ರೆಸ್ಲಿಂಗ್ ಕ್ವಾರ್ಟರ್​ ಫೈನಲ್​ನಲ್ಲಿ ಎಡವಿದ ವಿನೇಶ್​ ಪೋಗಟ್​​​

ರೆಸ್ಲಿಂಗ್ ಕ್ವಾರ್ಟರ್​ ಫೈನಲ್​ನಲ್ಲಿ ಎಡವಿದ ವಿನೇಶ್​ ಪೋಗಟ್​​​

ಟೋಕಿಯೊ ಒಲಿಂಪಿಕ್ಸ್‌ ಕೂಟದಲ್ಲಿ ಭಾರತದ ಪದಕದ ಭರವಸೆಯಾಗಿದ್ದ ಕುಸ್ತಿಪಟು ವಿನೇಶಾ ಪೋಗಟ್ ಕ್ವಾರ್ಟರ್​ ಫೈನಲ್​ನಲ್ಲಿ ಸೋಲುಂಡಿದ್ದಾರೆ. ಇಂದು ಬೆಳಗ್ಗೆ ಮಹಿಳೆಯರ 53 ಕೆ.ಜಿ ಫ್ರೀ-ಸ್ಟೈಲ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ವೀಡನ್‌ನ ಸೋಫಿಯಾ ಮಾಟ್ಸನ್ ವಿರುದ್ಧ 7-1ರಲ್ಲಿ ಪೋಗಟ್​​ ಗೆಲುವು ದಾಖಲಿಸಿದ್ದರು. ಆ ಬಳಿಕ ನಡೆದ ಕ್ವಾರ್ಟರ್​ ಫೈನಲ್​ನಲ್ಲಿ ಬೆಲರೂಸ್‌ನ ವೆನೆಸಾ ಕಾಲಜಿನ್‌ಸ್ಕಾಯಾ ವಿರುದ್ಧ ಸೋಲಿಗೆ ಶರಣಾದರು.

ಈ ಸೋಲಿನೊಂದಿಗೆ ಪದಕದ ಆಸೆ ಬಹುತೇಕ ಕಮರಿದ್ದು, ಒಂದು ವೇಳೆ ಎದುರಾಳಿ ವೆನೆಸಾ ಫೈನಲ್‌ಗೆ ಪ್ರವೇಶಿಸಿದ್ದಲ್ಲಿ ಕಂಚಿನ ಪದಕಕ್ಕಾಗಿ ರಿಪೇಚ್ ಸುತ್ತಿನಲ್ಲಿ ಸ್ಪರ್ಧಿಸುವ ಅವಕಾಶ ಪೋಗಟ್​ಗೆ ಲಭ್ಯವಾಗಲಿದೆ. ಇನ್ನು 19 ವರ್ಷದ ಅನ್ಶು ಮಲಿಕ್ ಹೋರಾಟವೂ ಕೂಟದಲ್ಲಿ ಅಂತ್ಯಕಂಡಿದೆ. ಮಹಿಳೆಯರ 57 ಕೆ.ಜಿ ರಿಪೇಚ್ ಸುತ್ತಿನಲ್ಲಿ ರಷ್ಯಾದ ವಲೆರಿಯಾ ಕೊಬ್ಲೊವಾ ವಿರುದ್ಧ ಅನ್ಶು ಮಲಿಕ್ ಸೋಲು ಕಂಡರು.

Source: newsfirstlive.com Source link