ಒಲಿಂಪಿಕ್ಸ್​​ಗಿಂತಲೂ ಟ್ರೆಂಡಿಂಗ್​; ಸ್ಪರ್ಧೆ ಮುಖ್ಯವಲ್ಲ ಈ ಬ್ಯೂಟಿಗೆ ಎಲ್ಲ ಪದಕ ಕೊಡ್ಲೇಬೇಕ್ ಅಂತಿರೋ ಜನ

ಒಲಿಂಪಿಕ್ಸ್​​ಗಿಂತಲೂ ಟ್ರೆಂಡಿಂಗ್​; ಸ್ಪರ್ಧೆ ಮುಖ್ಯವಲ್ಲ ಈ ಬ್ಯೂಟಿಗೆ ಎಲ್ಲ ಪದಕ ಕೊಡ್ಲೇಬೇಕ್ ಅಂತಿರೋ ಜನ

ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯುತ್ತಿದೆ. ಕೆಲವು ಕ್ರೀಡಾಪಟುಗಳು ತಮ್ಮ ಸ್ಪರ್ಧೆಯ ಪ್ರದರ್ಶನದಿಂದ ಚರ್ಚೆಯಾಗುತ್ತಿದ್ರೆ, ಇನ್ನು ಕೆಲವ್ರು ತಮ್ಮ ಸೌಂದರ್ಯ, ಮೈಮಾಟದಿಂದ ಸುದ್ದಿಯಾಗ್ತಿದ್ದಾರೆ. ಅದ್ರಂತೆ ಸೌಂದರ್ಯದ ಖಣಿಯೇ ಆಗಿರೋ ಅಪ್ಸೆರೆಯೊಬ್ಬಳು ಇಂಟರ್​ನ್ಯಾಷನಲ್ ಕ್ರಷ್ ಆಗ್ಬಿಟ್ಟಿದ್ದಾಳೆ..! ಅದು ಎಷ್ಟರ ಮಟ್ಟಿಗೆ ಅಂದ್ರೆ.. ಸೋದರರೇ ಇಲ್ಲಿ ಸ್ಪರ್ಧೆ ಮುಖ್ಯವಲ್ಲ. ಚಿನ್ನ, ಬೆಳ್ಳಿ, ಕಂಚು ಯಾವ ಪದಕ ಇದೆಯೋ ಅದನ್ನೆಲ್ಲ ಮೊದಲು ಈಕೆಗೆ ಕೊಟ್ಟುಬಿಡಿ.. ಒಂದು ವೇಳೆ ಈಕೆ ಸ್ಪರ್ಧೆಯಲ್ಲಿ ಭಾಗವಹಿಸದೇ ಇದ್ರೂ ಮನೆಗೆ ಹೋಗಿಯಾದ್ರೂ ಕೊಟ್ಟು ಬನ್ನಿ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಜನ ಹೇಳ್ತಿದ್ದಾರೆ. ಆದರೆ ಇವರ ಅಸಲಿ ಕಥೆಯೇ ಬೇರೆ!

blank

ಅಂದ್ಹಾಗೆ ಮೋಹಕ ಹುಡುಗಿ ಹೆಸರು ತ್ಸುಯು.. ಈ ತೈವಾನ್ ದೇಶದ ಈ ಹುಡುಗಿಗೆ ಟೋಕಿಯೋ ಒಲಿಂಪಿಕ್ಸ್ ಬಹುದೊಡ್ಡ ಸ್ಟಾರ್​​ಗಿರಿಯನ್ನ ತಂದುಕೊಟ್ಟಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಿರುವ ಈಕೆ, ಯಾವ ದೇಶದವಳು ಅನ್ನೋದ್ರ ಬಗ್ಗೆ ಕ್ಲಾರೀಟಿ ಇಲ್ಲ. ಕೆಲವ್ರು ಚೀನಾದವ್ರು ಅಂತಾ ಹೇಳಿದ್ರೆ, ಇನ್ನು ಕೆಲವ್ರು ತೈವಾನ್ ಅಥವಾ ಕೋರಿಯಾದವಳು ಎನ್ನುತ್ತಿದ್ದಾರೆ.

blank

ವಿಷ್ಯ ಏನಪ್ಪ ಅಂದ್ರೆ ಟೊಕಿಯೋ ಒಲಿಂಪಿಕ್ಸ್​ಗೂ ಈಕೆಗೂ ಯಾವುದೇ ಸಂಬಂಧ ಇಲ್ಲ. ವೈರಲ್ ಆಗುತ್ತಿರುವ ತ್ಸುಯುವಿನ ವಿಡಿಯೋ 2019ರದ್ದು. ತ್ಸುಯು ತೈವಾನ್​ ಬೆಡಗಿ. ತೈವಾನೀಸ್ ಗಾಯಕಿಯಾಗಿರುವ ಈಕೆ ಅರ್ಚರಿ ಕ್ರೀಡೆಯ ಅಪಟ್ಟ ಅಭಿಮಾನಿ. ಜೂನ್ 14, 1999 ರಂದು ಜನಿಸಿರುವ ಈಕೆ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದಾಳೆ.

blank

ಇನ್ನು ವೈರಲ್ ಆಗಿರುವ ಫೋಟೋ ಹಾಗೂ ವಿಡಿಯೋಗಳು ಐಡಲ್ ಸ್ಟಾರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತೆಗೆದಿರುವ ಫೋಟೋ ಅಂತಾ ಹೇಳಲಾಗಿದೆ.

blank

ಆಕೆ ತನ್ನ ಹಾಡುವ ಪ್ರತಿಭೆಗೆ ಮಾತ್ರವಲ್ಲ, ಟ್ಸು ತನ್ನ ಸೌಂದರ್ಯಕ್ಕಾಗಿ ಸುದ್ದಿಯಾಗಿದ್ದಾಳೆ. ಯೂಟ್ಯೂಬ್‌ನಲ್ಲಿ ಇವರ ಮೊದಲ ಹಾಡು ಲೈಕ್ ಓಹ್-ಅಹ್ಹ್ 100 ಮಿಲಿಯನ್ ವೀಕ್ಷಣೆ ಜಗತ್ತಿನ ಗಮನ ಸೆಳೆದಿದ್ದಳು.

Source: newsfirstlive.com Source link