ಬಿಗ್‌ಬಾಸ್​: ಲ್ಯಾಗ್‌ ಮಂಜು ಕ್ಷಮೆ ಕೇಳಿ ಕಣ್ಣೀರಿಟ್ಟ ದಿವ್ಯಾ ಹೇಳಿದ್ದೇನು?

ಬಿಗ್‌ಬಾಸ್​: ಲ್ಯಾಗ್‌ ಮಂಜು ಕ್ಷಮೆ ಕೇಳಿ ಕಣ್ಣೀರಿಟ್ಟ ದಿವ್ಯಾ ಹೇಳಿದ್ದೇನು?

ಬಿಗ್‌ಬಾಸ್​ ಸೀಸನ್​ 8 ಸಾಕಷ್ಟು ವಿಶೇಷತೆಗಳಿಂದ ಕೂಡಿತ್ತು, ಅದ್ರಲ್ಲಿ ಮುಖ್ಯವಾಗಿ ಕರೊನಾ ಸಂಕಷ್ಟದಲ್ಲಿ ಬಿಗ್​ ಬಾಸ್​ ಶೋವನ್ನೆ ಅರ್ಧಕ್ಕೆ ನಿಲ್ಲಿಸಿ ಮನೆಯವರೆಲ್ಲಾ ಹೊರ ಬಂದಿದ್ರು.. ಇದಾದ್ಮೇಲಿನ ಕತೆನೇ ಬೇರೆ. 43 ದಿನಗಳ ಗ್ಯಾಪ್​ನ ನಂತ್ರ ಮತ್ತೆ ಸೆಕೆಂಡ್​ ಇನ್ನಿಂಗ್ಸ್​ ಶುರುವಾಗುವದರ ಜೊತೆಗೆ ಅಸಮಾಧಾನ, ವೈಮನಸ್ಸುಗಳು ಶುರುವಾದ್ವು..

blank

ಹೊರಗಡೆ ಹೋಗಿ ಬಿಗ್​ ಮನೆಯ ಒಂದೊಂದೇ ಸನ್ನಿವೇಶಗಳನ್ನ ನೋಡಿದ್ಮೇಲೆ ಯಾರದು ತಪ್ಪು, ಯಾವುದಕ್ಕೆ ಯಾವ ಅರ್ಥ ಕ್ರಿಯೇಟ್​ ಆಗಿದೆ ಅಂತಾ ತಿಳ್ಕೊಂಡ ಸ್ಪರ್ಧಿಗಳಿಗೆ ಇದು ಪ್ಲಸ್​, ಮೈನಸ್​ ಎರಡು ಆಗಿದ್ದು ನೀವೇಲ್ಲ ನೋಡಿದ್ದಿರಾ..ಅದ್ರಲ್ಲಿ ಮುಖ್ಯವಾಗಿ ದಿವ್ಯಾ ಸುರೇಶ್​, ಮಂಜು ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ವು.

ಇನ್ನೂ ಇದೇ ವಿಷಯವಾಗಿ ಮಂಜು ದಿವ್ಯಾ ಸುರೇಶರನ್ನ ಆದಷ್ಟು ಅವೈಡ್​ ಮಾಡಿದ್ರು, ಇದು ಸಾಕಷ್ಟು ಬಾರಿ ದಿವ್ಯಾ ಸುರೇಶರ ಕಣ್ಣೀರಿಗೆ ಕಾರಣವಾಗಿತ್ತು. ಇದ್ರಿಂದೆಲ್ಲ ಹೊರ ಬಂದ ದಿವ್ಯಾ ಆಟದ ಕಡೆ ಹೆಚ್ಚು ಆಸಕ್ತಿ ವಹಿಸಿ ಫಿಮೇಲ್​ ಕಂಟೆಸ್ಟಂಟ್ಸ್​ಗಳಲ್ಲಿಯೇ ಸ್ಟ್ರಾಂಗ್​ ಎನಿಸಿಕೊಂಡ್ರು. ಟಾಸ್ಕ್​ಗಳಲ್ಲಿ ಚಾಂಪ್​ ಎನಿಸಿಕೊಂಡಿದ್ದ ಅರವಿಂದ್​ಗೆ ಎಷ್ಟೋ ಸಾರಿ ಟಕ್ಕರ್​ ನೀಡಿದ್ರು.

blank

ಇದನ್ನೂ ಓದಿ:ಮಿಡ್​ನೈಟ್​ ಎಲಿಮಿನೇಷನ್​! ಭಾರವಾದ ಮನಸ್ಸಿನಿಂದ ಹೊರ ನಡೆದ ದಿವ್ಯಾ ಸುರೇಶ್​ 

ಇಷ್ಟೆಲ್ಲಾ ಬದಲಾವಣೆಗಳು ನಡೆದ್ರೂ ಕೂಡಾ ದಿವ್ಯಾಗೆ ಆ ಒಂದು ನೋವು ಕಾಡುತ್ತಲೆ ಇತ್ತು. ತಮ್ಮಿಂದಲೇ ಮಂಜುವಿನ ಆಟಕ್ಕೆ ತೊಂದ್ರೆ ಆಯ್ತು, ತುಂಬಾ ಪೊಸೆಸಿವ್​ ಆಗಿ ವರ್ತಿಸಿ ಬಿಟ್ಟೆ ಅಂತಾ ಯಾವಾಗಲು ಕಣ್ಣೀರಿಡುತ್ತಿದ್ದ ದಿವ್ಯಾ ಸುರೇಶ್​, ಬಿಗ್​​ ಮನೆಯಲ್ಲಿ ಯಾವುದಾದ್ರು ಈಡೇರದ ವಿಶ್​ ಇದ್ರೇ ಕೇಳಬಹುದು ಎಂದು ಬಿಗ್​​ ಬಾಸ್​ ಹೇಳಿದ್ದೆ ತಡ, ದಿವ್ಯಾ ಸ್ನೇಹಿತರ ದಿನಕ್ಕೆ ಮಂಜುಗೆ ಒಂದೊಳ್ಳೆ ಅರೇಂಜ್​ಮೆಂಟ್​ ಮಾಡಿಕೊಡಿ ಎಂದಿದ್ರು.

ಬಿಗ್​ ಬಾಸ್​ ದಿವ್ಯಾರ ವಿಶ್​ ಈಡೇರಿಸಿದ್ದು, ಇಬ್ಬರಿಗೂ ಬ್ಯೂಟಿಫುಲ್​ ಮೂಮೆಂಟ್​ ಕ್ರಿಯೇಟ್​ ಮಾಡಿ ಕೊಟ್ಟಿದ್ರು ಬಿಗ್​ ಬಾಸ್​.
ಇದೇ ಸಂದರ್ಭದಲ್ಲಿ ದಿವ್ಯಾ ಸುರೇಶ್‌ ತಮ್ಮ ಮನದಾಳದ ನೋವನ್ನ ಹಂಚಿಕೊಂಡ್ರು. ನನ್ನಿಂದಾಗಿ ನಿನ್ನ ಆಟಕ್ಕೆ ತೊಂದ್ರೆ ಆಯ್ತು, ಆದ್ರೆ ನಾನು ಯಾವತ್ತು ನಿಂಗೆ ಕೆಟ್ಟದ್ದಾಗಲಿ ಅಂತಾ ಬಯಸಿಲ್ಲ. ಬಿಗ್​ ಬಾಸ್​ ಮನೆಯಲ್ಲಿ ನಂಗೆ ಸಿಕ್ಕ ಬೆಸ್ಟೆಸ್ಟ್​ ಗಿಫ್ಟ್​ ನೀನು. ನಾನು ನಿಂಗೆ ತುಂಬಾ ದಿನದಿಂದ ಕ್ಷಮೆ ಕೇಳ್ಬೇಕು ಅನ್ಕೊಂಡಿದ್ದೆ ಆದ್ರೆ ಆಗಿರಲಿಲ್ಲ. ಅದಕ್ಕಾಗಿಯೇ ಈ ಅರೇಂಜ್​ಮೆಂಟ್ಸ್​. ಒಂದು ವೇಳೆ ಈ ಮೂಮೆಂಟ್​ ಕ್ರಿಯೇಟ್​ ಆಗಿರಲಿಲ್ಲ ಅಂದ್ರೆ ಫಿನಾಲೆ ವೇದಿಕೆಯಲ್ಲಿ ನಿನ್ನ ಕ್ಷಮೆ ಕೇಳ್ತಿದ್ದೆ ಅಂತಾ ಬಿಕ್ಕಳಿಸಿದ್ರು ದಿವ್ಯಾ…

blank

ಇದೆಲ್ಲವನ್ನ ನೋಡಿದ ಮಂಜುಗೆ ಮಾತು ಹೊರಡಲಿಲ್ಲ. ನಿನ್ನ ಜೊತೆ ಯಾವಗಲೂ ನಿಲ್ಲುತ್ತೇನೆ. ಏನೇ ಕಷ್ಟಬಂದ್ರು ನನ್ನ ಶಕ್ತಿ ಮೀರಿ ನಿಂಗೆ ಆಸರೆ ನೀಡಲು ಪ್ರಯತ್ನಿಸುತ್ತೇನೆ ಎನ್ನುವಾಗ ಮಂಜು ಕಣ್ಣು ತುಂಬಿತ್ತು.

ಇನ್ನೂ ಮಂಜು ಯಾವತ್ತಿಗೂ ನನ್ನ ಸ್ಪೂರ್ತಿ. ನನ್ನ ಬೆಸ್ಟ್​ ಫ್ರೇಂಡ್​ ಎಂದು ತಾಯಿ ಸ್ಥಾನ ನೀಡಿದ್ರು ದಿವ್ಯಾ ಸುರೇಶ್. ಇದಾದ ಆದ್ಮೇಲೆ ದಿವ್ಯಾ ಸುರೇಶ್‌ ಹಾಗೂ ಮಂಜು ಕೇಕ್ ಕಟ್ ಮಾಡಿ ಆ ಕ್ಷಣವನ್ನ ಸಂಭ್ರಮಿಸುತ್ತಾರೆ. ಆದ್ರೆ, ಆ ಸಂತೋಷದ ಕ್ಷಣ ತುಂಬಾ ಹೊತ್ತು ಇರ್ಲಿಲ್ಲ. ಇದಾಗಿ ಕೆಲ ನಿಮಿಷಗಳ ನಂತರ ದಿವ್ಯಾ ಸುರೇಶ್‌ ಎಲಿಮನೇಟ್ ಆಗ್ತಾರೆ. ಹೋಗೋ ಮುನ್ನ ದಿವ್ಯಾ ಸುರೇಶ್‌ ಕಣ್ಣೀರಿಡುತ್ತಾರೆ. ದಿವ್ಯಾ ಔಟ್ ಆದ್ಮೇಲೆ ಮಂಜು ವಾಲ್‌ನಲ್ಲಿದ್ದ ಫೋಟೋಗಳನ್ನ ನೋಡಿ ಕಣ್ಣೀರಿಟ್ಟರು.

Source: newsfirstlive.com Source link