ಜಮೀರ್​​ ಫ್ಲಾಟ್​​ ಕೀಗಾಗಿ ಆರು ಗಂಟೆಗಳಿಂದ ಕಾಯುತ್ತಿರುವ ED ಅಧಿಕಾರಿಗಳು

ಜಮೀರ್​​ ಫ್ಲಾಟ್​​ ಕೀಗಾಗಿ ಆರು ಗಂಟೆಗಳಿಂದ ಕಾಯುತ್ತಿರುವ ED ಅಧಿಕಾರಿಗಳು

ಬೆಂಗಳೂರು: ಐಎಂಎ ಹಗರಣದ ವಿಚಾರಣೆ ವೇಳೆ ಪ್ರಮುಖ ಆರೋಪಿ ಮನ್ಸೂರ್ ಅಲಿ ಖಾನ್ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​​ ಹೆಸರು ಉಲ್ಲೇಖಿಸಿದ್ದರು. ಹೀಗಾಗಿ ಇಂದು ಇಡಿ ಅಧಿಕಾರಿಗಳು ಜಮೀರ್ ಅಹ್ಮದ್​ ಖಾನ್​​ಗೆ ಸೇರಿದ​​​​ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ನಿವಾಸ ಸೇರಿದಂತೆ ಹಲವು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಇನ್ನು, ಸದಾಶಿವ ನಗರದ ನಿವಾಸ ಮತ್ತು ಕಚೇರಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಸತತ ಆರು ಗಂಟೆಗಳಿಂದ ಕೀಗಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ರಂಕಾ ಎನ್ ಕ್ಲೇವ್ ಅಪಾರ್ಟ್ಮೆಂಟ್​​ನಲ್ಲಿರುವ ಫ್ಲಾಟ್​​ ಕೀಗಾಗಿ ಆರು ಗಂಟೆ ಕಾದು ಅಧಿಕಾರಿಳು ಸುಸ್ತಾಗಿದ್ದಾರೆ.

ಇದನ್ನೂ ಓದಿ: ‘ಭ್ರಷ್ಟಾಚಾರ ಆರೋಪಿ ಜೊಲ್ಲೆಗೆ ಸಚಿವ ಸ್ಥಾನ.. ಜನಸೇವಕ ಜಮೀರ್​ಗೆ ED ದಾಳಿ’ -ಅಭಿಮಾನಿಗಳ ಆಕ್ರೋಶ

ಇನೋವಾ ಕಾರಿನಲ್ಲಿ ಬಂದಿರುವ ನಾಲ್ವರು ಅಧಿಕಾರಿಗಳು ಮತ್ತು ಇಬ್ಬರು ಸಿಆರ್​ಪಿಎಫ್​​​ ಯೋಧರು ಕಾದು ಕುಳಿತಿದ್ದಾರೆ. ಜಮೀರ್​ ಅಹ್ಮದ್​ ಖಾನ್​​ ಸುಮಾರು ಆರು ಗಂಟೆಗಳಿಂದ ಫ್ಲಾಟ್​​ ಕೀ ನೀಡದೆ ಅಧಿಕಾರಿಗಳನ್ನು ಕಾಯಿಸುತ್ತಿರುವುದರ ಬಗ್ಗೆ ಹಲವು ಅನುಮಾನಗಳು ಶುರುವಾಗಿವೆ.

Source: newsfirstlive.com Source link