ಆಳ ಸಮುದ್ರದಲ್ಲಿ ಮಗುಚಿದ ಬೋಟ್: 11 ಮೀನುಗಾರರ ರಕ್ಷಣೆ, ಓರ್ವ ಕಣ್ಮರೆ

ಆಳ ಸಮುದ್ರದಲ್ಲಿ ಮಗುಚಿದ ಬೋಟ್: 11 ಮೀನುಗಾರರ ರಕ್ಷಣೆ, ಓರ್ವ ಕಣ್ಮರೆ

ದಕ್ಷಿಣ ಕನ್ನಡ: ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತರಳಿದ್ದ ಬೋಟ್ ಮಗುಚಿ ಅನಾಹುತ ಸಂಭವಿಸಿದ ಘಟನೆ ಮಂಗಳೂರಲ್ಲಿ ನಡೆದಿದೆ. ದುರ್ಘಟನೆಯಲ್ಲಿ 11 ಮಂದಿ ಮೀನುಗಾರರನ್ನ ರಕ್ಷಣೆ ಮಾಡಿದ್ದು, ಓರ್ವ ಕಣ್ಮರೆಯಾಗಿದ್ದಾನೆ.

ಮಂಗಳೂರು ಬಂದರಿನಿಂದ ಆಳ ಸಮುದ್ರಲ್ಲಿ ಮೀನುಗಾರಿಕೆಗೆ ತೆರಳಿದ್ದ ಆದ್ಯ ಹೆಸರಿನ ಬೋಟ್ ಮೀನುಗಾರಿಕೆ ಮುಗಿಸಿ ಮರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಬೋಟ್​ ಮಗುಚಿದೊಡನೆ ಇತರೆ ಬೋಟ್​ನಲ್ಲಿದ್ದ ಮೀನುಗಾರರು ರಕ್ಷಣೆಗೆ ಧಾವಿಸಿದ್ದು 12 ಜನ ಮೀನುಗಾರರ ಪೈಕಿ 11 ಜನರನ್ನು ರಕ್ಷಿಸಿದ್ದು ಇನ್ನೋರ್ವ ಕಣ್ಮರೆಯಾಗಿದ್ದಾನೆ.

ಉಳ್ಳಾಲದ ಭಾನುಪ್ರಕಾಶ ಎನ್ನುವ ಮೀನುಗಾರನಿಗೆ ಸೇರಿದ ಬೋಟ್ ಇದ್ದಾಗಿದ್ದು, 11 ಜನ ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದು, ಕಣ್ಮರೆಯಾದ ಮೀನುಗಾರನಿಗೆ ತೀವ್ರ ಹುಡುಕಾಟ ನಡೆದಿದೆ.

Source: newsfirstlive.com Source link