ಪೊಲೀಸರ ಕಂಡು ‘ಬೈಕ್ ಬಿಟ್ಟು’ ಓಡಿ ಹೋದ ವ್ಯಕ್ತಿಗಾಗಿ ತೀವ್ರ ಶೋಧ

ಪೊಲೀಸರ ಕಂಡು ‘ಬೈಕ್ ಬಿಟ್ಟು’ ಓಡಿ ಹೋದ ವ್ಯಕ್ತಿಗಾಗಿ ತೀವ್ರ ಶೋಧ

ಕೊಪ್ಪಳ: ನಗರದಲ್ಲಿ ಬೈಕ್​ ದಾಖಲಾತಿ ಪರಿಶೀಲನೆ ವೇಳೆ ಏಕಾಏಕಿ ಪೊಲೀಸರನ್ನ ಕಂಡ ವ್ಯಕ್ತಿಯೊರ್ವ ಬೈಕ್​ ಬಿಟ್ಟು ಓಡಿ ಹೋಗಿದ್ದು ಪೊಲೀಸರಲ್ಲಿ ಅನುಮಾನ ಮೂಡಿಸಿದ ಘಟನೆ ತಾಲೂಕಿನ ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

blank

ಪೊಲೀಸರು ವಾಹನ ಸವಾರರ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಬೈಕ್​ ಮೇಲೆ ಬಂದ ವ್ಯಕ್ತಿಯೊಬ್ಬ ದೂರದಿಂದಲೇ ಪೊಲೀಸರನ್ನು ಕಂಡು ಓಡಿ ಹೋಗಿದ್ದು ಪೊಲೀಸರಲ್ಲಿ ಅನುಮಾನ ಮೂಡಿಸಿದೆ ಎನ್ನಲಾಗಿದೆ. ಇನ್ನು ಅನುಮಾನಾಸ್ಪದವಾಗಿ ಓಡಿ ಹೋದ ವ್ಯಕ್ತಿಯನ್ನು ಹುಡುಕಲು ಆರಂಭಿಸಿರುವ ಪೊಲೀಸರು, ವ್ಯಕ್ತಿ ಜಮೀನಿನಲ್ಲಿ ಮರೆ ಮಾಚಿಕೊಂಡಿರಬಹುದು ಎಂಬ ಶಂಕೆಯಲ್ಲಿ ಶ್ವಾನ ದಳದ ಸಮೇತ ಹುಡುಕಾಟ ನಡೆಸಿದ್ದಾರೆ.

blank

ಕಳೆದ ಮೂರ್ನಾಲ್ಕು ಗಂಟೆಯಿಂದ ವ್ಯಕ್ತಿಯನ್ನು ಹುಕುತ್ತಿದ್ದರು ವ್ಯಕ್ತಿ ಪತ್ತೆಯಾಗದ ಕಾರಣ ಪೊಲೀಸರು ಹೈರಾಣಾಗಿದ್ದು, ಕೊಪ್ಪಳ ಎಸ್ಪಿ ಟಿ.ಶ್ರೀಧರ,‌‌ ಡಿವೈಎಸ್ಪಿ ಗೀತಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇನ್ನು ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ ಪೊಲೀಸರು ಕಳ್ಳತನ ಮಾಡಿದ್ದ ಬೈಕ್ ನಲ್ಲಿ ಹೊರಟಿದ್ದ ಎಂಬ ಅನುಮಾನ ವ್ಯಕ್ತ ಪಡಿಸಿದ್ದಾರೆ.

 

blank

Source: newsfirstlive.com Source link