ಉದಯ ಟಿವಿಯಲ್ಲಿ ಮತ್ತೆ ಬರ್ತಿದ್ದಾಳೆ ಕಾದಂಬರಿ..ನಾಯಕಿ ಯಾರು ಗೊತ್ತಾ..?

ಉದಯ ಟಿವಿಯಲ್ಲಿ ಮತ್ತೆ ಬರ್ತಿದ್ದಾಳೆ ಕಾದಂಬರಿ..ನಾಯಕಿ ಯಾರು ಗೊತ್ತಾ..?

ಕಾದಂಬರಿ…ಸೀರಿಯಲ್‌ ವೀಕ್ಷಕರು ಈ ಹೆಸರು ಮರೆಯೋದುಂಟೆ.. ನೋ ವೇ ಚಾನ್ಸೇ ಇಲ್ಲ.. ಯಾಕಂದ್ರೆ, ಇದು ಹಿಸ್ಟರಿ ಕ್ರಿಯೇಟ್ ಮಾಡಿದ ಲಾಂಗ್‌ ರನ್ನಿಂಗ್‌ ಸೀರಿಯಲ್. ಕಾದಂಬರಿ..ಸೀರಿಯಲ್‌ ದುನಿಯಾದಲ್ಲಿ ಅಚ್ಚಳಿಯದೇ ಉಳಿದಿರೋ ಧಾರಾವಾಹಿ. ಶ್ವೇತಾ ಚೆಂಗಪ್ಪ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಧಾರಾವಾಹಿ. ಇವತ್ತಿಗೂ ಶ್ವೇತಾ ಚೆಂಗಪ್ಪ ಅವರನ್ನ ಕಾದಂಬರಿ ಅಂತಾ ಕರೆಯೋ ಅದೆಷ್ಟೋ ಜನರಿದ್ದಾರೆ.

ಹೊಸ ವಿಷಯ ಏನಂದ್ರೆ, ಇದೇ ಹೆಸರಿನಲ್ಲಿ ಉದಯ ಟಿವಿಯಲ್ಲಿ ಹೊಸ ಸೀರಿಯಲ್ ಲಾಂಚ್ ಆಗ್ತಿದೆ. ಈ ಬಾರಿ ಕಾದಂಬರಿಯಾಗಿ ನಿಮ್ಮ ಮನೆ ಮನಗಳಲ್ಲಿ ರಾರಾಜಿಸಲು ಬರ್ತಿರೋದು ಯಾರು ಹೇಳಿ..? ಪಾರುವಿನ ಜನನಿ. ಹೌದು, ಪಾರು ಸೀರಿಯಲ್‌ನಲ್ಲಿ ಜನನಿ ಪಾತ್ರ ಮಾಡ್ತಿರೋ ಪವಿತ್ರಾ ನಾಯಕ್​ ಸ್ವಲ್ಪ ದಿನಗಳಲ್ಲೇ ಕಾದಂಬರಿ ಯಾಗಲಿದ್ದಾರೆ. ಗಣಪತಿ ಭಟ್ ಅವರ ಪ್ರೊಡಕ್ಷನ್‌ನಲ್ಲಿ ಲಾಂಚ್ ಆಗ್ತಿರೋ ಕಾದಂಬರಿ ಧಾರಾವಾಹಿಯ ಲೀಡ್‌ಗೆ ಪವಿತ್ರಾ ನಾಯಕ್​ ಆಯ್ಕೆಯಾಗಿದ್ದಾರೆ. ಈ ವಿಚಾರವನ್ನ ಸ್ವತಃ ಅವರೇ ನ್ಯೂಸ್‌ಫಸ್ಟ್‌ಗೆ ಕನ್ಫರ್ಮ್ ಮಾಡಿದ್ದಾರೆ.

blank

ಇದೀಗ ವಿಶೇಷ ಅಂದ್ರೆ ಕಾದಂಬರಿ ಧಾರಾವಾಹಿಯ ಪ್ರೋಮೋ ಕೂಡಾ ರಿಲೀಸ್​ ಆಗಿದ್ದು ತುಂಬಾನೆ ವಿಭಿನ್ನವಾಗಿ ಮೂಡಿ ಬಂದಿದೆ..
ಸದ್ಯ ಶೂಟಿಂಗ್​ನಲ್ಲಿ ಬ್ಯೂಸಿಯಾಗಿರುವ ಕಾದಂಬರಿ ದಾರಾವಾಹಿ ಇನ್ನೇನು ಕೆಲವೆ ದಿನಗಳಲ್ಲಿ ನಿಮ್ಮ ಮುಂದೆ ಬರಲಿದೆ.. ​ಪ್ರತಿ ದಿನ ಮಧ್ಯಾಹ್ನ ಈ ಧಾರಾವಾಹಿ ಪ್ರಸಾರವಾಗಲಿದೆ. ಜನನಿ ಮೂಲಕ ಮನೆ ಮಾತಾಗಿರೋ ಪವಿತ್ರಾಗೆ ನಮ್ಮ ಕಡೆಯಿಂದ ಆಲ್ ದಿ ವೆರಿ ಬೆಸ್ಟ್‌.

blank

Source: newsfirstlive.com Source link