಎಸ್​ವೈ ನೀಡಿದ್ರಾ ಸುಳಿವು?

ಪಕ್ಷಕ್ಕೆ ದಲಿತ ನಾಯಕ ಸೇರಿದ್ದಾನೆಂಬುದು ಸಿಎಂಗೆ ಗೊತ್ತಿದೆ; ಮಹೇಶ್​ಗೆ ಬಿಎಸ್​ವೈ ನೀಡಿದ್ರಾ ಸುಳಿವು?

ಬೆಂಗಳೂರು: ಬಿಎಸ್​ಪಿ ಉಚ್ಛಾಟಿತ ಶಾಸಕ ಎನ್​.ಮಹೇಶ್​. ಕೊನೆಗೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಬಿಜೆಪಿಯ ನಾಯಕರ ಸಮ್ಮುಖದಲ್ಲಿ ಇಂದು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಇಂದು ಪಕ್ಷಕ್ಕೆ ಸೇರ್ಪಡೆಯಾದ ಅವರಿಗೆ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

ಈ ವೇಳೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಮಹೇಶ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದ್ದು ಅವರ ಜೊತೆಗೂಡಿ, ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ ನಾಡಿನ ಉದ್ದಗಲಕ್ಕೂ ಪರಿಶಿಷ್ಟರಿದ್ದಾರೆ, ಮಹೇಶ್ ಸೇರ್ಪಡೆಯಿಂದ ಎಲ್ಲರೂ ಪಕ್ಷಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ.

ಪರಿಶಿಷ್ಟರನ್ನ ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು. ಪಕ್ಷ ದಲಿತರ ಹಿಂದೆ ಇದೆ ಎನ್ನುವ ಸಂದೇಶ ಹೋಗಬೇಕು. ಮಹೇಶ್ ಎಲ್ಲರ ಪ್ರೀತಿ‌ಗಳಿಸಿದ್ದಾರೆ ಪಕ್ಷಕ್ಕೆ ದಲಿತ ನಾಯಕ ಸೇರಿದ್ದಾನೆಂಬುದು ಬೊಮ್ಮಾಯಿಯವರಿಗೆ ಗೊತ್ತಿದೆ ಎನ್ನುವ ಮೂಲಕ ಮಹೇಶ್​ಗೆ ಪರೋಕ್ಷವಾಗಿ ಸಚಿವ ಸ್ಥಾನ ನೀಡುವ ಸುಳಿವು ನೀಡಿದ್ದಾರೆ.

blank

ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ ದಲ್ಲಿ ಪರಿವರ್ತನೆಯ ಗಾಳಿ‌ ಬೀಸುತ್ತಿದೆ ಬೇರೆ ಬೇರೆ ಪಾರ್ಟಿಯಿಂದ ಪಕ್ಷಕ್ಕೆ ಬರ್ತಿದ್ದಾರೆ. ಇದಕ್ಕೆಲ್ಲ ಕಾರಣ ಮೋದಿ, ಬಿಎಸ್​ವೈ ಅವರ ಅಭಿವೃದ್ಧಿ ಪಥವೇ ಕಾರಣ. ಇನ್ನು ಮಹೇಶ್​ ಅವರ ಸೇರ್ಪಡೆ ಪಕ್ಷಕ್ಕೆ ಬಲ ತುಂಬಲಿದೆ ಎಂದರು.

Source: newsfirstlive.com Source link