ಒಲಿಂಪಿಕ್​ನಲ್ಲಿ ಮತ್ತೊಂದು ಪದಕ; ಕುಸ್ತಿಯಲ್ಲಿ ಬೆಳ್ಳಿಗೆ ಮುತ್ತಿಟ್ಟ ರವಿ

ಒಲಿಂಪಿಕ್​ನಲ್ಲಿ ಮತ್ತೊಂದು ಪದಕ; ಕುಸ್ತಿಯಲ್ಲಿ ಬೆಳ್ಳಿಗೆ ಮುತ್ತಿಟ್ಟ ರವಿ

ನವದೆಹಲಿ: ಟೋಕಿಯೋ ಒಲಿಂಕ್​​ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಬಂದಿದ್ದು, ಕುಸ್ತಿ ಫೈನಲ್ ಪಂದ್ಯದಲ್ಲಿ ರವಿ ಕುಮಾರ್ ದಹಿಯಾ ಅವರು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ನಲ್ಲಿ ಭಾರತದ ಮುಡಿಗೆ 5ನೇ ಪದಕ ಲಭ್ಯವಾಗಿದೆ.

ವಿಶ್ವದ ನಾಲ್ಕನೇ ಶ್ರೇಯಾಂಕಿತ ರವಿಕುಮಾರ್‌ ದಹಿಯಾ, 57 ಕೆ.ಜಿ ವಿಭಾಗದ ಕುಸ್ತಿ ಫೈನಲ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.  ಟೋಕಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ಕುಸ್ತಿಪಟು ರವಿ ಕುಮಾರ್‌, ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿ ಪಟ್ಟಿದ್ದಾರೆ.

ಪುರುಷರ 57 ಕೆಜಿ ಫ್ರೀ ಸ್ಟೈಲ್‌ ವಿಭಾಗದ ಫೈನಲ್​ನಲ್ಲಿ ರಷ್ಯಾದ ಝವುರ್ ಉಗುಯೆವ್‌ ಎದುರು ಸೆಣಸಾಡಿದ ರವಿ ಕುಮಾರ್, 4-7 ಅಂತರದಲ್ಲಿ ಸೋತು ನಿರಾಸೆ ಮೂಡಿಸಿದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಸುಶೀಲ್‌ ಕುಮಾರ್‌ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು. ಈಗ ರವಿ ಕುಮಾರ್‌ ಈ ಪಟ್ಟಿಗೆ ಸೇರ್ಪಡೆ ಆಗಿದ್ದಾರೆ. ತಾವು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ಪ್ರಯತ್ನದಲ್ಲೇ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟಿದ್ದಾರೆ.

Source: newsfirstlive.com Source link