ಜಮೀರ್ ಮನೆ ಮೇಲೆ ED ದಾಳಿ; ಸಹೋರನನ್ನ ವಶಕ್ಕೆ ಪಡೆದ ED

ಜಮೀರ್ ಮನೆ ಮೇಲೆ ED ದಾಳಿ; ಸಹೋರನನ್ನ ವಶಕ್ಕೆ ಪಡೆದ ED

ಬೆಂಗಳೂರು: ಕಾಂಗ್ರೆಸ್​ ನಾಯಕ ಜಮೀರ್‌ ಅಹಮ್ಮದ್ ಖಾನ್‌ ನಿವಾಸದ ಮೇಲೆ ದಾಳಿ ಮಾಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಸಂಜೆ ವೇಳೆಗೆ ಜಮೀರ್ ಅವರ ಸಹೋದರನ್ನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಜಮೀರ್ ಸಹೋದರ ಮುಜಾಮಿಲ್‌ ಅಹ್ಮದ್‌ ಖಾನ್​ನನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮುಜಾಮಿಲ್ ಜಮೀರ್ ಅವರ ಕಿರಿಯ ಸಹೋದರ. ಇವರೇ ಜಮೀರ್​ಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳನ್ನ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಜಮೀರ್​​ ವಿರುದ್ಧ ED ರೇಡ್​​; ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಬೆಳಗ್ಗೆಯಿಂದ ನಡೆದ ಪರಿಶೀಲನೆಯಲ್ಲಿ ಅನೇಕ ದಾಖಲೆಗಳು ಇಡಿ ಅಧಿಕಾರಿಗಳಿಗೆ ಲಭ್ಯವಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಯಾವುದೇ ಉತ್ತರವಿಲ್ಲ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಮುಜಾಮಿಲ್​ ಅವರನ್ನ ಇಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: IMA ವಂಚನೆ ಕೇಸ್​ ಆರೋಪಿ ಮನ್ಸೂರ್​​ ಜೊತೆ ಜಮೀರ್​​​ ನಡೆಸಿದ್ದ ವ್ಯವಹಾರ ಎಷ್ಟು ಗೊತ್ತಾ?

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ಗೆ ಇಡಿ ಶಾಕ್​ -ಮನೆ, ಕಚೇರಿ ಮೇಲೆ ಇಡಿ ದಾಳಿ

Source: newsfirstlive.com Source link