ಅಣ್ಣಾಮಲೈನ ಭಾಳ ದೊಡ್ಡ ಮನುಷ್ಯ ಮಾಡೋ ಅವಶ್ಯಕತೆಯಿಲ್ಲ -ಬೊಮ್ಮಾಯಿ ಗುಡುಗು

ಅಣ್ಣಾಮಲೈನ ಭಾಳ ದೊಡ್ಡ ಮನುಷ್ಯ ಮಾಡೋ ಅವಶ್ಯಕತೆಯಿಲ್ಲ -ಬೊಮ್ಮಾಯಿ ಗುಡುಗು

ಬೆಂಗಳೂರು: ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರನ್ನ ಭಾಳ ದೊಡ್ಡ ಮನುಷ್ಯನನ್ನಾಗಿ ಮಾಡುವ ಅಗತ್ಯ ಇಲ್ಲ ಅಂತಾ ಸಿಎಂ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.

ಕೆ.ಅಣ್ಣಾಮಲೈ ಅವರು ಕರ್ನಾಟಕದ ಮೇಕೆದಾಟು ಯೋಜನೆಯನ್ನ ವಿರೋಧಿಸಿದ ಇಂದು ಒಂದು ದಿನ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಬೊಮ್ಮಾಯಿ.. ನಾನು ಈಗಾಗಲೇ ಅಣ್ಣಾಮಲೈಗೆ ನಾನು ಉತ್ತರ ಕೊಟ್ಟಿದ್ದೇನೆ. ಅವನನ್ನ ಭಾಳ ದೊಡ್ಡ ಮನುಷ್ಯನನ್ನಾಗಿ ಮಾಡುವ ಅವಶ್ಯಕತೆ ಇಲ್ಲ. ತಮಿಳುನಾಡಿನಲ್ಲಿ ಮೇಕೆದಾಟು ಬಗ್ಗೆ ಯಾರು ಏನೇ ಮಾಡಲಿ. ಯಾರೇ ಪ್ರತಿಭಟನೆ ಮಾಡಲಿ, ಹೇಗೆ ಮಾಡಲಿ ಅದು ರಾಜಕೀಯವಾಗಿ ಇರುವಂತದ್ದಾಗಿದೆ ಎಂದರು.

மாட்டு வண்டியில் வந்த அண்ணாமலை

ಐ ಡೋಂಟ್ ಕೇರ್ 
ಅಂತಾರಾಜ್ಯ ವಿವಾದ ಈಗಾಗಲೇ ಸೆಟಲ್ ಆಗಿದೆ. ಹೆಚ್ಚುವರಿ ನೀರನ್ನ ಬೆಂಗಳೂರಿಗೆ ಕೊಡಬೇಕು ಅಂತಾ ಸುಪ್ರೀಂಕೋರ್ಟ್​ ಕೂಡ ಹೇಳಿದೆ. ಸುಪ್ರೀಂಕೋರ್ಟ್​ ಆದೇಶದನ್ವಯ ನಾವು ಯೋಜನೆ ಶುರು ಮಾಡಿದ್ದೇವೆ. ಇದೆಲ್ಲಾ ಗೊತ್ತಿದ್ದೂ ಅವರು ಹೀಗೆ ಮಾಡ್ತಾರೆ ಅಂದರೆ, ಅದು ರಾಜಕೀಯ. ಐ ಡೋಂಡ್ ಕೇರ್​. ಅದನ್ನ ಅನುಮತಿ ಪಡೆದುಕೊಂಡು ಕೆಲಸವನ್ನ ಮಾಡಿಯೇ ಮಾಡುತ್ತೇವೆ.

பாஜக சார்பில் நடைபெற்ற உண்ணாவிரத போராட்டம்

ಇದನ್ನೂ ಓದಿ: ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜಿ ಇಲ್ಲ; ಅಣ್ಣಾಮಲೈಗೆ ತಪರಾಕಿ ಹಾಕಿದ ಸಿಎಂ

Source: newsfirstlive.com Source link