‘ಅಲ್ಲಿ ಅಣ್ಣಾಮಲೈ ಗಿಂಡುವ ಕೆಲ್ಸ ಮಾಡ್ತಿದ್ದಾರೆ, ಇಲ್ಲಿ ಕರ್ನಾಟಕ ಬಿಜೆಪಿ ಅಳಬೇಕಾಗಿದೆ’

‘ಅಲ್ಲಿ ಅಣ್ಣಾಮಲೈ ಗಿಂಡುವ ಕೆಲ್ಸ ಮಾಡ್ತಿದ್ದಾರೆ, ಇಲ್ಲಿ ಕರ್ನಾಟಕ ಬಿಜೆಪಿ ಅಳಬೇಕಾಗಿದೆ’

ನವದೆಹಲಿ: ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಅಲ್ಲಿ ಕೂತುಕೊಂಡು ಗಿಂಡುವ ಕೆಲಸ ಮಾಡ್ತಿದ್ದಾರೆ ಅಂತಾ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಗುಡುಗಿದ್ದಾರೆ.

ನ್ಯೂಸ್​ಫಸ್ಟ್​ನ ವಿಶೇಷ ಸಂದಶರ್ನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ.. ಇಂದು ನಾನು ಸದನದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಪ್ರಶ್ನೆ ಮಾಡಿದ್ದೆ. ಅದಕ್ಕೆ ತಮಿಳುನಾಡು ಅನುಮತಿ ಪಡೆಯಲು ಹೇಳಿದ್ದಾರೆ. ನಾವ್ಯಾಕೆ ತಮಿಳುನಾಡಿಗೆ ಯಾಕೆ ಅನುಮತಿ ಕೇಳಬೇಕು? ನಾವು ನಮ್ಮ ನೀರನ್ನ ಬಳಸಿಕೊಳ್ಳುತ್ತಿದ್ದೇವೆ. ಕುಡಿಯೋ ನೀರಿಗಾಗಿ ಮಾಡುತ್ತಿರುವ ಯೋಜನೆ ಇದು.

ಇದನ್ನು ಓದಿ: ಅಣ್ಣಾಮಲೈನ ಭಾಳ ದೊಡ್ಡ ಮನುಷ್ಯ ಮಾಡೋ ಅವಶ್ಯಕತೆಯಿಲ್ಲ -ಬೊಮ್ಮಾಯಿ ಗುಡುಗು

ಪ್ರತಿವರ್ಷ ಎಷ್ಟು ನೀರು ಕೊಡಬೇಕಂತ, ಸುಪ್ರೀಂಕೋರ್ಟ್ ಮತ್ತು ಕಾವೇರಿ ಟ್ರಿಬ್ಯೂನಲ್ ಹೇಳಿದೆಯೋ ಅಷ್ಟು ನೀಡುತ್ತಿದ್ದೇವೆ. ನಮ್ಮ ನೀರನ್ನ ನಾವು ಯಾವುದಕ್ಕಾದರೂ ಬಳಸಿಕೊಳ್ತೇವೆ. ಅದಕ್ಕೆ ಕೇಂದ್ರ ಸಚಿವರು ಪರಿಸರ ಇಲಾಖೆಯ ಅನುಮತಿ ಪಡೆದಿಲ್ಲ ಅಂತ ಉತ್ತರ ನೀಡಿದ್ದಾರೆ.

ಪರಿಸರ ಇಲಾಖೆ ಅನುಮತಿಗೆ ನಮ್ಮ ಕಡೆಯಿಂದ ಅನುಮತಿ ಕೇಳಲಾಗಿದೆ. ಇದರ ನಂತರವೂ ತಮಿಳುನಾಡಿನಿಂದ ಕೇಳಿಕೊಂಡು ಬಾ ಅಂದ್ರೆ ಹೇಗೆ? ಕೇಂದ್ರದಿಂದ ಆರು ತಿಂಗಳ ಒಳಗಾಗಿ ಅನುಮತಿ ಕೊಡಲಿಲ್ಲ ಅಂದರೆ ಡಿಮ್ಡ್ ಅಪ್ರುವಲ್ ಅಂತ ತಿಳಿದುಕೊಳ್ತೀವಿ. ನಮ್ಮ ರಾಜ್ಯದಿಂದ 25 ಜನ ಸಂಸದರನ್ನ ಕೊಟ್ಟಿದ್ದೇವೆ.

ಇದನ್ನೂ ಓದಿ: ಮೇಕೆದಾಟು ಯೋಜನೆ ಬಗ್ಗೆ ಸಂಸತ್​​ನಲ್ಲಿ ಧ್ವನಿ ಎತ್ತಿದ ಪ್ರಜ್ವಲ್ ರೇವಣ್ಣ

ತಮಿಳುನಾಡಿನಿಂದ ಕೇಂದ್ರಕ್ಕೆ ಏನೂ ಕೊಟ್ಟಿಲ್ಲ. ತಮಿಳುನಾಡು ಬಿಜೆಪಿ, ಅಣ್ಣಾಮಲೈ ಅಲ್ಲಿ ಕೂತುಕೊಂಡು ಗಿಂಡುತ್ತಾರೆ. ಇಲ್ಲಿ ಕರ್ನಾಟಕ ಬಿಜೆಪಿ, ನಾವು ಅಳಬೇಕಾಗಿದೆ. ಕೇಂದ್ರ ಮೇಕೆದಾಟು ಯೋಜನೆ ಆಗುತ್ತೊ ಇಲ್ವೋ ಅಂತ ಹೇಳಬೇಕು. ಬೆಂಗಳೂರು ಬೆಳೆಯುತ್ತಿದೆ, ಅದಕ್ಕೆ ಕುಡಿಯೋ ನೀರುಬೇಕು. ಸಿಎಂ ಬೊಮ್ಮಾಯಿ ನಾವು ಮಾಡೇ ಮಾಡ್ತೀವಿ ಅಂತ ಹೇಳಿದ್ದಾರೆ. ಅದಕ್ಕೆ ನಮ್ಮ ಸ್ವಾಗತ ಸಹ ಇದೆ, ನೀರಾವರಿ ಬಗ್ಗೆ ಅವರಿಗೆ ಅಪಾರ ಜ್ಞಾನವಿದೆ ಎಂದು ಬಣ್ಣಿಸಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಶ್ನೆ; ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಅಗತ್ಯ ಎಂದ ಕೇಂದ್ರ

Source: newsfirstlive.com Source link