ಬಳ್ಳಾರಿ MP ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ: ದೆಹಲಿಯಲ್ಲಿ ಬಿಎಲ್​ ಸಂತೋಷ್ ಭೇಟಿಯಾದ ರವಿ ಚನ್ನಣ್ಣನವರ್

ಬಳ್ಳಾರಿ MP ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ: ದೆಹಲಿಯಲ್ಲಿ ಬಿಎಲ್​ ಸಂತೋಷ್ ಭೇಟಿಯಾದ ರವಿ ಚನ್ನಣ್ಣನವರ್

ಬೆಂಗಳೂರು: ಐಪಿಎಸ್​ ಅಧಿಕಾರಿ ರವಿ ಡಿ.ಚನ್ನಣ್ಣನವರ್​ ರಾಜಕೀಯ ಸೇರುತ್ತಾರೆ ಅನ್ನೋ ವದಂತಿ ಮತ್ತಷ್ಟು ದಟ್ಟವಾಗಿದೆ. ಅದಕ್ಕೆ ಕಾರಣ ಇತ್ತೀಚೆಗೆ ಅವರು ಬಿಜೆಪಿ ವರಿಷ್ಠರನ್ನ ಭೇಟಿಯಾಗಿರೋದು! ಈ ಮೂಲಕ ಕರ್ನಾಟಕದ ಸಿಂಗಂ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ.

ಹೌದು..! ರವಿ ಡಿ ಚನ್ನಣ್ಣನವರ್ ಅವರು ಕಳೆದ ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನ ಭೇಟಿಯಾಗಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿಯ ಹಳೆ ಆಫೀಸ್​​ನಲ್ಲಿ ಬಿ.ಎಲ್‌.ಸಂತೋಷ್​ರನ್ನ ಭೇಟಿಯಾಗಿ ಪಕ್ಷ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

blank

ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂತೋಷ್ ಭೇಟಿಗಾಗಿ ಚನ್ನಣ್ಣನವರ್ ಕಾದು ಕೂತಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿಟಿ ರವಿ ಕೂಡ ಆಗಮಿಸಿದ್ದರು. ನಂತರ ಸಿಟಿ ರವಿಯವರೇ ಚನ್ನಣ್ಣನವರ್ ಅವರನ್ನ ಸಂತೋಷ್​ಗೆ ಭೇಟಿ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ ರವಿ ಚನ್ನಣ್ಣನವರ್ ಮತ್ತು ಬಿಎಲ್​ ಸಂತೋಷ್ ಮಧ್ಯೆ ಬಳ್ಳಾರಿ ಲೋಕಸಭೆ ಕ್ಷೇತ್ರದ ಬಗ್ಗೆ ಚರ್ಚೆ ನಡೆದಿದೆ. ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಟಿಕೆಟ್ ಪಡೆದು ಸ್ಪರ್ಧಿಸುವ ಬಗ್ಗೆ ಇಬ್ಬರು ಗಣ್ಯರು ಚರ್ಚೆ ನಡೆಸಿದ್ದಾರೆ ಅಂತಾ ಹೇಳಲಾಗಿದೆ. ಇನ್ನು ಚನ್ನಣ್ಣನವರ್ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿರುವ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಕೂಡ ದೆಹಲಿಯಲ್ಲೇ ಇದ್ದರು.

ರವಿ ಡಿ.ಚನ್ನಣ್ಣನವರ್ ಇತ್ತೀಚೆಗೆ ವಿವಿಧ ಮಠಾಧೀಶರುಗಳನ್ನ ಭೇಟಿಯಾಗಿ ಆಶೀರ್ವಾದ ಕೂಡ ಪಡೆದುಕೊಂಡಿದ್ದಾರೆ. ಇದೀಗ ಬಿಜೆಪಿ ಹೈಕಮಾಂಡ್ ನಾಯಕರನ್ನ ಭೇಟಿಯಾಗಿರೋದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ರಾಜಕೀಯಕ್ಕೆ ರವಿ ಚೆನ್ನಣ್ಣನವರ್? -ಗುಮಾನಿ ಹುಟ್ಟಿಸಿದ IPS ಅಧಿಕಾರಿಯ ‘ಮಠಗಳ ಯಾತ್ರೆ’

Source: newsfirstlive.com Source link