KGF ಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ನ್ಯೂ ಫಿಲ್ಮ್.. ನಾಳೆ ರಿಲೀಸ್​​ ಆಗಲಿರುವ ಟೈಟಲ್​​ ಎಕ್ಸ್​​ಕ್ಲೂಸಿವ್ ಸೀಕ್ರೆಟ್..!

KGF ಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ನ್ಯೂ ಫಿಲ್ಮ್.. ನಾಳೆ ರಿಲೀಸ್​​ ಆಗಲಿರುವ ಟೈಟಲ್​​ ಎಕ್ಸ್​​ಕ್ಲೂಸಿವ್ ಸೀಕ್ರೆಟ್..!

ಕೊರೊನಾ ಸಂಕಷ್ಟದಲ್ಲಿರುವ ಸ್ಯಾಂಡಲ್​ವುಡ್​ಗೆ ಹೊಂಬಾಳೆ ಫಿಲಂಸ್​ ಸ್ಫೂರ್ತಿಯ ಚಿಲುಮೆ ಅಂದ್ರೆ ತಪ್ಪಲ್ಲ. ಯಾಕಂದ್ರೆ ಹೊಂಬಾಳೆ ಫಿಲಂಸ್​ ಕಷ್ಟ ಕಾಲದಲ್ಲೂ ಮತ್ತೊಂದು ಹೊಸ ಚಿತ್ರ ಅನೌನ್ಸ್​ ಮಾಡಿದೆ. ಸದ್ಯ ಗಾಂಧಿನಗರದಲ್ಲಿ ಹೊಂಬಾಳೆಯಲ್ಲಿ ಅರಳಲಿರೋ 11 ಸಿನಿಮಾ ಹೂ ಯಾವ್ದು.. ಆ ಹೂ ಯಾರ ಮುಡಿಗೆ ಸೇರಲಿದೆ ಎಂಬ ಕುತೂಹಲದ ಚರ್ಚೆ ಶುರುವಾಗಿದೆ..ಅಷ್ಟಕ್ಕೂ ಹೊಂಬಾಳೆ ಫಿಲಂಸ್​ 11ನೇ ಹೆಜ್ಜೆಯನ್ನು ಯಾರ ಜೊತೆ ಇಡಲಿದೆ..? ಎಂಬ ಮಾಹಿತಿ ಇಲ್ಲಿದೆ ಓದಿ..

ಹೊಂಬಾಳೆ ಫಿಲಂಸ್​ ಕಡಿಮೆ ಅವಧಿಯಲ್ಲಿ ದೊಡ್ಡ ಹೆಸರು ಸಂಪಾದಿಸಿರೋ ಪ್ರೊಡಕ್ಷನ್​ ಹೌಸ್​​. 2014ರಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ‘ನಿನ್ನಿಂದಲೇ’ ಚಿತ್ರದ ಮೂಲಕ ಹೊಂಬಾಳೆ ಫಿಲಂಸ್ ಸಿನಿ ಜರ್ನಿ ಶುರುವಾಯ್ತು. ಅಲ್ಲಿಂದ ಇಲ್ಲಿತನಕ ಹೊಂಬಾಳೆ ಫಿಲಂಸ್​ನಲ್ಲಿ ಮಾಸ್ಟರ್ ಪೀಸ್, ರಾಜಕುಮಾರ, ಕೆಜಿಎಫ್ ಚಾಪ್ಟರ್-1 , ಕೆಜಿಎಫ್ ಚಾಪ್ಟರ್-2 , ಯುವರತ್ನ , ಸಲಾರ್, ಬಘೀರ, ದ್ವಿತ್ವ, ರಿಚರ್ಡ್ ಆಂಟನಿ ಸೇರಿದಂತೆ 10 ಚಿತ್ರಗಳು ಹೊಂಬಾಳೆ ಅಕೌಂಟ್​ನಲ್ಲಿವೆ.

blank

ಬಘೀರ, ದ್ವಿತ್ವ, ರಿಚರ್ಡ್ ಆಂಟನಿ ಸಿನಿಮಾಗಳ ಶೂಟಿಂಗ್​ ಶುರುವಾಗೋ ಮುನ್ನ ಈಗ ಹೊಂಬಾಳೆ ಮಾಲೀಕ ವಿಜಯ್ ​ಕಿರಗಂದೂರ ತಮ್ಮ ಬ್ಯಾನರ್​ನ 11ನೇ ಕನಸಿನ ಬಗ್ಗೆ ಬಿಚ್ಚಿಟ್ಟಿದ್ದಾರೆ. ಹೌದು ಯಶಸ್ವಿ ಚಿತ್ರಗಳ ನಿರ್ಮಾಣ ಮಾಡಿ ಗೆದ್ದಿರುವ ಹೊಂಬಾಳೆ ಫಿಲಂಸ್​ನಲ್ಲಿ ಈ ಶುಭ ಶುಕ್ರವಾರದಂದು ಬೆಳಗ್ಗೆ 11:43ಕ್ಕೆ 11ನೇ ಚಿತ್ರದ ಟೈಟಲ್ ​ಮತ್ತು ಫಸ್ಟ್​ ಲುಕ್​ ರಿವೀಲ್​ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

blank

ಹೊಂಬಾಳೆಯಲ್ಲಿ 11ನೇ ಚಿತ್ರ ಅನೌನ್ಸ್​ ಆಗ್ತಿದಂತೆ ಗಾಂಧಿನಗರದಲ್ಲಿ ಈ ಚಿತ್ರದ ನಾಯಕ ಯಾರು? ಎಂಬ ಪ್ರಶ್ನೆ ಶುರುವಾಗಿದೆ. ಈ ಕೌತುಕದ ಕಲರ್​ ಪುಲ್​ ಪ್ರಶ್ನಗೆ ನಮ್ಮ ಚಿತ್ರಪ್ರೇಮಿಗಳೆ ತಂಡಕ್ಕೆ ಉತ್ತರ ಸಿಕ್ಕದೆ. ಆ ಉತ್ತರವೇ ಡಿಟೆಕ್ಟಿವ್​ ದಿವಾಕರ ಖ್ಯಾತಿಯ ರಿಷಬ್​ ಶೆಟ್ಟಿ.

ಯೆಸ್​, ಪ್ರಯೋಗಾತ್ಮಕ ಚಿತ್ರಗಳ ಮಾಡಿ ಗೆದ್ದಿರುವ ನಟ ನಿರ್ದೇಶಕ ರಿಷಬ್​ ಶೆಟ್ಟಿ ಹೊಂಬಾಳೆ ಫಿಲಂಸ್​ನ 11ನೇ ಚಿತ್ರದ ನಾಯಕ ಜೊತೆಗೆ ನಾವಿಕನೂ ಆಗಿದ್ದಾರೆ. ನಾಳೆ ಬೆಳಗ್ಗೆ 11ಗಂಟೆ 43 ನಿಮಿಷಕ್ಕೆ ಹೊಂಬಾಳೆ ಫಿಲಂಸ್​ ರಿಷಬ್​ ಶೆಟ್ಟಿ ಚಿತ್ರವನ್ನು ನಾಳೆ ರಿವಿಲ್ ಮಾಡ್ತಾರೆ ಅನ್ನೋ ಮಾಹಿತಿ ನ್ಯೂಸ್​ ಫಸ್ಟ್ ತಂಡಕ್ಕೆ ಸಿಕ್ಕಿದೆ.

Source: newsfirstlive.com Source link