‘ಭ್ರಷ್ಟಾಚಾರ ಆರೋಪಿ ಜೊಲ್ಲೆಗೆ ಸಚಿವ ಸ್ಥಾನ.. ಜನಸೇವಕ ಜಮೀರ್​ಗೆ ED ದಾಳಿ’ -ಅಭಿಮಾನಿಗಳ ಆಕ್ರೋಶ

‘ಭ್ರಷ್ಟಾಚಾರ ಆರೋಪಿ ಜೊಲ್ಲೆಗೆ ಸಚಿವ ಸ್ಥಾನ.. ಜನಸೇವಕ ಜಮೀರ್​ಗೆ ED ದಾಳಿ’ -ಅಭಿಮಾನಿಗಳ ಆಕ್ರೋಶ

ಬೆಂಗಳೂರು: ಭ್ರಷ್ಟಾಚಾರ ಆರೋಪಿ ಜೊಲ್ಲೆಗೆ ಸಚಿವ ಸ್ಥಾನ, ಕೊರೊನಾ ಸಂಕಷ್ಟ ಕಾಲದಲ್ಲಿ ಸಮಾಜ ಸೇವೆ ಮಾಡಿದ ಜನ ಸೇವಕ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ಗೆ ಇ.ಡಿ ದಾಳಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಇಡಿ ಅಧಿಕಾರಿಗಳು ನಡೆಸಿದ ದಾಳಿ ಖಂಡಿಸಿ ಶಾಸಕ ಜಮೀರ್​ ಅಹ್ಮದ್​ ಮನೆ ಮುಂದೆ ಜಮಾಯಿಸಿದ ಬೆಂಬಲಿಗರು, ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ ಜಮೀರ್​ ಅಭಿಮಾನಿಗಳು, ಬಿಜೆಪಿ ಸರ್ಕಾರ ಇ.ಡಿ ಮತ್ತು ಐಟಿ, ಸಿಬಿಐ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇವಲ ಕಾಂಗ್ರೆಸ್ ನಾಯಕರನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ: IMA ಹಗರಣದ ಲಿಂಕ್​​​; ಜಮೀರ್ ಮೇಲೆ ED ಅಧಿಕಾರಿಗಳು ದಿಢೀರ್ ದಾಳಿ​​​ ಮಾಡಿದ್ಯಾಕೆ?

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ ಖಾನ್​​​​ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಂಎ ಹಗರಣದ ಆರೋಪಿ ಮನ್ಸೂರ್ ಅಲಿ ಖಾನ್ ವಿಚಾರಣೆ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಹೆಸರು ಉಲ್ಲೇಖಿಸಿದ್ದರು. ಹೀಗಾಗಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಜಮೀರ್​​ ಖಾನ್​​​​​ ಮನೆ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದ್ದಾರೆ.

Source: newsfirstlive.com Source link