ಮಿಡ್​ನೈಟ್​ ಎಲಿಮಿನೇಷನ್​! ಭಾರವಾದ ಮನಸ್ಸಿನಿಂದ ಹೊರ ನಡೆದ ದಿವ್ಯಾ ಸುರೇಶ್​

ಮಿಡ್​ನೈಟ್​ ಎಲಿಮಿನೇಷನ್​! ಭಾರವಾದ ಮನಸ್ಸಿನಿಂದ ಹೊರ ನಡೆದ ದಿವ್ಯಾ ಸುರೇಶ್​

ಬಿಗ್​​ಬಾಸ್​​ ಮನೆ ಖಾಲಿಯಾಗುತ್ತಿದ್ದು, ಹಂತ ಹಂತವಾಗಿ ಮಿಡ್​ನೈಟ್​ ಎಲಿಮಿನೇಷನ್​ ಪ್ರಕ್ರಿಯೆ ಮಾಡಲಾಯಿತು. ಇತ್ತ ಒಂದೊಂದೇ ಹಂತ ಬಂದಂತೆಲ್ಲ ಕಂಟೆಸ್ಟಂಟ್​ಗಳ ಎದೆಯಲ್ಲಿ ಢವಢವ ಶುರುವಾಗಿತ್ತು.

ಹೌದು.. ಮೊದಲು ಅರವಿಂದ್​ ಸೇವ್​ ಆದ್ರು. ಎರಡನೇ ಹಂತದಲ್ಲಿ ವೈಷ್ಣವಿ ಸೇವ್​ ಆದ್ರು. ಇನ್ನೂ ಮೂರನೇಯ ಹಂತದಲ್ಲಿ ಮಂಜು ಉಳಿದುಕೊಂಡ್ರು. ಮಿಡ್​ ನೈಟ್​ ಎಲಿಮಿನೇಶನ್​ನಲ್ಲಿ ಬಾಟಂ ಲೈನ್​ನಲ್ಲಿ ಇದ್ದವರು ದಿವ್ಯಾ ಸುರೇಶ್​, ಪ್ರಶಾಂತ್​, ದಿವ್ಯಾ ಉರುಡುಗ. ಈ ಪೈಕಿ ದಿವ್ಯಾ ಉರುಡುಗ ನಾಲ್ಕನೇ ಹಂತದಲ್ಲಿ ಸೇವ್​ ಆದ್ರು. ಉಳಿದಿದ್ದು ದಿವ್ಯಾ ಸುರೇಶ್​ ಮತ್ತು ಪ್ರಶಾಂತ್​ ಸಂಬರಗಿ.

ಈ ಇಬ್ಬರು ಒಳ್ಳೆಯ ಆಟಗಾರರು, ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಬಂದ್ರು ಕೂಡ ಪ್ರಶಾಂತ್​ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾದ್ರು. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಪ್ರಶಾಂತರ ಫ್ಯಾನ್​ ಫಾಲೋವಿಂಗ್​ ಕೂಡಾ ಜಾಸ್ತಿ ಆಗಿತ್ತು. ಅಷ್ಟೆಯಲ್ಲ ಬಿಗ್​ ಮನೆಯಲ್ಲಿ ಪ್ರಶಾಂತ್​ ಧ್ವನಿ ಜೋರಾದ್ರೆ ಇತ್ತ ಸೋಶಿಯಲ್​ ಮಿಡಿಯಾದಲ್ಲಿ ಅವರ ಪರ ಅಭಿಮಾನಿಗಳು ಬ್ಯಾಟ್​ ಬಿಸುತ್ತಿದ್ರು.

ಇನ್ನು ದಿವ್ಯಾ ಸುರೇಶ್​ ಒಳ್ಳೆಯ ಕಾಂಪಿಟೆಟರ್​. ಅವರು ಆಡುತ್ತಿದ್ದ ಶೈಲಿ, ಗೆಲ್ಲುವ ಹಂಬಲ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಸಖತ್​ ಆಗಿಯೆ ಇತ್ತಾದರೂ ಅವರ ಮೊದಲ ಇನ್ನಿಂಗ್ಸ್​ ಪರ್​ಫಾರ್ಮನ್ಸ್​ ಅವರಿಗೆ ಮೈನಸ್​ ಆಯ್ತು ಅನ್ಸುತ್ತೆ, ಈ ಕಾರಣಕ್ಕೆ ದಿವ್ಯಾ ಸುರೇಶ್​ ಟಾಪ್​ ಸಿಕ್ಸ್​ನಲ್ಲಿಯೇ ಔಟ್​ ಆಗಿದ್ದಾರೆ.

ಹೌದು, ಮಿಡ್​ ನೈಟ್​ ಎಲಿಮಿನೇಷನ್​​ನಲ್ಲಿ ದಿವ್ಯಾ ಸುರೇಶ್​ ಬಿಗ್​ ಬಾಸ್​ ಮನೆಯಿಂದ ಹೊರ ನಡೆದಿದ್ದಾರೆ. ಆದರೆ ಇಲ್ಲೊಂದು ವಿಚಾರ ಹೇಳಲೇಬೇಕು. ಅದೇನಂದ್ರೆ ಸೋಶಿಯಲ್​ ಮಿಡಿಯಾದಲ್ಲಿ ಎಲ್ಲರೂ ದಿವ್ಯಾ ಸುರೇಶ್​ಗೆ ಬಹುಪಾರಕ್​ ಹೇಳ್ತಿದ್ದಾರೆ.​ ಟಾಪ್​ ಫೈನಲ್​​​​ನಲ್ಲಿ ದಿವ್ಯಾ ಇರಬೇಕಿತ್ತು ಅಂತಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Source: newsfirstlive.com Source link