ಬಡವರ ಸಂಕಷ್ಟಕ್ಕೆ ಮಿಡಿದ ಡಾ.ಸೌಜನ್ಯ; ಹೊದಿಕೆ, ಆಹಾರ ಧಾನ್ಯ ವಿತರಣೆ

ಬಡವರ ಸಂಕಷ್ಟಕ್ಕೆ ಮಿಡಿದ ಡಾ.ಸೌಜನ್ಯ; ಹೊದಿಕೆ, ಆಹಾರ ಧಾನ್ಯ ವಿತರಣೆ

ಬೆಂಗಳೂರು: ಮಳೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನರಿಗಾಗಿ ಅಭ್ಯಾಸ್ ಸಂಸ್ಥೆಯ ಸಂಸ್ಥಾಪಕಿ ಹಾಗೂ ಮನೋವೈದ್ಯೆ ಡಾ.ಸೌಜನ್ಯ ವಸಿಷ್ಠ ಅವರು ಮಿಡಿದಿದ್ದಾರೆ.

ಮಳೆಯಿಂದ ಹಾನಿಗೊಳಗಾದ ಕಾಡುಗೋಡಿಯಲ್ಲಿರುವ ಬಡವರ ಜೋಪಡಿಗೆ ಭೇಟಿ ನೀಡಿದ ಅವರು, ಬಡವರ ಸಂಕಷ್ಟವನ್ನ ತಿಳಿದುಕೊಂಡರು. ಮಳೆ, ಚಳಿಯಿಂದ ಸ್ಲಂ ನಿವಾಸಿಗಳಿಗೆ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡರು. ನಂತರ ಬಡ ಮಕ್ಕಳಿಗೆ ಹಾಗೂ ನಿವಾಸಿಗಳಿಗೆ ರಾತ್ರಿ ಹೊತ್ತು ಮಲಗಲು ಹೊದಿಕೆಗಳು ಹಾಗೂ ಆಹಾರ ಧಾನ್ಯಗಳ ನೀಡಿ ಮಾನವೀಯತೆ ಮೆರೆದಿದ್ದಾರೆ.

blank

 

ಇದೇ ವೇಳೆ ಅವರು ಬಡಮಕ್ಕಳೊಂದಿಗೆ ಬೆರೆತು ಅವರ ಕಷ್ಟದ ಜೀವನದ ಬಗ್ಗೆ ಚರ್ಚಿಸಿದರು. ಬಳಿಕ ಸಹಾಯ ಸಂಘಗಳಿಗೆ ಹಾಗೂ ಸಾರ್ವಜನಿಕರಿಗೆ ಬಡವ ಸಂಕಷ್ಟಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು. ಮಳೆಯಿಂದ ಹಾನಿಗೊಳಗಾದವರಿಗೆ ಮನುಷ್ಯತ್ವ ಮೆರೆದು ಕೈಯಲ್ಲಾದಷ್ಟು ಸಹಾಯ ಮಾಡಿದಾಗ ನಮ್ಮ ಜೀವನಕ್ಕೆ ಅರ್ಥ ಇರುತ್ತದೆ ಎಂದು ಡಾ.ಸೌಜನ್ಯ ವಸಿಷ್ಠ ಅಭಿಪ್ರಾಯಪಟ್ಟರು.

Source: newsfirstlive.com Source link