ಸತತ 24 ಗಂಟೆ ಬಳಿಕ ED ದಾಳಿ ಅಂತ್ಯ; ಮಾಜಿ ಸಚಿವ ಜಮೀರ್​​ ಹೇಳಿದ್ದೇನು?

ಸತತ 24 ಗಂಟೆ ಬಳಿಕ ED ದಾಳಿ ಅಂತ್ಯ; ಮಾಜಿ ಸಚಿವ ಜಮೀರ್​​ ಹೇಳಿದ್ದೇನು?

ಬೆಂಗಳೂರು: ಐಎಂಎ ವಚನೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಕಾರಣ ಚಾಮರಾಜಪೇಟೆ​ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ED ಅಧಿಕಾರಿಗಳು ನಡೆಸಿದ ದಾಳಿ ಈಗ ಅಂತ್ಯಗೊಂಡಿದೆ. ಗುರುವಾರ ಬೆಳಿಗ್ಗೆ ಬೆಂಗಳೂರಿನ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿಯಿರುವ ಜಮೀರ್​​ ನಿವಾಸದ ಮೇಲೆ ದಾಳಿ ಮಾಡಿದ್ದ ED ಅಧಿಕಾರಿಗಳು 24 ಗಂಟೆಗಳ ಪರಿಶೀಲನೆ ನಡೆಸಿ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಜಮೀರ್ ನಿವಾಸ, ಕಚೇರಿ, ಫ್ಲ್ಯಾಟ್‌ ಮೇಲೆ ಭಾರೀ ದೊಡ್ಡ ED ಅಧಿಕಾರಿಗಳ ತಂಡ ರೇಡ್​​ ಮಾಡಿತ್ತು. ಜತೆಗೆ ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ರೇಡ್ ಮಾಡಿ ಸಾಕಷ್ಟು ವಿಚಾರಣೆ ನಡೆಸಿದರು. ಈಗ ವಿಚಾರಣೆ ಅಂತ್ಯಗೊಂಡಿರುವ ಬೆನ್ನಲ್ಲೇ ಜಮೀರ್​​ ಖಾನ್​​​ ಮಾಧ್ಯಮದವರೊಂದಿಗೆ ಮಾತಾಡಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್​ಗೆ ಇಡಿ ಶಾಕ್​ -ಮನೆ, ಕಚೇರಿ ಮೇಲೆ ಇಡಿ ದಾಳಿ

ED ಅಧಿಕಾರಿಗಳ ದಾಳಿ ಈ ಮುಗಿದಿದೆ. ನಾನು ನಿರ್ಮಿಸಿದ ಮನೆಯ ಸಂಬಂಧ ಪರಿಶೀಲನೆಗಾಗಿ ಇವರು ದಾಳಿ ನಡೆಸಿದ್ದಾರೆ. ಅಧಿಕಾರಿಗಳಿಗೆ ಎಲ್ಲಾ ರೀತಿಯ ಅಗತ್ಯ ಸಹಕಾರವನ್ನು ನೀಡಿದ್ದೇನೆ. ಮುಂದೆಯೂ ಸಹಕರಿಸಲಿದ್ದೇನೆ ಎಂದರು.

Source: newsfirstlive.com Source link