ಮತ್ತೆ ಕನ್ನಡ ಪ್ರೇಮ ಮೆರೆದ ಭಾರತದ ಬ್ರಿಟಿಷ್​ ರಾಯಭಾರಿ.. ಈ ಬಾರಿ ಹೇಳಿದ್ದೇನು?

ಮತ್ತೆ ಕನ್ನಡ ಪ್ರೇಮ ಮೆರೆದ ಭಾರತದ ಬ್ರಿಟಿಷ್​ ರಾಯಭಾರಿ.. ಈ ಬಾರಿ ಹೇಳಿದ್ದೇನು?

ಭಾರತದ ಬ್ರಿಟಿಷ್​ ರಾಯಭಾರಿ ಅಲೆಕ್ಸ್​​ ಎಲ್ಲಿಸ್​ ಬೆಂಗಳೂರಿಗೆ ಬಂದಿದ್ದು, ಈ ವೇಳೆ ಮೈಸೂರು ಮಸಾಲೆ ದೋಸೆ ತಿಂದು ಸಖತ್ತಾಗಿದೆ ಎಂದು ಕನ್ನಡದಲ್ಲಿ ಬರೆದುಕೊಂಡಿರುವದು ಈಗಾಗಲೇ ನಿಮಗೆಲ್ಲ ಗೊತ್ತಿದೆ. ಆದರೆ ಅಲೆಕ್ಸ್​​ ಎಲ್ಲಿಸ್​ ಮತ್ತೆ ಕನ್ನಡ ಪ್ರೇಮವನ್ನು ಮೆರೆದಿದ್ದು ಸಿಎಂ ಬೊಮ್ಮಾಯಿಯವರ ಟ್ವೀಟ್​ಗೆ ಪ್ರತಿಕ್ರಿಯಿಸಿದ ಅವರು ಕನ್ನಡದಲ್ಲೇ ನಮಸ್ಕಾರ ಮುಖ್ಯಮಂತ್ರಿ ಅವರೆ ಎಂದು ಬರೆದುಕೊಂಡಿದ್ದಾರೆ.

ಇಂದು ಸಿಎಂ ಗೃಹ ಕಚೇ.ರಿ ಕೃಷ್ಣಾದಲ್ಲಿ ಮೇಕೆದಾಟು ವಿಚಾರಕ್ಕೆ ಸಂಬಂಧಿಸಿ ಸಭೆಯಲ್ಲಿ ಭಾಗವಹಿಸಿದ ಅವರು ಸಭೆ ಬಳಿಕ ಸಿಎಂ ಅಲೆಕ್ಸ್​​ ಎಲ್ಲಿಸ್ ಅವರಿಗೆ  ಕನ್ನಡದಲ್ಲಿ ನಮಸ್ಕಾರ ಅಲೆಕ್ಸ್​​ ಎಲ್ಲಿಸ್ ಎಂದು ಸಂಬೋಧಿಸಿ ಟ್ವೀಟ್​ ಮಾಡಿದ್ದರು

ಇದನ್ನೂ ಓದಿ: ಮೈಸೂರು ಮಸಾಲೆ ದೋಸೆಗೆ ಬ್ರಿಟಿಷ್​ ರಾಯಭಾರಿ ಫಿದಾ -‘ಸಖತ್​ ಆಗಿದೆ’ ಅಂತ ಕನ್ನಡದಲ್ಲೇ ಟ್ವೀಟ್​​

ಇದರ ಬೆನ್ನಲ್ಲೇ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿದ ಬ್ರಿಟಿಷ್​ ರಾಯಭಾರಿ ‘ನಮಸ್ಕಾರ ಮುಖ್ಯಮಂತ್ರಿ ಅವರೆ‘ ಎಂದು ಸಂಬೋಧಿಸಿ ಟ್ವೀಟ್​ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

Source: newsfirstlive.com Source link