ಮೇಕೆದಾಟು ಯೋಜನೆ ಬಗ್ಗೆ ಸಂಸತ್​​ನಲ್ಲಿ ಧ್ವನಿ ಎತ್ತಿದ ಪ್ರಜ್ವಲ್ ರೇವಣ್ಣ

ಮೇಕೆದಾಟು ಯೋಜನೆ ಬಗ್ಗೆ ಸಂಸತ್​​ನಲ್ಲಿ ಧ್ವನಿ ಎತ್ತಿದ ಪ್ರಜ್ವಲ್ ರೇವಣ್ಣ

ನವದೆಹಲಿ: ಲೋಕಸಭೆ ಪ್ರಶ್ನೋತ್ತರ ಕಲಾಪದ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಅವರು ಇಂದು ಮೇಕೆದಾಟು ಯೋಜನೆ ಈಗಿನ ಸ್ಥಿತಿಗತಿ ಬಗ್ಗೆ ಕೇಂದ್ರ ಸರ್ಕಾರವನ್ನ ಪ್ರಶ್ನೆ ಮಾಡಿದರು.

ಮೇಕೆದಾಟು ಯೋಜನೆ ಶುರು ಮಾಡಲು ಕಾವೇರಿ ನೀರು ನಿರ್ವಹಣಾ ಮಂಡಳಿಯ ಅನುಮತಿ ಕಡ್ಡಾಯವಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ಇನ್ನೂ ಯೋಜನೆಗೆ ಸಿಕ್ಕಿಲ್ಲ, ಯೋಜನೆಗೆ ಅನುಮತಿಯನ್ನು 6 ತಿಂಗಳ ಒಳಗೆ ನೀಡಿಲ್ಲ ಅಂತಾದರೆ ಅದನ್ನ ಕರ್ನಾಟಕವು ಕೇಂದ್ರ ಸಮ್ಮತಿ ನೀಡಿದೆ (deemed approval) ಎಂದೇ ಭಾವಿಸಲಿದೆ ಅಂತಾ ಸಂಸತ್​​ನಲ್ಲಿ ಪ್ರಜ್ವಲ್ ರೇವಣ್ಣ ಹೇಳಿದರು.

ಪ್ರಜ್ವಲ್ ರೇವಣ್ಣರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್.. ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿಗೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಗತ್ಯ ಇದೆ. ಇದು ಅಂತಾರಾಜ್ಯ ಯೋಜನೆ ಆಗಿರೋದ್ರಿಂದ ಎಲ್ಲಾ ರಾಜ್ಯಗಳ ಅನುಮತಿ ಬೇಕೆಂದು ಸಂಸತ್ತಿಗೆ ಕೇಂದ್ರ ಸಚಿವರು ತಿಳಿಸಿದರು.

Source: newsfirstlive.com Source link