ವಿಜಯ್ ​​​​ದೇವರಕೊಂಡ ಜೊತೆಗಿನ ಸೀಕ್ರೆಟ್ ಬಿಚ್ಚಿಟ್ಟ ಕರ್ನಾಟಕ ಕ್ರಶ್​​ ರಶ್ಮಿಕಾ ಮಂದಣ್ಣ

ವಿಜಯ್ ​​​​ದೇವರಕೊಂಡ ಜೊತೆಗಿನ ಸೀಕ್ರೆಟ್ ಬಿಚ್ಚಿಟ್ಟ ಕರ್ನಾಟಕ ಕ್ರಶ್​​ ರಶ್ಮಿಕಾ ಮಂದಣ್ಣ

ದಕ್ಷಿಣ ಸಿನಿ ರಂಗದ ಗ್ಲಾಮರ್​ ಚೆಲುವೆ ರಶ್ಮಿಕಾ ಮಂದಣ್ಣ ಅವರ ಸಿನಿಮಾ ಕೇರಿಯರ್​ ಗ್ರಾಫ್​ ರಾಕೆಟ್​​ನಂತೆ ಚಲಿಸುತ್ತಿದೆ. ದಕ್ಷಿಣ ಚಿತ್ರರಂಗದಲ್ಲಿ ಸ್ಟಾರ್ ನಟರೊಂದಿಗೆ ರೋಮ್ಯಾನ್ಸ್ ಮಾಡಿದ್ದ ಬ್ಯುಟಿ ಸದ್ಯ ಬಾಲಿವುಡ್​ಗೆ ಕಾಲಿಟ್ಟಿದ್ದು, ಕ್ರೇಜಿ ಪ್ರಜೆಕ್ಟ್​​ಗಳೊಂದಿಗೆ ಸಖತ್​ ಸುದ್ದಿಯಲ್ಲಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ಮಾತನಾಡಿರೋ ರಶ್ಮಿಕಾ ಮಂದಣ್ಣ, ತಮ್ಮ ಸಿನಿ ಜರ್ನಿಯ ಕುರಿತ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಅಭಿಮಾನಿಗೆ ನಿರಾಸೆ: 970 ಕಿ.ಮೀ ದೂರದಿಂದ ಬಂದ ಸುಂದರಾಂಗ ಜಾಣ ಹೆದರಿ ವಾಪಸ್

blank

ಟಾಲಿವುಡ್​​ನಲ್ಲಿ ವಿಜಯ್​​ ದೇವರಕೊಂಡರೊಂದಿಗೆ ಗೀತ ಗೋವಿದಂ, ಡೀಯರ್​ ಕಾಮ್ರೇಡ್​​ ಸಿನಿಮಾಗಳಲ್ಲಿ ನಟಿಸಿದ್ದ ಮಂದಣ್ಣ, ಸಿನಿಮಾ ಜರ್ನಿಯ ಆರಂಭದಲ್ಲಿ ವಿಜಯ್​ ದೇವರಕೊಂಡ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದು ಒಳ್ಳೆಯ ಅನುಭವಗಳನ್ನು ನೀಡಿದೆ. ಸುದೀರ್ಘ ಸಮಯ ಎರಡೂ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು ನಮ್ಮ ನಡುವೆ ಉತ್ತಮ ಸ್ನೇಹ ಏರ್ಪಡಲು ಕಾರಣವಾಯ್ತು.. ಆದ್ದರಿಂದ ಇಂಡಸ್ಟ್ರಿಯಲ್ಲಿ ಒಳ್ಳೆಯ ವ್ಯಕ್ತಿ ಯಾರು ಎಂದರೆ ನಾನು ಅವರನ್ನೇ ಆಯ್ಕೆ ಮಾಡುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಮ್ ಚರಣ್ ಜೊತೆ ಸಿನಿಮಾ: ರಶ್ಮಿಕಾ ಮಂದಣ್ಣ ಚಾನ್ಸ್ ಬಾಲಿವುಡ್​ ನಟಿ ಪಾಲಾಯ್ತು

ಇದೇ ವೇಳೆ ತಮ್ಮ ಭಾಷೆಯ ಕುರಿತು ಮಾತನಾಡಿರುವ ಮಂದಣ್ಣ, ನಾನು ಎಲ್ಲೆ ಹೋದರು ನಿಮ್ಮ ಸ್ಲ್ಯಾಂಗ್​ ಬೇರೆ ಇದೇ ಅಂತಾ ಹೇಳ್ತಾರೆ. ನಾನು ಕನ್ನಡ, ತೆಲುಗು, ತಮಿಳು ಈಗ ಹಿಂದಿಯಲ್ಲಿ ಮಾತನಾಡಿದರೂ ನನ್ನ ಉಚ್ಚಾರಣೆ ಬೇರೆ ಇದೆ ಅಂತರೆ ಎಂದು ಹೇಳಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ, ಬಾಲಿವುಡ್​ ಬಿಗ್​​ ಬಿ ಅಮಿತ್ ಬಚ್ಚನ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಬಾಲಿವುಡ್​ನ ಮಿಷನ್​ ಮಜ್ನು, ಗುಡ್​ ಬೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲದೇ ಅಲ್ಲು ಅರ್ಜುನ್​ ಅವರ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ ಸಿನಿಮಾದಲ್ಲೂ ನಟಿಸುತ್ತಿದ್ದು, ಅಡವಾಳ್ಲು ಮಿಕು ಜೋಹರ್ಲು ಎಂಬ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಬ್ಯಾಕ್​ ಟು ಟಾಲಿವುಡ್​; ತೆಲುಗಿನಲ್ಲಿ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾ

Source: newsfirstlive.com Source link