ಪದಕ ಗೆದ್ದ ಹಾಕಿ ತಂಡಕ್ಕೆ ಜಾಕ್​​ಪಾಟ್​​; ಹರಿಯಾಣದ ಇಬ್ಬರು ಆಟಗಾರರಿಗೆ ಕೋಟಿ ಕೋಟಿ ಹಣ

ಪದಕ ಗೆದ್ದ ಹಾಕಿ ತಂಡಕ್ಕೆ ಜಾಕ್​​ಪಾಟ್​​; ಹರಿಯಾಣದ ಇಬ್ಬರು ಆಟಗಾರರಿಗೆ ಕೋಟಿ ಕೋಟಿ ಹಣ

ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜರ್ಮನಿ ವಿರುದ್ಧ 5-4 ಗೋಲು​​ಗಳ ಅಂತರದಲ್ಲಿ ಭಾರತದ ಪುರುಷರ ಹಾಕಿ ತಂಡ ಗೆದ್ದು ಬೀಗಿದೆ. ಈ ಮೂಲಕ ಭಾರತ ತಂಡ ಕಂಚಿನ ಪದಕ ಪಡೆದುಕೊಂಡಿದೆ. ಸುಮಾರು 41 ವರ್ಷಗಳ ಬಳಿಕ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್​​ನಲ್ಲಿ ಪದಕ ಗೆದ್ದ ಸಾಧನೆಯನ್ನು ಮಾಡಿದೆ. ಈಗ ಪದಕ ಗೆದ್ದ ಟೀಂ ಇಂಡಿಯಾ ಹಾಕಿ ತಂಡದ ಆಟಗಾರರಿಗೆ ರಾಜ್ಯ ಸರ್ಕಾರಗಳು ಗೌರವಧನ, ಕೆಲಸ ಮತ್ತು ಭೂಮಿ ನೀಡುವುದಾಗಿ ಘೋಷಿಸಿವೆ.

blank

ಪಂಜಾಬ್​​ ಸರ್ಕಾರ ಸಿಮ್ರಾನ್​​ಜೀತ್​​ ಸಿಂಗ್​​ಗೆ ರಿವಾರ್ಡ್​ ಮನಿ ಘೋಷಿಸಿದೆ. ಅಂತೆಯೇ ಈಗ ಹರಿಯಾಣ ಸರ್ಕಾರದ ಪರವಾಗಿ ಸಿಎಂ ಮನೋಹರ್​​ ಕಾಲ್​ ಕಟ್ಟರ್, ತನ್ನ ರಾಜ್ಯದ ಭಾರತದ ಇಬ್ಬರು ಹಾಕಿ ಆಟಗಾರರಿಗೆ ತಲಾ 2.5 ಕೋಟಿ ರೂಪಾಯಿ ಗೌರವಧನ ಮತ್ತು ಸ್ಪೋರ್ಟ್ಸ್​ ಕೋಟಾದಡಿ ಕೆಲಸ ಮತ್ತು ಪ್ಲಾಟ್​​ ನೀಡುವುದಾಗಿ ಘೋಷಿಸಿದ್ದಾರೆ. ಸುರೇಂದ್ರ ಕುಮಾರ್ ಮತ್ತು ಸುಮಿತ್ ವಾಲ್ಮಿಕಿಗೆ ತಲಾ 2.5 ಕೋಟಿ ಹಣವನ್ನ ಘೋಷಿಸಿದ್ದಾರೆ. ಅಲ್ಲದೇ ಕುಸ್ತಿಯಲ್ಲಿ ಬೆಳ್ಳಿ ವಿಜೇತ ರವಿ ಕುಮಾರ್ ಅವರಿಗೆ ಬರೋಬ್ಬರಿ 4 ಕೋಟಿ ನೀಡೋದಾಗಿ ಘೋಷಣೆ ಮಾಡಿದ್ದಾರೆ.

ಮಧ್ಯಪ್ರದೇಶದ ಹಾಕಿ ಆಟಗಾರರಾದ ವಿವೇಕ್​ ಸಾಗರ್​​ ಮತ್ತು ನೀಲಾಕಂಠ ಅವರಿಗೆ ತಲಾ ಒಂದು ಕೋಟಿ ರೂಪಾಯಿ ರಿವಾರ್ಡ್ ಅಮೌಂಟ್​​ ನೀಡಲಿದ್ದೇವೆ ಎಂದು ಸಿಎಂ ಶಿವರಾಜ್​ ಸಿಂಗ್​​ ಚೌಹಾಣ್​ ತಿಳಿಸಿದ್ದಾರೆ.​

Source: newsfirstlive.com Source link