ED ದಾಳಿ ಬೆನ್ನಲ್ಲೇ ಜಮೀರ್​​ ಆಪ್ತ ಕನ್ನಡದ ದೊಡ್ಡ ಸ್ಟಾರ್​​ ನಟನಿಗೆ ಶುರುವಾಯ್ತು ಟೆನ್ಷನ್​​

ED ದಾಳಿ ಬೆನ್ನಲ್ಲೇ ಜಮೀರ್​​ ಆಪ್ತ ಕನ್ನಡದ ದೊಡ್ಡ ಸ್ಟಾರ್​​ ನಟನಿಗೆ ಶುರುವಾಯ್ತು ಟೆನ್ಷನ್​​

ಬೆಂಗಳೂರು: ಎಐಂಎ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಜಮೀರ್​ ಅಹ್ಮದ್​ ಖಾನ್​​​ ಹೆಸರು ಕೇಳಿ ಬಂದ ಕಾರಣ ED ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಜಮೀರ್​ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಆದರೀಗ, ಇ.ಡಿ ದಾಳಿಯಿಂದ ಜಮೀರ್​​ ಆಪ್ತರಿಗೆ ಟೆಕ್ಷನ್​​ ಶುರುವಾಗಿದೆಯಂತೆ.

ಇತ್ತೀಚೆಗೆ ಐದು ದಿನಗಳ ಹಿಂದೆಯಷ್ಟೇ ಜಮೀರ್​ ಹುಟ್ಟುಹಬ್ಬದಂದು ಕನ್ನಡದ ಸ್ಟಾರ್​​ ನಟರೊಬ್ಬರು ಪಾರ್ಟಿ ಮಾಡಿದ್ದರು. ಜಮೀರ್​ ಗೆಸ್ಟ್​​ ಹೌಸ್​​ನಲ್ಲಿ ನಡೆದ ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸ್ಟಾರ್​​ ನಟ ಮತ್ತು ಆಪ್ತರು ಇಡೀ ರಾತ್ರಿ ತಂಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಜಮೀರ್​​ ಫ್ಲಾಟ್​​ ಕೀಗಾಗಿ ಆರು ಗಂಟೆಗಳಿಂದ ಕಾಯುತ್ತಿರುವ ED ಅಧಿಕಾರಿಗಳು

ಜಮೀರ್​​ ಗೆಸ್ಟ್​ ಹೌಸ್​ ಸಿಸಿಟಿವಿ ಪರಿಶೀಲಿಸಿ ನಂತರ ತಮ್ಮನ್ನು ವಿಚಾರಣೆ ಕರೆಯಲಿದ್ದಾರಾ ಎಂದು ಸ್ಟಾರ್​​ ನಟ ಮತ್ತು ಆಪ್ತರಿಗೆ ಸಣ್ಣ ಭಯ ಕಾಡುತ್ತಿದೆ.

Source: newsfirstlive.com Source link