ಮಸಾಲೆ ದೋಸೆ ಸವಿದು ಬೊಂಬಾಟ್ ಗುರು ಅಂದ್ರು ಭಾರತದ ಬ್ರಿಟಿಷ್ ಹೈ ಕಮಿಷನರ್!

ಬೆಂಗಳೂರು: ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಇಂದು ಸಿಲಿಕಾನ್ ಸಿಟಿಗೆ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಮಸಾಲೆ ದೋಸೆ ಸವಿದಿದ್ದು, ಬೊಂಬಾಟ್ ಗುರು ಎಂದು ಹೇಳಿದ್ದಾರೆ.

ಹೌದು. ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಭೇಟಿಗೂ ಮುನ್ನ ಅಲೆಕ್ಸ್ ಅವರು ಬೆಂಗಳೂರಿನ ಖಾಸಗಿ ಹೋಟೆಲ್‍ಗೆ ತೆರಳಿದ್ದಾರೆ. ಅಲ್ಲದೆ ಮಸಾಲೆ ದೋಸೆ ಸವಿದಿದ್ದಾರೆ. ಈ ವೇಳೆ ದಕ್ಷಿಣ ಭಾರತದ ಮಸಾಲೆ ದೋಸೆಗೆ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್ ಫುಲ್ ಫಿದಾ ಆಗಿದ್ದಾರೆ.

ಖಾಸಗಿ ಹೋಟೆಲ್ ನಲ್ಲಿ ಮಸಾಲೆ ದೋಸೆ ಸವಿದ ಬಳಿಕ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅಲೆಕ್ಸ್, ಕನ್ನಡದಲ್ಲಿ ಮಸಾಲೆ ದೋಸೆ ಸೂಪರ್, ಬೊಂಬಾಟ್ ಗುರು ಎಂದು ಬರೆದುಕೊಂಡಿದ್ದಾರೆ.

ಅಲೆಕ್ಸ್ ಅವರು ಇಂದು ಬೆಳಗ್ಗೆ ಸಿಎಂ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ್ದಾರೆ.

Source: publictv.in Source link