‘ಮುಗುಳು ನಗೆ’ ಹುಡ್ಗಿ ಸಿಗರೇಟ್ ಹಿಡಿದ್ದು ಯಾಕೆ..? ಧಮ್ ಹೊಡೆಯೊದು ಕಲಿತ್ರಾ ‘ಮದಗಜ’ ಬೆಡಗಿ..?

‘ಮುಗುಳು ನಗೆ’ ಹುಡ್ಗಿ ಸಿಗರೇಟ್ ಹಿಡಿದ್ದು ಯಾಕೆ..? ಧಮ್ ಹೊಡೆಯೊದು ಕಲಿತ್ರಾ ‘ಮದಗಜ’ ಬೆಡಗಿ..?

ಚುಟು ಚುಟು ಬೆಡಗಿ, ಪಟಾಕಿ ಪೋರಿ ಆಶಿಕಾ ರಂಗನಾಥ್ ಸಿಗರೇಟ್ ಹಿಡಿದು ಧಮ್ ರೇ ಧಮ್ ಎನ್ನುತ್ತಿದ್ದಾರೆ.. ಅದ್ಯಾಕೆ..? ಆಶಿಕಾ ಏನಾದ್ರು ಧಮ್ ಹೊಡೆಯೊದನ್ನ ಕಲಿತ್​ ಬಿಟ್ರಾ ಅಂತೆಲ್ಲಾ ಯೋಚ್ನೆ ಮಾಡ್ಬೇಡಿ. ಇಂದು ಆಶಿಕಾರ ಹುಟ್ಟುಹಬ್ಬ. ಜಸ್ಟ್ 24 ಮುಸಿಗಿ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆಶಿಕಾ ಅವರ ಬರ್ತ್​ಡೇ ಅವರದ್ದೇ ಆದ ಸಿನ್ಮಾಗಳ ಸ್ಪೆಷ್ ಸ್ಪೆಷಲ್ ಗಿಫ್ಟ್ಸ್​​ಗಳು ಹೊರ ಬಂದಿವೆ.ಆದ್ರೆ ಅವುಗಳಲ್ಲಿ ಒಂದು ಸ್ಪೆಷಲ್​ಗೆ ಸ್ಪೆಷಲ್ ಗಿಫ್ಟ್ ಅಂದ್ರೆ, ಹಾಟ್​​ ಆಂಡ್​ ಕ್ಯೂಟ್ ಫೋಟೋಸ್​ಗಳಿಂದ ಸೋಶಿಯಲ್ ಮಿಡಿಯಾದಲ್ಲಿ ಸಿಡಿಯುತ್ತಿದ್ದ ಪಟಾಕಿ ಪೋರಿ ಈ ಬಾರಿ ಸಿಗರೇಟ್ ಹಿಡಿದು ಧಮ್ ರೇ ಧಮ್ ಅನ್ನೋ ಸ್ಟೈಲ್​​ನಲ್ಲಿ ಪೋಸ್​​ ಕೊಟ್ಟಿದ್ದಾರೆ.

ಅವತಾರ ಪುರುಷ, ರೆಮೋ, ಗರುಡ ಸಿನಿಮಾಗಳ ಜೊತೆಗೆ ಮದಗಜ ಸಿನಿಮಾದಲ್ಲಿ ಅಭಿನಯ ಮಾಡ್ತಿದ್ದಾರೆ ಆಶಿಕಾ ರಂಗನಾಥ್.. ಮದಗಜ ಚಿತ್ರದ ಕ್ಲೈಮ್ಯಾಕ್ಸ್ ಮತ್ತು ಎರಡು ಹಾಡುಗಳ ಶೂಟಿಂಗ್​​ನಲ್ಲಿ ಆಶಿಕಾ ಕಂಗೋಳಿಸಿ ಬಿಟ್ರೇ ಆಶಿಕಾ ಒಪ್ಪಿಕೊಂಡ ಕೆಲಸ ಮುಗಿದಂತೆ ಆಗುತ್ತದೆ.. ಆದ್ರೆ ವಿಷಯ ಇದಲ್ಲ.. ಆಶಿಕಾ ಬರ್ತ್​​ಡೇಗೆ ಮದಗಜ ಫಿಲ್ಮ್ ಟಿಮ್ ಬಿಟ್ಟಿರೋ ಹೊಸ ಪೋಸ್ಟರ್​​. ಮದಗಜ ಚಿತ್ರದಲ್ಲಿ ಹಳ್ಳಿ ಹುಡ್ಗಿಯಂತೆ ಕಂಗೊಳಿಸಿರೋ ಆಶಿಕಾರ ಕೈಯಲ್ಲಿ ಸಿಗರೇಟಾ..? ಅನ್ನೋ ಕುತೂಹಲದ ಪ್ರಶ್ನೆ ಈಗ ಚಿತ್ರಪ್ರೇಮಿಗಳಲ್ಲಿ ಮೂಡಲಾರಂಭಿಸಿದೆ.. ಒಂದು ಸನ್ನಿವೇಷಕ್ಕಾಗಿ ಆಶಿಕಾ ಕೈಯಲ್ಲಿ ಸಿಗರೆಟ್ ಹಿಡಿದು ಪೋಸ್ ಕೊಟ್ಟಿದ್ದಾರಂತೆ.. ಈ ವರ್ಷದ ಕೊನೆಯಲ್ಲಿ ಮದಗಜ ಪ್ರೇಕ್ಷಕರ ಮುಂದೆ ಬರಲಿದೆ.

Source: newsfirstlive.com Source link