ಮತ್ತೆ ಬರ್ತಿದೆ ಡಾನ್ಸ್​ ಡಾನ್ಸ್​ ಶೋ..ಲಾಂಚಿಂಗ್​ ಡೇಟ್​ ಫಿಕ್ಸ್.. ಜಡ್ಜಸ್​ ಯಾರು ಗೊತ್ತಾ?

ಮತ್ತೆ ಬರ್ತಿದೆ ಡಾನ್ಸ್​ ಡಾನ್ಸ್​ ಶೋ..ಲಾಂಚಿಂಗ್​ ಡೇಟ್​ ಫಿಕ್ಸ್.. ಜಡ್ಜಸ್​ ಯಾರು ಗೊತ್ತಾ?

ಸ್ಟಾರ್ ಸುವರ್ಣದಲ್ಲಿ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ಬರ್ತಿದೆ ಅಂತಾ ನಾವು ನಿಮ್ಗೇ ಮೊದ್ಲೇ ಹೇಳಿದ್ವಿ. ಆ ಶೋನ ಪ್ರೊಮೊ ಕೂಡಾ ರಿಲೀಸ್​ ಆಗಿದ್ದು, ಬಿಗ್​ಬಾಸ್​ ಸೀಸನ್​ 7ರ ವಿನ್ನರ್​ ಶೈನ್​ ಶೆಟ್ಟಿ ಈ ಶೋ ಹೋಸ್ಟ್​ ಮಾಡ್ತಿದ್ದಾರೆ. ಆದ್ರೀಗಾ ಆ ಶೋನ ಜಡ್ಜ್‌​ ಯಾರಾಗಲಿದ್ದಾರೆ ಗೊತ್ತಾ..?

ಹೌದು ಡ್ಯಾನ್ಸ್​ ಡ್ಯಾನ್ಸ್​ ಶೋ ಬಗ್ಗೆ ನಿಮಗೆ ನಾವು ಹೆಚ್ಚು ಹೇಳೋದೆ ಬೇಡ.. ​ ಆಡಿಶನ್ ಪ್ರೊಸೆಸ್‌ ಕೂಡ ನಡೀತಿದೆ. ಸ್ಪರ್ಧಿಗಳು ಸ್ಟ್ರಾಂಗ್​ ಇದ್ಮೇಲೆ ಜಡ್ಜಸ್​ಗಳು ಕೂಡಾ ಹಾಗೆ ಇರ್ಬೆಕು ಅಲ್ವಾ.. ಈ ಶೋಗೆ ಕನ್ನಡದ ನಟ ಮಾತ್ರವಲ್ಲ ಸೂಪರ್​ ಡ್ಯಾನ್ಸ​ರ್​ ಡೈನಾಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವ್​ರಾಜ್ ಜಡ್ಜ್​ ಸೀಟ್​ ಅಲಂಕರಿಸಲಿದ್ದಾರೆ. ಇನ್ನೂ ಡ್ಯಾನ್ಸ್​ ಡ್ಯಾನ್ಸ್​ ಶೋನಾ ಎರಡು ಜಡ್ಜ್​ಗಳ ​ ಸೀಟ್​ಗಳನ್ನು ಯಾರು ಅಲಂಕರಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲು ಮನೆ ಮಾಡಿತ್ತು.. ಇದೀಗ ನಿಮ್ಮ ಕ್ಯೂರಿಯೊಸಿಟಿಗೆ ಬ್ರೇಕ್​ ಬಿದ್ದಿದೆ.. ಯಾಕಂದ್ರೆ ಈ ಶೋನ ಜಡ್ಜಸ್​ ಯಾರಾಗ್ತಾರೆ ಎಂಬ ಮಾಹಿತಿ ಸಿಕ್ಕಿದೆ.

ಹೌದು ಡ್ಯಾನ್ಸ್​ ಡ್ಯಾನ್ಸ್​ ಶೋಗೆ ಕನ್ನಡ ಇಂಡಸ್ಟ್ರಿಯ ಸೂಪರ್​ ಕೊರಿಯೋಗ್ರಫರ್​ ಹಾಗೂ ನಿದೇರ್ಶಕರಾಗಿರುವ ಹರ್ಷ ಈ ಶೋಗೆ ಜಡ್ಜ್​ ಆಗಿ ಬರಲಿದ್ದಾರೆ.. ಹರ್ಷ ಅವರು ಎಷ್ಟೊ ಸ್ಟಾರ್​ ನಟರಿಗೆ ಕೊರಿಯೊಗ್ರಫಿ ಮಾಡಿದ್ದಾರೆ.. ಹಾಗೂ ಹರ್ಷ ಅವರ ಕೆಳಗೆ ಡ್ಯಾನ್ಸ್​ ಕಲಿತ ಎಷ್ಟೊ ಜನ ಇಂದು ಕೊರಿಯೊಗ್ರಾಫರ್​ಗಳಾಗಿ ಹೊರಹೊಮ್ಮಿದ್ದಾರೆ..

ಇನ್ನೂ ಮತ್ತೊಬ್ಬ ಜಡ್ಜ್​ ಯಾರು ಅಂದ್ರೆ.. ಇಬ್ಬರು ಮೇಲ್​ ಜಡ್ಜ್​ಗಳು ಇದ್ದಮೇಲೆ ಫಿಮೇಲ್​ ಜಡ್ಜ್​ ಇಲ್ಲಾ ಅಂದ್ರೆ ಹೇಗೇ.. ಒಂದು ಕಾರ್ಯಕ್ರಮ ಫುಲ್​ ಆಗಲ್ಲಾ.. ಡ್ಯಾನ್ಸ್​ ಡ್ಯಾನ್ಸ್​ ಶೋನಾ ಆ ಗಾರ್ಜಿಯಸ್​ ಜಡ್ಜ್​ ಈ ಮುಂಚೆ ಸಾಕಷ್ಟು ಸಿನಿಮಾಗಳಲ್ಲಿ ರಂಜಿಸಿರೋ,
ಕನ್ನಡದ ಹುಡುಗಿ ಹರಿಪ್ರಿಯಾ ಕೂಡ ಇದ್ದಾರೆ.  ಡ್ಯಾನ್ಸ್​ ಡ್ಯಾನ್ಸ್​ ಶೋ ಇದೇ ಅಗಸ್ಟ್​​ 20 ರಂದು ಎಲ್ಲರನ್ನು ಕುಣಿಸಲು ಸಜ್ಜಾಗಿದ್ದು, ಈಗಾಲೆ ಸಾಕಷ್ಟು ನೀರಿಕ್ಷೆ ಮೂಡಿಸಿದೆ.

Source: newsfirstlive.com Source link