ಒಲಿಂಪಿಕ್ಸ್​​ನಲ್ಲಿ ಭಾರತೀಯ ಹಾಕಿ ವಿಶೇಷ ದಾಖಲೆ; ವಿಶ್ವದಲ್ಲೇ ಅತಿ ಹೆಚ್ಚು ಪದಕ ಗೆದ್ದು ಇತಿಹಾಸ

ಒಲಿಂಪಿಕ್ಸ್​​ನಲ್ಲಿ ಭಾರತೀಯ ಹಾಕಿ ವಿಶೇಷ ದಾಖಲೆ; ವಿಶ್ವದಲ್ಲೇ ಅತಿ ಹೆಚ್ಚು ಪದಕ ಗೆದ್ದು ಇತಿಹಾಸ

ಒಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲೇ ಹಾಕಿ ಅಂಗಳದಲ್ಲಿ ಭಾರತ ವಿಶ್ವ ದಾಖಲೆ ನಿರ್ಮಿಸಿದೆ. 1920 ರಿಂದ ಇಲ್ಲಿತನಕ ಒಟ್ಟು 12 ಪದಕಗಳನ್ನು ಗೆಲ್ಲುವುದರ ಮೂಲಕ ಯಾರೂ ಮಾಡದ ದಾಖಲೆ ಮಾಡಿದೆ. ಇದ್ರಲ್ಲಿ 8 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಪಾರುಪತ್ಯ ಸ್ಥಾಪಿಸಿದೆ. ವಿಶೇಷವೆಂದರೆ ಒಲಿಂಪಿಕ್ಸ್​ನ ಎಲ್ಲಾ ವಿಭಾಗಗಳಲ್ಲಿ ಭಾರತಕ್ಕೆ ಸಿಕ್ಕಿರುವ 9 ಚಿನ್ನದ ಪದಕಗಳ ಪೈಕಿ ಹಾಕಿ ಕ್ರೀಡೆಯಿಂದಲೇ 8 ಸಿಕ್ಕಿವೆ. 

ಹಾಕಿ ಅಂಗಳದಲ್ಲಿ 8 ಬಾರಿ ಚಿನ್ನ ಗೆದ್ದ ಭಾರತ

  • 1928 – ಅಮ್ಸ್​​ಟರ್ಡಮ್​​​ ಒಲಿಂಪಿಕ್ಸ್​​ನಲ್ಲಿ ಭಾರತ ಫೈನಲ್​ನಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಚಿನ್ನದ ಪದಕ ಮಡಿಲಿಗೆ ಹಾಕಿಕೊಂಡಿತ್ತು.
  • 1932 – ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲೂ ಫೈನಲ್ಸ್​ ಪಂದ್ಯದಲ್ಲಿ ಜಪಾನ್ ತಂಡವನ್ನು ಮಣಿಸಿದ್ದ ಭಾರತ ಚಿನ್ನದ ಪದಕ ಗೆದ್ದು ಪಾರುಪತ್ಯ ಸ್ಥಾಪಿಸಿತ್ತು.
  • 1936 – ಬರ್ಲಿನ್ ಒಲಿಂಪಿಕ್ಸ್​ನಲ್ಲಿ ಜರ್ಮನಿ ವಿರುದ್ಧ ಗೆಲ್ಲುವ ಮೂಲಕ ಭಾರತ ಚಿನ್ನದ ಪದಕವನ್ನು ತನ್ನಾದಾಗಿಸಿಕೊಂಡಿತ್ತು.
  • 1948 – ಲಂಡನ್ ಒಲಿಂಪಿಕ್ಸ್ ಗ್ರೇಟ್ ಬ್ರಿಟನ್ ತಂಡವನ್ನು ಸೋಲಿಸಿ ಗೋಲ್ಡ್​ ಮೆಡಲ್​ಗೆ ಮುತ್ತಿಕ್ಕಿತ್ತು.
  • 1952 – ಹೆಲ್ಸಿಂಕಿ ಒಲಿಂಪಿಕ್ಸ್​ನಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಬಗ್ಗುಬಡಿದು ಭಾರತ ಸ್ವರ್ಣ ಪದಕಕ್ಕೆ ಕೊರೊಳೊಡ್ಡಿತು.
  • 1956 – ಮೆಲ್ಬೋರ್ನ್​ ಒಲಿಂಪಿಕ್ಸ್​ನ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ್ ವಿರುದ್ಧ ಜಯ ಸಾಧಿಸಿ ಚಿನ್ನದ ಪದಕ ಗೆದ್ದು ಅಧಿಪತ್ಯ ಮೆರೆದಿತ್ತು.
  • 1964 – ಟೋಕಿಯೊ ಒಲಿಂಪಿಕ್ಸ್​ ಫೈನಲ್​ನಲ್ಲಿ ಪಾಕ್​ಗೆ ಸೋಲುಣಿಸುವ ಮೂಲಕ ಭಾರತ 7ನೇ ಚಿನ್ನದ ಪದಕ ಗೆದ್ದುಕೊಂಡಿತ್ತು.
  • 1980 – ಮಾಸ್ಕೋ ಒಲಿಂಪಿಕ್ಸ್​​ನಲ್ಲಿ ಸ್ಪೇನ್​​ ತಂಡ ಸೋಲಿಸಿ 8ನೇ ಚಿನ್ನದ ಪದಕ ಬಾಚಿಕೊಂಡಿತ್ತು

ಈಗ 41 ವರ್ಷಗಳ ಬಳಿಕ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ಇದುವರೆಗೆ ಒಲಿಂಪಿಕ್ಸ್​ನಲ್ಲಿ ಭಾರತದ ಹಾಕಿ ತಂಡ 12 ಪದಕ (8 ಚಿನ್ನ, 1, ಬೆಳ್ಳಿ, 3 ಕಂಚು) ಗೆದ್ದು ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಪುರುಷರ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ -41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಟೀಂ ಇಂಡಿಯಾ ಸಾಧನೆ

Source: newsfirstlive.com Source link