ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧನ ಅಂತ್ಯಕ್ರಿಯೆ

ಕಲಬುರಗಿ: ಭಾರತ-ಬಾಂಗ್ಲಾ ಗಡಿಯ ದಲೈ ಪ್ರದೇಶದಲ್ಲಿ ಮಂಗಳವಾರ ಉಗ್ರರ ಗುಂಡೇಟಿಗೆ ಹುತಾತ್ಮರಾದ ಕಲಬುರಗಿಯ ವೀರ ಯೋಧ ರಾಜಕುಮಾರ್ ಮಾವೀನಕರ್ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.

blank

ಬಿಸಿಲೂರು ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಚಿಂಚನಸೂರ ಗ್ರಾಮದ ವೀರ ಯೋಧ ರಾಜಕುಮಾರ್​, ಭಾರತ-ಬಾಂಗ್ಲಾ ಗಡಿ ಧಲೈ ಪ್ರದೇಶದಲ್ಲಿ ಉಗ್ರರ ಉಂಡೇಟಿನಿಂದ ಹುತಾತ್ಮರಾಗಿದ್ದರು. ಇಂದು ಯೋಧ ರಾಜಕುಮಾರ್ ಮಾವೀನಕರ್ ಅವರ ಅಂತ್ಯ ಸಂಸ್ಕಾರ ಸ್ವಂತ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

blank

ಮಂಗಳವಾರ ಯೋಧ ರಾಜಕುಮಾರ್ ಮಾವೀನಕರ್ ದಲಾಯಿ ಪ್ರದೇಶದಲ್ಲಿ ವೀರ ಮರಣಹೊಂದಿದ್ದರು. ಇಂದು ಬೆಳಗ್ಗೆ 4ಗಂಟೆಗೆ ಸ್ವಗ್ರಾಮ ಚಿಂಚನಸೂರಕ್ಕೆ ಪಾರ್ಥಿವ ಶರೀರ ತರಲಾಗಿತ್ತು. ಗ್ರಾಮದ ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಬೆಳಗ್ಗೆಯಿಂದ 11ಗಂಟೆವರೆಗೂ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ಶಾಸಕ ಬಸವರಾಜ್ ಮತ್ತಿಮೂಡ್, ಜಿಲ್ಲಾಧಿಕಾರಿ ವಿಜಯ ವಿ ಜೋತ್ಸ್ನಾ, ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ವೀರಯೋಧ ರಾಜಕುಮಾರ್ ಮಾವೀನಕರ್ ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದ್ರು.

blank

ಹುತಾತ್ಮ ವೀರಯೋಧ ರಾಜಕುಮಾರ್ ಶಾಶ್ವತವಾಗಿ ನೆನಪಿಗಾಗಿ ಚಿಂಚನಸೂರ ಗ್ರಾಮಸ್ಥರು ಗ್ರಾಮದಲ್ಲಿ ರಾಜಕುಮಾರ್ ಮಾವೀನಕರ್ ಅವತ ಪುತ್ಥಳಿ ನಿರ್ಮಾಣಕ್ಕಾಗಿ ಶಾಸಕ ಬಸವರಾಜ್ ಮತ್ತಿಮೂಡ್ ಅವರಿಗೆ ಮನವಿ ಮಾಡಿದ್ರು. ಗ್ರಾಮಸ್ಥರ ಮನವಿಯಂತೆ ಶಾಸಕ ಮತ್ತಿಮೂಡ ಅವರು ಸ್ವಂತ ಖರ್ಚಿನಲ್ಲಿ ಗ್ರಾಮದ ಅಂಬೇಡ್ಕರ್ ಪುತ್ಥಳಿ ಮುಂಭಾಗದ ಖಾಲಿ ಜಾಗದಲ್ಲಿ ವೀರ ಯೋಧ ರಾಜಕುಮಾರ್ ಮಾವೀನಕರ್ ಅವರ ಪ್ರತಿಮೆ ನಿರ್ಮಿಸಿ ಕೊಡೋದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಗಸ್ತು ತಿರುಗುತ್ತಿದ್ದ ಸೈನಿಕರ ಮೇಲೆ ಉಗ್ರರ ದಾಳಿ; ಕನ್ನಡಿಗ ಸೇರಿ ಇಬ್ಬರು ಯೋಧರು ಹುತಾತ್ಮ

Source: newsfirstlive.com Source link