ಪ್ರಜ್ವಲ್ ರೇವಣ್ಣ ಪ್ರಶ್ನೆ; ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಅಗತ್ಯ ಎಂದ ಕೇಂದ್ರ

ಪ್ರಜ್ವಲ್ ರೇವಣ್ಣ ಪ್ರಶ್ನೆ; ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಅಗತ್ಯ ಎಂದ ಕೇಂದ್ರ

ನವದೆಹಲಿ: ಮೇಕೆದಾಟು ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಮ್ಮತಿ ಅಗತ್ಯ ಅಂತಾ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಹೇಳಿದೆ.

ಸಂಸತ್​ನ ಪ್ರಶ್ನೋತ್ತರ ಕಲಾಪದಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು, ಮೇಕೆದಾಟು ಯೋಜನೆಯ ಸ್ಥಿತಿಗತಿ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರ ನೀಡಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮೇಕೆದಾಟು ಯೋಜನೆಗೆ ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿಗೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಗತ್ಯ ಇದೆ. ಇದು ಅಂತಾರಾಜ್ಯ ಯೋಜನೆ ಆಗಿರೋದ್ರಿಂದ ಎಲ್ಲಾ ರಾಜ್ಯಗಳ ಅನುಮತಿ ಬೇಕೆಂದು ಸಂಸತ್ತಿಗೆ ಕೇಂದ್ರ ಸಚಿವರು ತಿಳಿಸಿದ್ದಾರೆ.

blank

ಕರ್ನಾಟಕ ಸರ್ಕಾರ ಯೋಜನೆ ಕೈಗೆತ್ತಿಕೊಳ್ಳುವ ಸಂಬಂಧ ಡಿಪಿಆರ್​ (ಸಮಗ್ರ ಯೋಜನೆಯ) ವರದಿ ನೀಡಿದೆ. ಈ ವರದಿಗೆ ಕೇಂದ್ರ ಸರ್ಕಾರ ಕೆವಲ ತಾತ್ವಿಕ ಒಪ್ಪಿಗೆಯನ್ನ ಮಾತ್ರ ನೀಡಿದೆ. ಆದರೆ ಕಾವೇರಿ ಕಣಿವೆಯ ರಾಜ್ಯಗಳಾದ ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಅನುಮತಿಯ ಅಗತ್ಯ ಇದೆ. ಕಾವೇರಿ ನೀರು ನಿರ್ವಹಣಾ ಮಂಡಳಿಯ ಅನುಮತಿ ಕೂಡ ಕಡ್ಡಾಯ. ಒಂದು ವೇಳೆ ಸಮ್ಮತಿ ಇದೆ ಎಂದು ಕರ್ನಾಟಕ ಭಾವಿಸಿದರೂ ಅದನ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಿಳಿಸಬೇಕು ಜೊತೆಗೆ ಪ್ರಾಧಿಕಾರದ ಅನುಮತಿಯು ಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಬಗ್ಗೆ ಸಂಸತ್​​ನಲ್ಲಿ ಧ್ವನಿ ಎತ್ತಿದ ಪ್ರಜ್ವಲ್ ರೇವಣ್ಣ

Source: newsfirstlive.com Source link