ಆಗ ಮಿಸ್​ ಯೂನಿವರ್ಸ್​​ ಈಗ ಇಂದಿರಾ ಗಾಂಧಿ; ಬೆಲ್​​ಬಾಟಂನಲ್ಲಿ ಮಿಂಚ್ತಿರೋ ಇವರು ಯಾರು?

ಆಗ ಮಿಸ್​ ಯೂನಿವರ್ಸ್​​ ಈಗ ಇಂದಿರಾ ಗಾಂಧಿ; ಬೆಲ್​​ಬಾಟಂನಲ್ಲಿ ಮಿಂಚ್ತಿರೋ ಇವರು ಯಾರು?

ನೆನ್ನೆ ಮೊನ್ನೆ ತನಕ ಅಕ್ಷಯ್ ಕುಮಾರ್ ನಟನೆಯ ಬೆಲ್​ ಬಾಟಮ್​​​ ಸಿನಿಮಾದ ಟೈಲರ್ ಬಗ್ಗೆ, ಅಕ್ಷಯ್ ಕುಮಾರ್ ಪಾತ್ರದ ಗತ್ತು ಗಮತ್ತಿನ ಬಗ್ಗೆ ಮಾತುಕಥೆಗಳಾಗುತ್ತಿದ್ವು. ಬಟ್ ಈಗ ಬೆಲ್​ಬಾಟಮ್ ಸಿನಿಮಾದಲ್ಲಿ ಕಾಣುವ ಇಂದಿರಗಾಂಧಿ ಪಾತ್ರದ ಬಗ್ಗೆ ಚರ್ಚೆ ಯಾಗುತ್ತಿದೆ. ಆದ್ರೆ ಕಾಂಟ್ರವರ್ಸಿಯಲ್ಲ ಕಾಂಪ್ಲಿಮೆಂಟ್​​ ಸಿಕ್ತಿದೆ.

ಕಳೆದ ವರ್ಷದ ಲಾಕ್ ಡೌನ್​​ನಲ್ಲಿ ‘‘ಲಕ್ಷ್ಮೀ ಬಾಂಬ್’’ ಸಿನಿಮಾದ ಮೂಲಕ ಓಟಿಟಿ ಫ್ಲಾಟ್ ಫಾರ್ಮ್​​ನಲ್ಲಿ ರಂಜಿಸಿದ್ದ ಅಕ್ಷಯ್ ಕುಮಾರ್ ಈ ಬಾರಿ ಬೆಲ್​ಬಾಟಮ್ ಸಿನಿಮಾದ ಮೂಲಕ ಪ್ರೇಕ್ಷಕ ಮುಂದೆ ಬಂದು ನಿಲಲಿದ್ದಾರೆ.. ಸಿನಿಮಾದಿಂದ ಸಿನಿಮಾಕ್ಕೆ ವಿಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಿರೋ ಅಕ್ಕಿ ಭಾಯ್ ಈ ಬಾರಿ ಭಾರತೀಯ ಸ್ಪೈ ಎಂಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಬೆಲ್​ಬಾಟಮ್ ಸಿನಿಮಾದ ಟ್ರೈಲರ್ ರಿಲೀಸ್ ಆಗೋ ತನಕ ಅಕ್ಷಯ್ ಕುಮಾರ್ ಮೇಲೆ ಎಲ್ಲರ ಕಣ್ಣಿತ್ತು.. ಆದ್ರೆ ಅದ್ಯಾವಾಗ ಬೆಲ್​ಬಾಟಮ್​​ನಲ್ಲಿ ಇಂದಿರಗಾಂಧಿ ಪಾತ್ರ ಕಾಣಿಸಿತೋ ಎಲ್ಲರ ಗಮನ ಇಂದಿರಗಾಂಧಿ ಪಾತ್ರದ ಮೇಲೆ ಬಿದಿದ್ದೆ. ಯಾರು ಈ ಇಂದಿರಗಾಂಧಿ ಪಾತ್ರದಾರಿ ಈ ಹಿಂದೆ ಈ ಕಲಾವಿದೆಯನ್ನ ಎಲ್ಲಿಯೂ ನಾವು ನೋಡಿಲ್ಲಲ್ಲ ಎಂದು ಚಿತ್ರಪ್ರೇಮಿಗಳು ಆಕಾಶ ನೋಡ್ತಿದಾಗಲೇ ಗೊತ್ತಾಗಿದ್ದು ಇಂದಿರಗಾಂಧಿ ಪಾತ್ರ ಮಾಡಿರೋದು 2000ನೇ ಇಸುವಿಯ ಮಿಸ್ ಯೂನಿವರ್ಸ್ ಮೋಹಕ ನಟಿ ಲಾರಾ ದತ್ತಾ ಅಂತ.

 

View this post on Instagram

 

A post shared by Lara Dutta Bhupathi (@larabhupathi)

ನಟಿ ಲಾರಾ ದತ್ತಾ ಮೂರು ವರ್ಷದ ನಂತರ ಮತ್ತೆ ಬಣ್ಣ ಹಚ್ಚಿ ಕ್ಯಾಮೆರಾಗೆ ಬೆಲ್​ಬಾಟಮ್​ ಚಿತ್ರಕ್ಕಾಗಿ ಕೈ ಮುಗಿದಿದ್ದಾರೆ.. ಲಾರಾ ದತ್ತಾ ಅವರ ಪಡ್ಡೆ ಫ್ಯಾನ್ಸ್ ಬೆಲ್​ಬಾಟಮ್​​​​ ಚಿತ್ರದ ಟ್ರೈಲರನ್ನ ಪೂರ್ತಿ ನೋಡಿದಾಗ ಎಲ್ಲಿಯೂ ಲಾರಾದತ್ತಾ ಅವರ ಸುಳಿವೇ ಸಿಗ್ಲಿಲ್ಲ… ಕಾರಣ ಅಷ್ಟು ಅದ್ಭುತವಾಗಿ ಲಾರಾ ದತ್ತಾರಿಗೆ ಮೇಕಪ್ ಮಾಡಿ ಇಂದಿರಗಾಂಧಿಯನ್ನಾಗಿಸಿದೆ ಚಿತ್ರತಂಡ.1984ರಲ್ಲಿ ನಡೆದ ವಿಮಾನ ಅಪಹರಣ ನೈಜ ಘಟನೆಯ ಸುತ್ತ ನಡೆದ ಘಟನೆಯನ್ನ ರಂಜಿತ್ ಎಮ್​ ತ್ರಿವಾರಿ ಡೈರೆಕ್ಷನ್ ಮಾಡಿದ್ದಾರೆ. ಲಾರಾ ದತ್ತಾ ಗಂಟೆ ಗಟ್ಟಲೇ ಕುಳಿತು ಮೇಕಪ್ ಮಾಡಿಸಿಕೊಂಡಿರೋ ವಿಡಿಯೋ ಮೇಕಿಂಗ್​​​ ಒಂದನ್ನ ಚಿತ್ರತಂಡ ಬಿಡುಗಡೆ ಮಾಡಿದೆ..ಭಾರತದ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ಲಾರಾ ದತ್ತಾ ಅಭಿನಯಿಸಿದ್ದು, ಅದ್ಭುತವಾದ ಮೇಕ್ ಓವರ್ ಮೂಲಕ ಗಮನ ಸೆಳೆದಿದ್ದಾರೆ.. ಈ ತಿಂಗಳ 19ನೇ ತಾರೀಖ್ ಬೆಲ್​ಬಾಟಮ್​​​​​​ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ನಿಲ್ಲಿದೆ.

Source: newsfirstlive.com Source link