ಸಲಾರ್​​ ಸಿನಿಮಾದಲ್ಲಿ ಪ್ಯಾನ್​​ ಇಂಡಿಯಾ ಸ್ಟಾರ್​​ ಪ್ರಭಾಸ್​​ ಜತೆ ಕತ್ರಿನಾ ಕೈಫ್​​​​ ರೊಮ್ಯಾನ್ಸ್…

ಸಲಾರ್​​ ಸಿನಿಮಾದಲ್ಲಿ ಪ್ಯಾನ್​​ ಇಂಡಿಯಾ ಸ್ಟಾರ್​​ ಪ್ರಭಾಸ್​​ ಜತೆ ಕತ್ರಿನಾ ಕೈಫ್​​​​ ರೊಮ್ಯಾನ್ಸ್…

ಟೈಟಲ್ ಪೋಸ್ಟರ್ ಬಿಟ್ಟು ಪ್ರೇಕ್ಷಕರನ್ನ ಸೇಳೆದಿರೋ ಸಲಾರ್ ಬಳಗ ಸೈಲೆಂಟ್ ಆಗಿ ಹೈದ್ರಾಬಾದ್​​ನಲ್ಲಿ ಶೂಟಿಂಗ್ ಮಾಡ್ಕೊಂಡು ಇದೆ.. ಆದ್ರೆ ಕೆಜಿಎಫ್​ ಚಾಪ್ಟರ್ 2 ಡಬ್ಬಿಂಗು , ಸಲಾರ್ ಶೂಟಿಂಗು ಅಂತ ಬ್ಯುಸಿ ಇರೋ ಪ್ರಶಾಂತ್ ನೀಲ್​​​ಗೆ ಬಾಲಿವುಡ್​ನ ಆ ಹೀರೋಯಿನ್ ಮೇಲೆ ಬಹಳನೇ ಚಿಂತೆ ಶುರುವಾಗಿದೆ.

ಪ್ರಶಾಂತ್ ನೀಲ್ ಕಲ್ಪನೆಯ ಸಲಾರ್ ಸಿನಿಮಾ ಈ ಹಿಂದೆ ಆಗಾಗ ಏನಾದ್ರೊಂದು ಸುದ್ದಿ ಮಾಡ್ತಿತ್ತು.. ಆದ್ರೆ ಎರಡನೇ ಲಾಕ್​ ಡೌನ್ ನಂತರ ಸೈಲೆಂಟ್ ಆಗಿತ್ತು.. ಈಗ ಮತ್ತೆ ಸಲಾರ್ ಸಿನಿಮಾದ ಬಗ್ಗೆ ಹೊಸ್ ಹೊಸ ಸಮಾಚಾರಗಳು ಹೊರ ಬಿಳ್ತಿವೆ.. ಬಾಲಿವುಡ್​​ನ ಆ ಸ್ಟಾರ್ ಹೀರೋಯಿನ್ ಮೇಲೆ ಕಣ್ಣು ಹಾಕಿದೆ ಸಲಾರ್ ಸಿನಿ ಬಳಗ. ಸಲಾರ್ ಸಿನಿಮಾ ಪ್ಯಾನ್ ಇಂಡಿಯ ಮೂವಿ ಆಗಿರೋ ಕಾರಣ ಬಾಲಿವುಡ್ ಬಂಗಾರಿಯೊಬ್ಬಳನ್ನ ಕರಸಿ ಕುಣಿಸಿದ್ರೆ ಸಿನಿಮಾಕ್ಕೆ ಪ್ಲಸ್ ಆಗುತ್ತೆ ಅನ್ನೋದು ನೀಲ್ ಬಳಗ ಲೆಕ್ಕಚಾರ.ಹಾಗಾದ್ರೆ ಯಾವ ನಟಿಮಣಿಯನ್ನ ಬಾಲಿವುಡ್ ಲೋಕದಿಂದ ಇಳಿಸೋ ಪ್ಲಾನ್ ಮಾಡುತ್ತಿದೆ ಅನ್ನೋದಕ್ಕೆ ಸಿಕ್ಕಿರೋ ಉತ್ತರ ಕತ್ರಿನಾ ಕೈಫ್​​​. ಐಟಂ ಸಾಂಗ್ ಆಗ್ಲಿ , ರೊಮ್ಯಾಟಿಮ್ ಸಾಂಗ್ ಆಗ್ಲಿ.. ಕತ್ರಿನಾ ಕೈಫ್ ಅಲ್ಲಿದ್ರೆ ಆ ಸ್ಕೀನೇ ಕಲರ್ ಫುಲ್ ಪ್ಲಸ್ ಬ್ಯುಟಿಫುಲ್​​.. ಬಾಲಿವುಡ್ ಲೋಕದಲ್ಲಿ ಸೇಳೆಯಲು ಸಲಾರ್ ಸಿನಿಮಾ ಬಳಗ ಕತ್ರಿನಾ ಕೈಫ್ ಅವರನ್ನ ಕ್ಯಾಬರೆ ಹಾಡೊಂದಕ್ಕೆ ಕರೆಸಿ ಕುಣಿಸೋ ಯೋಜನೆಯಲ್ಲಿದೆ.

 

Source: newsfirstlive.com Source link