IMA ವಂಚನೆ ಕೇಸ್​ ಆರೋಪಿ ಮನ್ಸೂರ್​​ ಜೊತೆ ಜಮೀರ್​​​ ನಡೆಸಿದ್ದ ವ್ಯವಹಾರ ಎಷ್ಟು ಗೊತ್ತಾ?

IMA ವಂಚನೆ ಕೇಸ್​ ಆರೋಪಿ ಮನ್ಸೂರ್​​ ಜೊತೆ ಜಮೀರ್​​​ ನಡೆಸಿದ್ದ ವ್ಯವಹಾರ ಎಷ್ಟು ಗೊತ್ತಾ?

ಬೆಂಗಳೂರು: ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​​ ಖಾನ್​​ ಐಎಂಎ ವಂಚನೆ ಪ್ರಕರಣ ಪ್ರಮುಖ ಆರೋಪಿ ಮನ್ಸೂರ್​ ಅಲಿ ಖಾನ್​​ ಜೊತೆಗೆ ನಡೆಸಿರುವ ವ್ಯವಹಾರದ ಕುರಿತು ಎಕ್ಸ್​ಕ್ಲೂಸಿವ್​​​ ಮಾಹಿತಿ ಲಭ್ಯವಾಗಿದೆ. ಈ ಕುರಿತು ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳ ಮುಂದೆ ಮನ್ಸೂರ್​​ ಅಲಿ ಖಾನ್​​ ಆಪ್ತ ಎನ್ನಲಾದ ನಿಜಾಮುದ್ದೀನ್ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸಿಬಿಐ ಅಧಿಕಾರಿಗಳ ಮುಂದೆ 161 ಹೇಳಿಕೆಗಳನ್ನು ದಾಖಲಿಸಿರುವ ನಿಜಾಮುದ್ದೀನ್​​, ಜಮೀರ್​​ ಅಹ್ಮದ್​ ಖಾನ್​​ 14 ಸಾವಿರ ಸ್ಕ್​ವೇಯರ್​ ಫೀಟ್ ಸೈಟ್​ ಅನ್ನು ಮನ್ಸೂರ್​ ಖಾನ್​​ಗೆ ಬರೋಬ್ಬರಿ 15 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ನಾನು ಮನ್ಸೂರ್​ ಸೂಚನೆಯಂತೆ ಜಮೀರ್​​ಗೆ 15 ಕೋಟಿ ರೂಪಾಯಿ ನೀಡಿದ್ದೆ ಎಂದು ಕೂಡ ನಿಜಾಮುದ್ದೀನ್​​​ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಮೀರ್​​ ಫ್ಲಾಟ್​​ ಕೀಗಾಗಿ ಆರು ಗಂಟೆಗಳಿಂದ ಕಾಯುತ್ತಿರುವ ED ಅಧಿಕಾರಿಗಳು

ಇದುವರೆಗೂ ಮನ್ಸೂರ್​​ನಿಂದ ಜಮೀರ್​​ ಖಾನ್​ ಒಟ್ಟು 34.65 ಕೋಟಿ ರೂಪಾಯಿ ಪಡೆದಿದ್ದರು ಎಂದು ನಿಜಾಮುದ್ದೀನ್​​ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಸೈಯ್ಯದ್ ಮುಜಾಯಿದ್ದೀನ್​​​ ಮೂಲಕ ಜಮೀರ್​​ ಹಣ ವರ್ಗಾವಣೆ ಆಗಿದ್ಯಾ? ಎಂಬ ಪ್ರಶ್ನೆಗಳು ಅನುಮಾನಗಳು ಹುಟ್ಟಿಕೊಂಡಿವೆ.

Source: newsfirstlive.com Source link