ಇನ್ನಿಂಗ್ಸ್​ ಕಟ್ಟುತ್ತಿರುವ ಕೆ.ಎಲ್.ರಾಹುಲ್​- 2ನೇ ದಿನದ ಮೊದಲ ಸೆಷನ್ ಅಂತ್ಯಕ್ಕೆ ಭಾರತ 97/1​

ಇನ್ನಿಂಗ್ಸ್​ ಕಟ್ಟುತ್ತಿರುವ ಕೆ.ಎಲ್.ರಾಹುಲ್​- 2ನೇ ದಿನದ ಮೊದಲ ಸೆಷನ್ ಅಂತ್ಯಕ್ಕೆ ಭಾರತ 97/1​

ಎರಡನೇ ದಿನದಾಟದ ಮೊದಲ ಸೆಷನ್​​ ಅಂತ್ಯಕ್ಕೆ ಟೀಮ್ ಇಂಡಿಯಾ, 97ರನ್​ ಗಳಿಸಿ 1 ವಿಕೆಟ್​​ ಕಳೆದುಕೊಂಡಿದೆ. ಮೊದಲ ದಿನದ ಅಂತ್ಯದಲ್ಲಿ ವಿಕೆಟ್​ ನಷ್ಟವಿಲ್ಲದೆ 21 ರನ್​ ಕಲೆ ಹಾಕಿದ್ದ ಭಾರತ, ಎರಡನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿತ್ತು. ಇಂದು 2ನೇ ದಿನದಾಟ ಆರಂಭಿಸಿದ ಭಾರತಕ್ಕೆ, ಆರಂಭಿಕ ಆಟಗಾರರಾದ ರೋಹಿತ್​ ಶರ್ಮಾ ಮತ್ತು ಕೆ.ಎಲ್​.ರಾಹುಲ್,​​ ಭರ್ಜರಿ ಓಪನಿಂಗ್​ ನೀಡಿದ್ರು. ಇನ್ನೇನು ಈ ಜೋಡಿಯ ಜೊತೆಯಾಟ ಇನ್ನೇನು 100ರ ಗಡಿ ದಾಟುತ್ತಿತ್ತು ಅನ್ನೋವಾಗ, 97 ರನ್​ಗೆ ಓಲೀ ರಾಬಿನ್​ಸನ್​ ಬ್ರೇಕ್​ ಥ್ರೂ ನೀಡಿದ್ರು. 36 ರನ್​ ಗಳಿಸಿದ್ದ ರೋಹಿತ್​ ಶರ್ಮಾ, ರಾಬಿನ್​ಸನ್​ ಬೌಲಿಂಗ್​​ನಲ್ಲಿ ಸ್ಯಾಮ್ ​​ಕರನ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದ್ರು. ಸದ್ಯ ರಾಹುಲ್​ 48ರನ್​ ಗಳಿಸಿದ್ದು ಕ್ರೀಸ್​​​ನಲ್ಲಿದ್ದಾರೆ.

Source: newsfirstlive.com Source link