‘ಟಿನಿಂಗ ಮಿಣಿಂಗ ಟಿಶಾ ಟಿಶಾ’ ತಲೆಗೆ ಹುಳ ಬಿಡ್ತಿದೆ ಸಲಗನ ಹೊಸ ಸಾಂಗ್

‘ಟಿನಿಂಗ ಮಿಣಿಂಗ ಟಿಶಾ ಟಿಶಾ’ ತಲೆಗೆ ಹುಳ ಬಿಡ್ತಿದೆ ಸಲಗನ ಹೊಸ ಸಾಂಗ್

ಕಾಚಲಿಗೆ, ಬೆಂಗಳೂರು ದೇಕನಿಕ್​, ಟಿನಿಂಗ ಮಿಣಿಂಗ ಟಿಶಾ ಟಿಶಾ.. ಅಯ್ಯೋ ಇದೇನಂತೀರಾ ಸಲಗ ಸಿನಿಮಾದ ಪ್ರಮೋಷನಲ್ ಸಾಂಗ್ ಇರೋದೆ ಹಿಂಗೆ.. ದುನಿಯಾ ವಿಜಯ್ ಅವರ ಸಲಗ ಸಿನಿಮಾ ಬಳಗ ಒಂದು ಡಿಪರೆಂಟ್ ಹಾಡೊಂದನ್ನ ಪ್ರಮೋಷನಲ್ ಅಸ್ತ್ರವನ್ನಾಗಿಸಿಕೊಂಡಿದೆ.

ಸಿನಿಮಾ ಮಾಡೊದಷ್ಟೆ ಅಲ್ಲ , ಆ ಸಿನಿಮಾವನ್ನ ಜನ ಮಾತನಾಡೋಂಗೆ ಮಾಡಿ ಜನರನ್ನ ಥಿಯೇಟರ್​​ಗೆ ಕರೆತರೋ ಹಾಗೆ ಮಾಡಬೇಕು..ಒಂದು ಸಿನಿಮಾವನ್ನ ಹೇಗೆ ಪ್ರೇಕ್ಷಕರಿಗೆ ಮುಟ್ಟಿಸ ಬೇಕು ಯಾವ ಯಾವ ಮಾರ್ಗದಲ್ಲಿ ಸಿನಿಮಾಗಳನ್ನ ಪ್ರಮೋಷನ್ ಮಾಡಬೇಕು ಅನ್ನೋದನ್ನ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರಿಂದ ಕಲಿಬೇಕು.. ಸಲಗ ಸಿನಿಮಾ ಶುರುವಾದಗಿಂದಲೂ ಏನಾದ್ರೊಂದು ಇಂಟ್ರಸ್ಟಿಂಗ್ ಎಲಿಮೆಂಟ್ಸ್​ಗಳಿಂದ ಚಿತ್ರಪ್ರೇಮಿಗಳ ಚಿತ್ತವನ್ನ ಸೇಳೆಯುತ್ತಲೇ ಇದೆ.. ಈಗ ಪ್ರಮೋಷನಲ್ ಸಾಂಗ್ ಸರದಿ..

 

blank

 

ಪೋಸ್ಟರು, ಟೀಸರು , ಸಾಂಗ್ಸ್​ಗಳಿಂದ ಘಮ ಗಮನ ಸೇಳೆದಿದ್ದ ಸಲಗ ಸಿನಿ ಬಳಗ ಈ ಬಾರಿ ಡಿಫರೆಂಟ್ ಪ್ರಮೋಷನಲ್ ಸಾಂಗ್​​ನಿಂದ ಸದ್ದು ಮಾಡಲು ಪ್ರಾರಂಭಿಸಿದೆ.. ಪಕ್ಕಾ ರಾ ಬೆಂಗಳೂರು ಆಂಡರ್​ವರ್ಲ್ಡ್ ಕಥೆಯನ್ನ ಹೇಳಲು ಹೊರಟ್ಟಿರೋ ನಿರ್ದೇಶಕ ಕಮ್ ನಟ ದುನಿಯಾ ವಿಜಯ್ ಕರ್ನಾಟಕ ಜಾನಪದ ಲೋಕದ ಹಕ್ಕಿಗಳು ಎಂದೇ ಬಣ್ಣಿಸ ಬಹುದಾದ ಸಿದ್ದಿ ಜನಾಂಗದ ಪದಮಾಲೆಯನ್ನ ಸಲಗ ಸಿನಿಮಾ ಪ್ರಮೋಷನಲ್ ಸಾಂಗ್​ನಾಗಿ ಪರಿವರ್ತಿಸಿದ್ದಾರೆ..

ಹೊರ ಬಂತು ‘ಸಲಗ’ ಬಳಗದ ವಿಭಿನ್ನ ಸಾಂಗ್.. ಸಲಗ ಸಾಂಗ್ ಅರ್ಥಾ ಆಗಲ್ಲ..! ಆದ್ರೂ ಮಸ್ತಾಗಿದೆ..

ವಿಜಯ್ ಅಭಿಮಾನಿ ಬಳಗದ ಕುತೂಹಲ ಕುಲುಮೆ ಕಾವು ಹೆಚ್ಚಾಗುತ್ತಿದೆ.. ಕಾರಣ ಸಲಗ ಸಿನಿಮಾದ ಹೊಸ ಪ್ರೊಮೊಷನಲ್ ಸಾಂಗ್​​.. ಒಂದನೇ ಲಾಕ್ ಡೌನ್​​​ಗೂ ಮುನ್ನವೇ ಸಲಗ ಸಿನಿಮಾ ಪೂರ್ತಿ ಕೆಲಸ ಮಾಡಿ ಕೈ ಕಟ್ಟಿಕುಳಿತುಕೊಂಡಿದ್ದ ದುನಿಯಾ ವಿಜಯ್ ಅವರಿಗೆ ಸಿದ್ಧಿ ಜನಾಂಗದ ಹಾಡೊಂದನ್ನ ಕೇಳಿ ನಮ್ಮ ಸಿನಿಮಾದಲ್ಲಿ ಈ ಹಾಡನ್ನ ಬಳಸಿದ್ರೆ ಹೆಂಗಿರುತ್ತೆ ಅಂತ ಯೋಚಿಸಿ , ನಿರ್ಮಾಪಕರನ್ನ ಒಪ್ಪಿಸಿ ಎರಡೆರಡು ಬಾರಿ ರೀ ರೆಕಾರ್ಡಿಂಗ್ ಮಾಡಿಸಿ ಗೆದ್ದಿದ್ದಾರೆ..

blank

ಚರಣ್ ರಾಜ್ ಸಂಗೀತ ಸಂಯೋಜನೆಯ ಈ ಹಾಡನ್ನ ಗಿರಿಜಾ ಸಿದ್ಧಿ , ಗೀತಾ ಸಿದ್ಧಿ , ಚೆನ್ನಕೇಶವ ಬಳಗ ಹಾಡಿದೆ.. ಹಾಡು ಸಡನ್ ಆಗಿ ಅರ್ಥ ಆಗದೆ ಇದ್ರು ಏನೋ ಇದೆ ಅನ್ಸುತೆ.. ಹಾಡಿನ ಲಿರಿಕ್ಸ್ ಕುತೂಹಲ ಮೂಡಿಸುತ್ತೆ , ಚರಣ್ ರಾಜ್ ಮ್ಯೂಸಿಕ್ ಮೈ ಕುಣಿಯುವಂತೆ ಮಾಡುತ್ತೆ.. ಒಟ್ಟಿನಲ್ಲಿ ಸಲಗ ಸಿನಿಮಾದ ಟಿನಿಂಗ ಮಿಣಿಂಗ ಟಿಶಾ ಹಾಡು ಕೇಳುಗ ಕಿವಿ ಪ್ಲಸ್ ಮನಸು ಎರಡನ್ನು ಇಂಪ್ರೇಸ್ ಮಾಡುತ್ತಿದೆ..

blank

ಇಷ್ಟೊತ್ತಿಗಾಗಲೇ ಸಲಗ ಸಿನಿಮಾ ಥಿಯೇಟರ್​​ಗಳಲ್ಲಿ ಲಗ್ಗೆ ಇಟ್ಟು ಕರ್ನಾಟಕ ಮನೆ ಮಾತಾಗಬೇಕಿತ್ತು. ಆದ್ರೆ ಲಾಕ್ ಡೌನ್ ಅಂತೆಲ್ಲ ಆಗಿ ಸಲಗ ಸಿನಿಮಾ ಬಳಗ ರಿಲೀಸ್ ಕನಸು ಮುಂದುಡಿಕೆ ಯಾಗಿದೆ.. ಆದ್ರೆ ಈಗ ಮತ್ತೆ ಸಿನಿಮಾವನ್ನ ರಿಲೀಸ್ ಮಾಡೋ ಪ್ಲಾನ್​​ನಲ್ಲಿ ಸಲಗ ಸಿನಿಮಾ ತಂಡ ಸಿದ್ಧವಾಗಿದೆ. ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ ನಮ್ಮದೆ ಅದ್ಧೂರಿ ಬೆಳ್ಳಿ ಕನ್ನಡ ಪೂಜೆ ಎಂದು ಡಿಸೈಡ್ ಆಗಿದೆ ಚಿತ್ರತಂಡ.. ಸಲಗ ಸಿನಿಮಾ ತಂಡ ಅಂದುಕೊಂಡಂತೆ ಆಗಲಿ.. ಜನಮನವನ್ನ ದುನಿಯಾ ವಿಜಯ್ ಅವರ ಸಲಗ ಸಿನಿಮಾ ಗೆಲ್ಲಲಿ ಎಂದು ಹಾರೈಸೋಣ..

 

Source: newsfirstlive.com Source link