ಉಳ್ಳಾಲ ಮಾಜಿ ಶಾಸಕನ ಪುತ್ರನಿಗೆ ISIS ನಂಟು?; ಬಿಎಂ ಇದಿನಬ್ಬ ಮಗನ ಮನೆ ಮೇಲೆ NIA ದಾಳಿ ಮಾಡಿದ್ಯಾಕೇ?

ಉಳ್ಳಾಲ ಮಾಜಿ ಶಾಸಕನ ಪುತ್ರನಿಗೆ ISIS ನಂಟು?; ಬಿಎಂ ಇದಿನಬ್ಬ ಮಗನ ಮನೆ ಮೇಲೆ NIA ದಾಳಿ ಮಾಡಿದ್ಯಾಕೇ?

ಮಂಗಳೂರಿನಲ್ಲೂ ನಟೋರಿಯಸ್ ಐಸಿಐಎಸ್ ಉಗ್ರರು ನೆಲೆ ಕಂಡುಕೊಂಡ್ರಾ? ಸಿರಿಯಾದ ಭಯೋತ್ಪಾದನೆ ಸಂಘಟನೆ ಜೊತೆಗೆ ಕರಾವಳಿಯ ಕೆಲ ಯುವಕರಿಗೆ ಲಿಂಕ್ ಇದ್ಯಾ? ಹಲವು ದೇಶಗಳಲ್ಲಿ ಮಾರಣಹೋಮ ನಡೆಸಿರುವ ಉಗ್ರ ಸಂಘಟನೆ ಭಾರತದಲ್ಲೂ ನೆಲೆವೂರಲು ಪ್ರಯತ್ನಿಸುತ್ತಿದ್ಯಾ? ಜಗತ್ತಿನಾದ್ಯಂತ ಸಾವಿರಾರು ಜನರ ನೆತ್ತರು ಹರಿಸಿದ ಭಯೋತ್ಪಾದಕ ಸಂಘಟನೆ ISIS ಕರಿನೆರಳು ಕಡಲ ತಡಿಯ ಹೊರವಲಯಕ್ಕೂ ವಿಸ್ತರಿಸ್ತಾ? ಹೀಗೊಂದು ಪ್ರಶ್ನೆ ಇದೀಗ ಕರಾವಳಿ ಜನರ ಮನದಲ್ಲಿ ಓಡಾಡ್ತಿದೆ.

ಅದ್ಕೆ ಕಾರಣವಾಗಿದ್ದು ಮೊನ್ನೆ ಮಂಗಳೂರಿನ ಹೊರವಲಯದ ಉಳ್ಳಾಲದಲ್ಲಿ ನಡೆದ NIA ದಾಳಿ.
ಬುಧವಾರ ಬೆಳ್ಳಂಬೆಳಗ್ಗೆ ಬಂದರು ನಗರ ಬೆಚ್ಚಿ ಬಿದ್ದಿತ್ತು. ಅದೊಂದು ಸುದ್ದಿ ಮಂಗಳೂರಿನಾದ್ಯಂತ ಮಿಂಚಿನ ವೇಗದಲ್ಲಿ ಪಸರಿಸಿ, ಜನರನ್ನು ಆತಂಕಗೊಳ್ಳುವಂತೆ ಮಾಡಿತ್ತು. ಹಸಿರ ಹೊದ್ದ ಈ ಮನೆಯ ಅಂತರಾಳದಿಂದ ಹೊರ ಬಂದ ನ್ಯೂಸ್​ವೊಂದು ದೇಶವನ್ನೇ ದಂಗಾಗುವಂತೆ ಮಾಡಿತ್ತು.

ಮಾಜಿ ಶಾಸಕನ ಪುತ್ರನ ಮನೆ ಮೇಲೆ NIA ದಾಳಿ
ಕಾಶ್ಮೀರ – ಬೆಂಗಳೂರು, ಬೆಂಗಳೂರು -ಮಂಗಳೂರು
ಮಾಜಿ ಶಾಸಕನ ಪುತ್ರನಿಗಿದ್ಯಾ ISIS ನಂಟು?

ಹೌದು. ಭಾರತೀಯ ರಾಷ್ಟೀಯ ಭದ್ರತಾ ಪಡೆ ಉಗ್ರರ ಬೇಟೆಗೆ ಇಳಿದಿದೆ. ಕಾಶ್ಮೀರದಿಂದ ಕರಾವಳಿ ತನ್ಕಾ ಉಗ್ರರ ಹೆಜ್ಜೆ ಗುರುತುಗಳನ್ನು ಜಾಲಾಡಲು ಹೊರಟಿದೆ. ಜಮ್ಮು ಕಾಶ್ಮೀರ, ಬೆಂಗಳೂರು, ಮಂಗಳೂರಿನಲ್ಲಿ ನಿನ್ನೆ ದಾಳಿ ಮಾಡಿರುವ ತಂಡ, ಐವರು ಶಂಕಿತ ವ್ಯಕ್ತಿಗಳನ್ನು ವಶ ಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಬಂದ NIA ಟೀಂ,ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ಕೂಡ ದಾಳಿ ನಡೆಸಿದೆ.
ಉಗ್ರರ ರಣಬೇಟೆಗೆ ಇಳಿದಿರುವ ರಾಷ್ಟ್ರೀಯ ಭದ್ರತಾ ದಳದ ಅಧಿಕಾರಿಗಳ ವಾಹನ, ಮಾಜಿ ಶಾಸಕ ದಿವಂಗತ ಬಿ.ಎಂ.ಇದಿನಬ್ಬ ಅವರ ಪುತ್ರ ಬಾಷಾ ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ಮೇಲೆ ಭಯಾನಕ ಸತ್ಯ ಬಯಲಾಗಿದೆ. ಹೌದು. ISISನ ಮುಖಂಡರೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ದಿವಂಗತ ಬಿ.ಎಂ.ಇದಿನಬ್ಬ ಅವರ ಪುತ್ರ ಬಾಷಾರನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಒಂದೊಂದೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ಸಿರಿಯಾ ಮೂಲದ ಉಗ್ರರ ಸಂಘಟನೆಯ ಜೊತೆ ನಂಟು?
3 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆ
2 ವರ್ಷಗಳ ಹಿಂದೆ ಕೇರಳದ ಹಲವರು ISIS​ಗೆ ಸೇರ್ಪಡೆ?
ಶ್ರೀಲಂಕಾಗೆ ಹೋಗ್ತೀನಿ ಎಂದ ಅಜ್ಮಾಲಾ ಗಂಡ ಹೋಗಿದೆಲ್ಲಿಗೆ?

ಈ ದಾಳಿಯ ವೇಳೆ ಕೇಳಿ ಬಂದಿರುವ ಮುಖ್ಯವಾದ ಹೆಸರು ಅಂದ್ರೆ ಅಜ್ಮಲಾಳದ್ದು. ಈ ಅಜ್ಮಲಾ ಬೇರೆ ಯಾರು ಅಲ್ಲ. ಇದೇ ಬಾಷಾರ ಪುತ್ರಿಯ ಮಗಳು. ಈ ಅಜ್ಮಾಲನ್ನ ವರ್ಷಗಳ ಹಿಂದೆ ಕೇರಳ ಮೂಲದ ಸಿಯಾಜ್ ಎಂಬಾತನ ಜೊತೆ ಮದುವೆ ಮಾಡಿ ಕೊಡಲಾಗಿತ್ತು. ಎಂಬಿಎ ಪದವಿ ಪಡೆದಿದ್ದಿ ಸಿಯಾಜ್ ಮದುವೆಯ ನಂತರ ​ ಉನ್ನತ ಶಿಕ್ಷಣಕ್ಕಾಗಿ ಶ್ರೀಲಂಕಾಗೆ ಹೋಗಿ ಬರ್ತೀನಿ ಎಂದು ಮನೆಯಿಂದ ಹೋಗಿದ್ದಾನೆ. ಆದ್ರೆ ಶ್ರೀಲಂಕಾಗೆ ಉನ್ನತ ಶಿಕ್ಷಣ ಪಡೆಯಲು ಹೋಗ್ತೀನಿ ಎಂದವನು ಮತ್ತೆ ಯಾರ ಸಂಪರ್ಕಕ್ಕೆ ಸಿಕ್ಕಿರ್ಲಿಲ್ಲ. ಆತ ಶ್ರೀಲಂಕಾದಿಂದ ದುಬೈಗೆ ಹೋಗಿ, ಅಲ್ಲಿಂದ ಸಿರಿಯಾಗೆ ಎಂಟ್ರಿ ಕೊಟ್ಟು ಭಯೋತ್ಪಾದನೆ ಸಂಘಟನೆ ಸೇರಿರುವ ಶಂಕೆ ಕೂಡ ಇದೆ.

ಇದಾದ ಕೆಲವೇ ದಿನಗಳಲ್ಲಿ ಅಜ್ಮಲಾ ಕೂಡ ನಿಗೂಢವಾಗಿ ನಾಪತ್ತೆಯಾಗಿತ್ತು. ಈಕೆ ಕೂಡ ತನ್ನ ಕುಟುಂಬ ಸಮೇತ ಸಿರಿಯಾಗೆ ತೆರಳಿ, ISIS ಸಂಘಟನೆ ಸೇರಿದ್ದಾಳೆ ಅನ್ನೋ ಮಾಹಿತಿ ಕೂಡ ಪೊಲೀಸರಿಗೆ ಸಿಕ್ಕಿತ್ತು. ಈ ನಡುವೆ ಕಳೆದ ಎರಡು ವರ್ಷ ಹಿಂದೆ ಕಾಸರೋಡಿನ 17 ಜನರು ಸಿರಿಯಾದ ISIS ಸೇರಿರುವ ಕುರಿತು ಭಾರತದ ಗುಪ್ತಚರ ಇಲಾಖೆ ಕೇರಳದ ಪೊಲೀಸರಿಗೆ ಮಾಹಿತಿ ನೀಡಿತ್ತು. ಈ ಬಗ್ಗೆ ಕೇರಳ ಆಂತರಿಕ ಭದ್ರತಾ ಹಾಗೂ ಗುಪ್ತಚರ ಇಲಾಖೆ ಹಾಗೂ ರಾಷ್ಟ್ರೀಯ ತನಿಖಾ ದಳ ತನಿಖೆ ಆರಂಭಿಸಿತ್ತು.

ISIS​ ಸೇರಿರುವ ಕಾಸರಗೋಡಿನ 17 ಜನರ ಪೈಕಿ ಅಜ್ಮಾಲ ಕುಟುಂಬ ಕೂಡ ಸೇರಿದೆ ಅನ್ನೋ ಅನುಮಾನ ಕೂಡ ರಾಷ್ಟೀಯ ಭದ್ರತಾ ದಳದ ಅಧಿಕಾಗಳಿಗಿತ್ತು. ಇದ್ರಿಂದ ಇವರ ಕುಟುಂಬದ ಮೇಲೆ NIA ಅಧಿಕಾರಿಗಳು ಒಂದು ಕಣ್ಣಿಟ್ಟಿದ್ರು. ಕುಟುಂದವರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಅಧಿಕಾರಿಗಳಿಗೆ ಕುಟುಂಬದ ISIS​ ಬಗ್ಗೆ ಮೃಧು ಧೋರಣೆ ತೋರುತ್ತಿರುವ ಮಾಹಿತಿ ಸಿಕ್ಕಿದೆ. ಇದೇ ಆಧಾರದಲ್ಲಿ ನಿನ್ನೆ ದಾಳಿ ಮಾಡಿರುವ ಅಧಿಕಾರಿಗಳು ಹಲವು ರಹಸ್ಯ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ದಾಳಿ ವೇಳೆ ಮಾಜಿ ಶಾಸಕ ದಿವಂಗತ ಇದಿನಬ್ಬ ಅವರ ಮೊಮ್ಮಗನಾದ ಅಬ್ದುಲ್ ರೆಹಮಾನ್ ನನ್ನು ಬಂಧಿಸಲಾಗಿದೆ.

ಉಗ್ರ ಸಂಘಟನೆಯೊಂದಿಗೆ ಮೃದು ಧೋರಣೆ ಹೊಂದಿತ್ತಾ ಕುಟುಂಬ?
ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಇದಿನಬ್ಬ ಪುತ್ರ ಬಿ.ಎಂ. ಬಾಷಾ ಕುಟುಂಬ ಉಗ್ರ ಸಂಘಟನೆಯೊಂದಿಗೆ ಮೃಧು ಧೋರಣೆ ಹೊಂದಿದ್ದರ ಕುರಿತು ಮಾಹಿತಿ ಕೂಡ ಐಎಮ್​.ಎ ಅಧಿಕಾರಿಗಳಿಗೆ ಸಿಕ್ಕಿದೆ. ಅಲ್ಲದೆ ಬಾಷಾ ಪುತ್ರ ಅನಾಸ್ ಹಾಗೂ ಪತ್ನಿ ಮರೀಯಂರನ್ನು ಹಾಗೂ ಅವರ ಹೆಂಡತಿ ISIS​ಗೆ ಸಂಬಂಧಿಸಿದ ಯೂಟ್ಯೂಬ್ ಚಾನೆಲ್​​ಗಳನ್ನು ಸಬ್​​ಸ್ಕ್ರೈಬ್ ಮಾಡಿ, ಮೃದುಧೋರಣೆ ಅನುಸರಿಸಿದ್ದರು ಎನ್ನಲಾಗಿದೆ. ಅಲ್ಲದೆ, ISIS ಸಂಪರ್ಕ ಮತ್ತು ಜಮ್ಮು ಕಾಶ್ಮೀರದ ಉಗ್ರ ಸಂಘಟನೆಯ ಯುವಕರ ಜೊತೆ ಮೊಬೈಲ್ ಹಾಗೂ ಇಮೇಲ್ ಮೂಲಕ ಸಂಪರ್ಕ ಹೊಂದಿದ್ದರಂತೆ. ಈ ಹಿನ್ನೆಲೆ ಎನ್ಐಎ ಅಧಿಕಾರಿಗಳು ಎಲೆಕ್ಟ್ರಾನಿಕ್ ಎವಿಡೆನ್ಸ್​ಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಕರಾವಳಿ ಯುವಕರ ಬ್ರೈನ್ ವಾಶ್ ಮಾಡಿದ್ರಾ ಭಟ್ಕಳ ಬ್ರದರ್ಸ್?
ಮಂಗಳೂರಿನಲ್ಲಿ ಕೋಮು ವೈರಸ್​ ಜೊತೆಗೆ ಉಗ್ರರ ವೈರಸ್?

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೂತು ಇಂಡಿಯನ್ ಮುಜಾಯಿದ್ದೀನ್ ಸಂಘಟನೆ ಜೊತೆಗೆ ಕೈಜೋಡಿಸಿ, ವಿಧ್ವಂಸಕ ಕೃತ್ಯ ಎಸಗುತ್ತಿದ್ದ ರಿಯಾಜ್ ಭಟ್ಕಳ್ ಹಾಗು ಯಾಸೀನ್​ ಭಟ್ಕಳ್ ಕರಾವಳಿಯ ಹಲವು ಯುವಕರ ಬ್ರೈನ್ ವಾಶ್ ಮಾಡಿರುವ ಕುರಿತ ಮಾತುಗಳ ಪದೇ ಪದೇ ಪ್ರತಿಧ್ವನಿಸುತ್ತಿತ್ತು . ಈ ಪಾಪಿಗಳು ಮಂಗಳೂರಲ್ಲಿ ಕೂತು ವಿಧ್ವಂಸಕ ಕೃತ್ಯಕ್ಕೆ ಕುಮ್ಮಕ್ಕು ನೀಡ್ತಿದ್ರು ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಇದ್ರಿಂದ ಮಂಗಳೂರು ವಲಯದ ಕೆಲ ಯುವಕರಿಗೆ ಹಿಂದಿನಿಂದಲೂ ಭಯೋತ್ಪಾದಕ ಸಂಘಟನೆ ಜತೆ ನಂಟು ಇರಬಹುದು ಕುರಿತು ಅನುಮಾನ ಮೂಡಿತ್ತು. ಇದೀಗ ಆ ಅನುಮಾನ ನಿಜವಾಯ್ತಾ ಅನ್ನೋ ಪ್ರಶ್ನೆ ಕೂಡ ಉಧ್ವವಾಗಿದೆ. ಅಲ್ಲದೆ ಸಾಮಾಜಿಕ ಜಾಲಾತಾಣಗಲ್ಲಿ ಉಗ್ರ ಸಂಘಟನೆಗಳಿಗೆ ಹಣ ಕಲೆಕ್ಟ್ ಮಾಡುವ ಕೆಲಸದಲ್ಲೀ ಇವರು ಸಕ್ರೀಯರಾಗಿದ್ರು ಅನ್ನೋ ಆರೋಪ ಕೂಡ ಕೇಳಿ ಬಂದಿದೆ. ಪೊಲೀಸರು ಇವರ ಜೊತೆಗೆ ಇನ್ಯಾರ್ಯಾರು ಸಂಪರ್ಕ ಇದ್ರು ಅನ್ನೋದರ ಕುರಿತು ಇನ್​ಫರ್ಮೇಶನ್ ಕಲೆ ಹಾಕಲು ಮುಂದಾಗಿದ್ದಾರೆ.

ಒಂದು ಕಡೆ ಕರಾವಳಿಯಲ್ಲಿರುವ ಕೋಮು ವೈರಸ್ ಜನರ ನೆಮ್ಮದಿಗೆ ಕೊಳ್ಳಿ ಇಟ್ಟರೆ, ಮಗದೊಂದು ಕಡೆ ಇದೀಗ ಉಗ್ರರ ಕರಿನೆರಳಿನ ಕುರಿತು ಜನರಲ್ಲಿ ಆತಂಕ ಮೂಡಿಸಿದೆ. ನಿನ್ನೆಯ ನಡೆದ ದಾಳಿಯ ಬಳಿಕ ಹೊ ಬರ್ತಿರುವ ಒಂದೊಂದೆ ವಿಷ್ಯಾಗಳು ಜನರಲ್ಲಿ ಆತಂಕ ಹುಟ್ಟಿ ಹಾಕಿದೆ. ಇಷ್ಟು ದಿನ ಎಲ್ಲೋ ದೂರದ ಕಾಶ್ಮೀರದಲ್ಲಿ ಕಾಣಿಸಿಕೊಳ್ತಿದ್ದ ಉಗ್ರರು ಇದೀಗ ತಮ್ಮ ಕೂಗಳತೆಯ ದೂರದಲ್ಲಿ ವಾಸ ಮಾಡ್ತಿದ್ರಾ? ಅನ್ನೋ ಸುದ್ದಿ ಮಂಗಳೂರು ಜನರ ನೆಮ್ಮದಿ ಹಾರಿ ಹೋಗುವಂತ್ತಾಗಿದೆ.

ಭಾರತದಲ್ಲಿ ISIS ತಳವೂರಲು ಪ್ರಯತ್ನ?
ಸ್ಥಳೀಯ ಯುವಕರಿಂದಲೇ ಕೃತ್ಯ ಎಸಗಲು ಯತ್ನ?

ಸಿರಿಯಾ ಇರಾಕ್​ನಲ್ಲಿ ನೆಲೆ ಕಳೆದುಕೊಂಡಿರುವ ಐಸಿಎಸ್ ಭಾರತದಲ್ಲಿ ತಳವೂರಕ್ಕೆ ಪ್ರಯತ್ನ ಮಾಡ್ತಿದ್ಯಾ ಅನ್ನೋ ಅನುಮಾನ ಕೂಡ ಮೂಡಿದೆ. ಜಗತ್ತಿನಾದ್ಯಂತ ತನ್ನ ಕರಾಳ ಕಬಂಧ ಬಾಹುಗಳನ್ನ ಚಾಚಿರುವ ಈ ಉಗ್ರ ಸಂಘಟನೆಯ ಕ್ರೂರತೆಗೆ ಈಗಾಗಲೆ ಹಲವು ದೇಶಗಳು ನಲುಗಿ ಹೋಗಿದೆ. ಇದನ್ನು ಭಾರತಕ್ಕೂ ವಿಸ್ತರಿಸಲು ಪಾಪಿಗಳು ಪ್ರಯತ್ನಿಸುತ್ತಿದ್ದಾರಾ ಅನ್ನೋ ಅನುಮಾನ ಕೂಡ ಮೂಡಿದೆ.ಅಷ್ಟೇ ಅಲ್ಲ, ಭಾರತದ ಗಡಿ ದಾಟಿ ಬಂದು ಇಲ್ಲಿ ವಿಧ್ವಂಸಕ ಕೃತ್ಯ ಎಸಗುವುದು ಅಸಾಧ್ಯ ಅಂದ್ಕೊಂಡಿರುವ ಪಾಪಿಗಳು, ಇಲ್ಲಿಯ ಸ್ಥಳೀಯ ಯುವಕರ ಮೈಂಡ್ ವಾಶ್ ಮಾಡಿ, ಅವರಿಂದಲೇ ಕೃತ್ಯ ಎಸಗುವು ಪ್ಲಾನ್ ಹಾಕ್ಕೊಂಡಿದ್ಯಾ ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಪೊಲೀಸರು ಪ್ರಕರಣದ ಆಳಕ್ಕೆ ಇಳಿದಿದ್ದು,ಯಾರೆಲ್ಲಾ ಈ ಜಾಲದಲ್ಲಿ ಇದ್ದಾರೆ ಅನ್ನೋದರ ತನಿಖೆ ಮುಂದುವರೆಸಿದ್ದಾರೆ.

ಕೇರಳದ ಕೆಲ ಯುವಕರು ಉಗ್ರರ ಜೊತೆ ಸಂಪರ್ಕ ಹೊಂದಿದ್ದರ ಕುರಿತು ಈ ಹಿಂದೆ ಕೂಡ ಗುಪ್ತಚರ ಇಲಾಖೆ ಎಚ್ಚರಿಸುತ್ತಲೆ ಬಂದಿತ್ತು. ಇದೀಗ ಉಳ್ಳಾಲದಲ್ಲೂ ಕೆಲ ಯುವಕರು ಉಗ್ರ ಸಂಘಟನೆಯ ಜೊತೆ ಒಲವು ತೋರಿರುವ ಬಗ್ಗೆ ಅನುಮಾನ ಮೂಡಿದೆ. ಅಧಿಕಾರಿಗಳು ಈ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದು, ತನಿಖೆಯಿಂದ ಮತ್ತಷ್ಟು ಸ್ಫೋಟಕ ಸತ್ಯಗಳು ಹೊರ ಬರುವ ಸಾಧ್ಯತೆ ಇದೆ.

Source: newsfirstlive.com Source link