ಯೋ ಯೋ ಹನಿ ಸಿಂಗ್ ಕರ್ಮಕಾಂಡದ ವಿರುದ್ಧ ರೊಚ್ಚಿಗೆದ್ದು ದೂರು ನೀಡಿದ್ದ ಪತ್ನಿ; ಮುಂದೇನಾಯ್ತು?

ಯೋ ಯೋ ಹನಿ ಸಿಂಗ್ ಕರ್ಮಕಾಂಡದ ವಿರುದ್ಧ ರೊಚ್ಚಿಗೆದ್ದು ದೂರು ನೀಡಿದ್ದ ಪತ್ನಿ; ಮುಂದೇನಾಯ್ತು?

ಇವನು ನಿಂತು ಹಾಡುತ್ತಿದ್ದರೆ ಲುಂಗಿ ಕಟ್ಟಿ ಕುಣಿಯ ಬೇಕು ಅಷ್ಟು ಮಜ ನೀಡುತ್ತೆ. ತನ್ನ ನೂತನ ಶೈಲಿಯ ಗಾಯನದಿಂದ ಲವ್ ಡೋಸ್ ನೀಡಿದವನು. ಬ್ಲೂ ಐಸ್ ನ ಸೌಂದರ್ಯವನ್ನು ಪರಿಚಯ ಮಾಡಿಕೊಟ್ಟ ದೇಸಿ ಕಲಾಕಾರ್ ಯೋ ಯೋ ಹನಿ ಸಿಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.

ಮೂಚೋಂಕೋ ತೋಡ ರೌಂಡು ಗುಮಾಕೆ ಅಣ್ಣಕೇ ಜೈಸಾ ಚಸ್ಮಾ ಲಗಾಗೆ, ಎಂದು ಹಾಡುತ್ತಾ ಈತ ಮಾಡಿದ್ದು ಲುಂಗಿ ಡ್ಯಾನ್ಸ ಅಲ್ಲ. ಬದಲಿಗೆ ತನ್ನ ಹೆಂಡತಿ ಮೇಲೆ ದೌರ್ಜನ್ಯ. ಇವನೊಬ್ಬ ಸೂಪರ್ ಸ್ಟಾರ್ ಱಪ್ ಸಿಂಗರ್ ಯೋ ಯೋ ಹನಿ ಸಿಂಗ್ ಅನ್ನೋದು ನಮ್ಮೆಲ್ಲರಿಗೂ ಪರಿಚಯ. ಆದ್ರೆ ಈತನ ಅಸಲಿ ಹೆಸರು ಹಿರ್ದೇಶ್ ಸಿಂಗ್. ಬರಿ ಹೆಸರಲ್ಲ, ಇವನ ಅಸಲಿ ವರ್ತನೆ ಕೂಡ ಬೇರೆನೇ ಇದೆ ಎಂದು ಆತನ ಪತ್ನಿ ಶಾಲಿನಿ ನೇರವಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ಯೋ ಯೋ ಮಾಡಿರುವ ಹಿಂಸಾಚಾರ ಒಂದೆರಡು ಪುಟಗಳಲ್ಲಿ ಬರೆದು ಹೇಳಿಲ್ಲ ಪತ್ನಿ ಶಾಲಿನಿ ತಲ್ವಾರ್ ಬದಲಿಗೆ ಒಂದು ಪುಸ್ತಕದಷ್ಟು ಹಿಂಸಾಚಾರದ ವರದಿಯನ್ನು ಹಿಡಿದು ಹನಿ ಸಿಂಗ್ ನ ಸುಳಿಯಿಂದ ಹೊರಬಂದಿದ್ದಾರೆ.

ಹನಿ ಸಿಂಗ್ ವಿರುದ್ಧ 118 ಪುಟಗಳ ಕಂಪ್ಲೀಂಟ್ ದಾಖಲು
ಕೌಟುಂಬಿಕ ದೌರ್ಜನ್ಯ, ಮಾನಸಿಕ ಕಿರುಕುಳ ಕೊಟ್ಟ ಯೋ ಯೋ

2011ರಲ್ಲಿ ಹನಿ ಸಿಂಗ್​ ಮತ್ತು ಶಾಲಿನಿ ತಲ್ವಾರ್​ ಮದುವೆ ನೆರವೇರಿತ್ತು. ಆದರೆ ಇವರು ಮದುವೆಯಾಗಿರುವ ವಿಚಾರ ತನ್ ಕೆರಿಯರ್ ಹಾಳು ಮಾಡಿಬಿಡಬಹುದು ಎನ್ನುವ ಯೋಚನೆಯಿಂದ ಹನಿ ಸಿಂಗ್ ಜಗತ್ತಿನ ಮುಂದೆ ಈ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೆ ಹತ್ತು ವರ್ಷಗಳ ಕಾಲ ಹನಿ ಸಿಂಗ್​ ಜೊತೆ ದಾಂಪತ್ಯ ಜೀವನ ನಡೆಸಿರುವ ಶಾಲಿನಿ ಅನೇಕ ಹಿಂಸೆ ಅನುಭವಿಸಿದ್ದಾರೆ. ಹನಿ ಸಿಂಗ್ ಹಾಗೂ ತನ್ನ ಕುಂಟುಂಬದವರು ಶಾಲಿನಿ ತಲ್ವಾರಗೆ ಹಿಂಸೆ ಕೊಟ್ಟಿರುವ ಬಗ್ಗೆ ಬರೋಬ್ಬರಿ 118 ಪುಟಗಳ ಕಂಪ್ಲೇಟ್ ವರದಿಯನ್ನು ಪತ್ನಿ ದೆಹಲಿ ಕೋರ್ಟ್​ಗೆ ಸಲ್ಲಿಸಿದ್ದಾರೆ. ಇದರಿಂದ ಈ ಕೇಸ್ ಭರ್ಜರಿ ತಿರುವು ಪಡೆದುಕೊಂಡಿದೆ.

ಹನಿ ಸಿಂಗ್ ಸಾಧನೆಗೆ ಬೆನ್ನಾಗಿದ್ದರು ಶಾಲಿನಿ ತಲ್ವಾರ್
ಹನಿ ಸಿಂಗ್ ಹೆಸರಿಗೆ ಕಪ್ಪು ಚುಕ್ಕಿ ಬಾರದೆಂದು ಸುಮ್ಮನಿದ್ದರು

ಹನಿ ಸಿಂಗ್ ಹಾಗೂ ಶಾಲಿನಿ ಪ್ರೀತಿಸಿ ದೆಹಲಿಯ ಗುರುದ್ವಾರದಲ್ಲಿ ಪ್ರೇಮ ವಿವಾಹ ಆಗಿದ್ದರು. ಆ ಹೊತ್ತಿಗೆ ಹನಿ ಸಿಂಗ್ ಹೆಸರು ಇನ್ನು ಪ್ರಚಲಿತವಾಗಿದ್ದಿರಲಿಲ್ಲ. 2006 ರಿಂದ ಪಂಜಾಬಿ ಱಪ್ ಹಾಡುಗಳನ್ನು ಹಾಡಿ ಸಣ್ಣ ಮಟ್ಟಗಿನ ಸಕ್ಸಸ್ ಹನಿ ಹತ್ತಿರ ಉಳಿದ್ದಿತ್ತು. ಆದರೆ 2013ರಲ್ಲಿ ಬ್ಲೂ ಐಸ್ ನಿಂದ ಈ ಭೂಪ ವಿಶ್ವಾದ್ಯಾಂತ ಹೆಸರು ಗಳಿಸಿದ್ದ. ಇದಾದ ಬಳಿಕ ಸಾಲು ಸಾಲು ಹಾಡುಗಳ ಸಂಯೋಜನೆ ಮಾಡಿ ಹಣ, ಹೆಸರು ಎಲ್ಲವನ್ನು ತನ್ನಾದಾಗಿಸಿದ. ಇಷ್ಟು ವರ್ಷಗಳಲ್ಲಿ ಎಲ್ಲಿಯೂ ತಾನು ವಿವಾಹಿತ ಎಂದು ಹೇಳಿಕೊಂಡಿರಲಿಲ್ಲ ಹನಿ ಸಿಂಗ್. ಇದಕ್ಕೆ ಶಾಲಿನಿ ತಲ್ವಾರ್ ಕೂಡ ಸಾಥ್ ನೀಡಿದ್ದರು. ಹನಿ ಸಿಂಗ್ ಸಾಧನೆಗೆ ಬೆನ್ನಾಗಿ ಅವನ ಏಳಿಯ ಜೊತೆಯಲ್ಲೆ ನಿಂತಿದ್ದರು. ಆದರೆ ಇವನ ವರ್ತನೆ ಹೆಸರು ಬಂದ ಮೇಲೆ ಬದಲಾಗಿಬಿಟ್ಟಿತ್ತು. ಹೆಂಡತಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ಕೊಟ್ಟಿದ್ದಾನೆ. ಇದನ್ನೆಲ್ಲ ಸಹಿಸಿದ ಶಾಲಿನಿ, ಅವನ ಹೆಸರಿಗೆ ಕಪ್ಪು ಚುಕ್ಕಿ ಆಗೋದು ಬೇಡ ಎನ್ನುವಂತೆ ಶಾಂತಿಯಿಂದ ಸಹಿಸಿಕೊಂಡಿದ್ದಳು ಎಂದು ಶಾಲಿನಿ ವರದಿಯಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೆ ಶಾಲಿನ ಮಾಡಿರುವ ಪ್ರಮುಖ ಆರೋಪಗಳ ಪಟ್ಟಿ ಇಲ್ಲಿದೆ ನೋಡಿ.

ಆರೋಪಗಳೇನು..?

  1.  ಅನೇಕ ಬಾರಿ ದೈಹಿಕವಾಗಿ, ಮಾನಸಿಕವಾಗಿ ಮತ್ತು ಮೌಖಿಕವಾಗಿ​ ಹಲ್ಲೆ
  2. ಸಂಭಾವನೆಯನ್ನು ನಗದು ರೂಪದಲ್ಲೇ​ ಪಡೆಯುತ್ತಿದ್ದು, ಹಣದ ವ್ಯವಹಾರವನ್ನು ಮುಚ್ಚಿಟ್ಟಿರುವ ಆರೋಪ
  3. ಹನಿ ಸಿಂಗ್​ ಮದ್ಯವ್ಯಸನಿ ಆಗಿದ್ದ ಅಲ್ಲದೆ ಡ್ರಗ್​ ಅಡಿಕ್ಟ್​ ಕೂಡ ಆಗಿದ್ದಾರೆ
  4. ಅನೇಕ ಮಹಿಳೆಯರ ಜೊತೆ ಹನಿ ಸಿಂಗ್​ ಸಹಜ ಎಂಬಂತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಆರೋಪ
  5. ಪಂಜಾಬಿ ನಟಿಯೊಬ್ಬರ ಜೊತೆ ಹನಿ ಸಿಂಗ್​ ಅಕ್ರಮ ಸಂಬಂಧ ಹೊಂದಿರುವ ಆರೋಪ
  6. ಮದುವೆ ಆಗಿದೆ ಎಂಬ ಸತ್ಯವನ್ನು ಜನರಿಂದ ಹಲವು ವರ್ಷಗಳವರೆಗೆ​ ಮುಚ್ಚಿಟ್ಟಿರುವ ಆರೋಪ
  7. ಮದುವೆಯ ಫೋಟೋಗಳು ಇಂಟರ್​ನೆಟ್​ನಲ್ಲಿ ಲೀಕ್​ ಆಗಿದ್ದಕ್ಕೆ ನಾನೇ ಕಾರಣ ಎಂದು ಥಳಿಸಿದ್ದಾರೆ
  8. ಮದುವೆ ಉಂಗುರವನ್ನು ಹನಿ ಸಿಂಗ್​ ಧರಿಸುತ್ತಿರಲಿಲ್ಲ. ಅದು ತನಗೆ ದುರದೃಷ್ಟ ಎನ್ನುತ್ತಿದ್ದಾರಂತೆ
  9. ಅಕ್ರಮ ಸಂಬಂಧವನ್ನು ಪ್ರಶ್ನೆ ಮಾಡಿದ್ದಕ್ಕೆ ಬಿಯರ್ ಬಾಟಲಿಯಲ್ಲಿ ಹೊಡೆದಿರುವ ಆರೋಪ

ಇದು ಹನಿ ಸಿಂಗ್ ಮಾಡುತ್ತಿದ್ದ ದೌರ್ಜನ್ಯದ ವಿವರ. ಆದರೆ ಇದಿಷ್ಟೇ ಅಲ್ಲ ಆತ ಹಲವು ಅಕ್ರಮ ವ್ಯವಹಾರದಲ್ಲಿ ತೊಡಗಿದ್ದ. ಬಾಲಿವುಡ್ ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಇವನ ಹೆಸರು ಎಲ್ಲೂ ಬಂದಿರಲಿಲ್ಲ. ಆದರೆ ಪತ್ನಿ ಏಕಾಏಕಿ ಹನಿ ಸಿಂಗ್ ಒಬ್ಬ ಡ್ರಗ್ ಅಡಿಕ್ಟ್ ಎಂದು ಹೇಳಿಕೆ ನೀಡಿದ್ದಾರೆ. ಈ ಎಲ್ಲ ಆರೋಪಗಳ ಕುರಿತು ಸ್ಪಷ್ಟನೆ ನೀಡುವಂತೆ ಹನಿ ಸಿಂಗ್​ಗೆ ನ್ಯಾಯಾಲಯ ನೋಟಿಸ್​ ಜಾರಿ ಮಾಡಿದೆ. ಶಾಲಿನಿ ಪರವಾಗಿ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಇದನ್ನೂ ಓದಿ: ಪಾಪ್ ಗಾಯಕ ಹನಿ ಸಿಂಗ್ ವಿರುದ್ಧ ಪಂಜಾಬ್ ಮಹಿಳಾ ಆಯೋಗ ಕೇಸ್..

ಬ್ರೌನ್ ರಂಗ್ ನಟಿಯ ಜೊತೆ ಹನಿ ಅಕ್ರಮ ಸಂಬಂಧ
ಪ್ರಶ್ನೆ ಮಾಡಿದರೆ ತಲೆಗೆ ಮದ್ಯ ಸುರಿದು ಹನಿ ದೌರ್ಜನ್ಯ

ಸಾಲು ಸಾಲು ಸಕ್ಸಸ್ ಜೊತೆ ಬಾಲಿವುಡ್ ಅಂಗಳದಲ್ಲಿ ಹೆಸರು ಮಾಡಿದ್ದ ಹನಿ ಸಿಂಗ್, ತನ್ನ ಜೀವನ ಶೈಲಿಯನ್ನು ಸಹಜವಾಗೆ ಬೇರೆ ದಾರಿಯಲ್ಲಿ ಇರಿಸಿದ್ದ. ನಿರಂತರವಾಗಿ ಮದ್ಯ ಸೇವಿಸುವ ಚಟವನ್ನು ಅಭ್ಯಾಸ ಮಾಡಿಕೊಂಡಿದ್ದ. ತನ್ನ ಬ್ರೌನ್ ರಂಗ್ ಎನ್ನುವ ಮೂಸಿಕ್ ಆಡಿಯೋದಲ್ಲಿ ನಟಿ ಹಲೈನ ಕುಚೆ ಜೊತೆ ಪಂಜಾಬ್ ಱಪ್ ಸಿಂಗರ್ ಗೆ ಅಕ್ರಮ ಸಂಬಂಧ ಬೆಳೆದಿತ್ತು. ಅನುಮಾನ ಹುಟ್ಟಿ ಶಾಲಿನಿ ಆತನನ್ನು ಕೇಳಿದಾಗ ” none of your business ” ಎಂದು ಉತ್ತರ ನೀಡಿದ್ದನಂತೆ, ಇದೆ ಚರ್ಚೆ ಮುಂದಾದಾಗ ಬಿಯರ್ ಬಾಟಲಿಯಲ್ಲಿ ಹೊಡೆದು, ಮೈ ಮೇಲೆ ಮದ್ಯ ಸುರಿದ್ದನಂತೆ ಹನಿ ಸಿಂಗ್.

ಹನಿ ಸಿಂಗ್ ತಂದೆ ತಾಯಿ, ತಂಗಿ ಮೇಲು ಪ್ರಕರಣ ದಾಖಲು
ಕೌಟುಂಬಿಕ ದೌರ್ಜನ್ಯ ಪ್ರಕರಣಯಂದು ಎಲ್ಲರಿಗೂ ನೋಟಿಸ್

ಹನಿ ಸಿಂಗ್ ಮಾತ್ರವಲ್ಲ. ಹನಿ ಸಿಂಗ್ ಮನೆಯವರೆಲ್ಲ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಹನಿ ಸಿಂಗ್ ತಂದೆ, ಶಾಲಿನಿ ಬಟ್ಟೆ ಬದಲಿಸುವಾಗ ಕದ್ದು ನೋಡುತ್ತಿದ್ದ, ಮೈ ಮೇಲೆ ಬಿದ್ದಿದ್ದ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ ಶಾಲಿನಿ. ಹನಿ ಸಿಂಗ್ ತಾಯಿ ಭೂಪಿಂದರ್ ಕೌರ್ ಜೊತೆ ಹನಿ ಸಿಂಗ್ ತಂಗಿ ಇಬ್ಬರು ದೈಹಿಕವಾಗಿ ಹಲ್ಲೆ ಮಾಡುತ್ತಿದ್ದರು ಎನ್ನುವ ಆರೋಪ ಕೂಡ ಕಂಪ್ಲೆಂಟ್ ಕಾಪಿಯಲ್ಲಿ ಉಲ್ಲೇಖ ಮಾಡಿದ್ದಾರೆ ಶಾಲಿನಿ ತಲ್ವಾರ್. ಇದರಿಂದ ದೆಹಲಿ ಹೈ ಕೋರ್ಟ್ ಹನಿ ಸಿಂಗ್ ಕುಟುಂಬದ ಎಲ್ಲರ ಮೇಲೂ ದೂರು ದಾಖಲಿಸಿ, ಕೌಟುಂಬಿಕ ದೌರ್ಜನ್ಯ ಪ್ರಕರಣದ ಮೇಲೆ ನೋಟಿಸ್ ಜಾರಿ ಮಾಡಿದೆ. ಶಾಲಿನಿಗೆ ಕೋವಿಡ್ ಬಂದಾಗ, ಹನಿ ಸಿಂಗ್ ವಿಚಾರಿಸಲು ಇಲ್ಲ ಎಂದು ಕಂಪ್ಲೆಂಟ್ ನಲ್ಲಿ ತಿಳಿಸಿದ್ದಾರೆ.

10 ಕೋಟಿ ಪರಿಹಾರ ಕೋರಿ ಶಾಲಿನಿ ಕೋರ್ಟ್ ಗೆ ಮನವಿ
ಪ್ರತಿ ತಿಂಗಳು 5 ಲಕ್ಷ ರೂಪಾಯಿ ರೆಂಟ್ ನೀಡಲು ಕೋರಿಕೆ

ಶಾಲಿನಿ ಆರೋಪ ಸಹಜದ ಆರೋಪವಲ್ಲ. ಇದು ಕೌಟುಂಬಿಕ ದೌರ್ಜನ್ಯ ಕೇಸ್. ಇದರಿಂದ ಶಾಲಿನಿ 10 ಕೋಟಿ ರೂ ಪರಿಹಾರ ಕೋರಿ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ಪ್ರತಿ ತಿಂಗಳು ದೆಹಲಿಯಲ್ಲಿ ತಾನು ಪ್ರತ್ಯೇಕವಾಗಿ ವಾಸಿಸಲು ತಿಂಗಳಿಗೆ 5 ಲಕ್ಷ ರೂಪಾಯಿಗಳನ್ನು ನೀಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. ಅಲ್ಲದೆ ಮುಂಬೈ ನಗರದಲ್ಲಿನ ಬೆಲೆ ಬಾಳುವ ಬಂಗಲೆಯನ್ನು ತನ್ನ ಹೆಸರಿಗೆ ನೀಡಬೇಕು ಎನ್ನುತ್ತಿದ್ದಾರೆ ಶಾಲಿನಿ ತಲ್ವಾರ್. ಸದ್ಯ ಪತ್ನಿಯ ಜೊತೆ ಜಂಟಿ ಒಡೆತನದಲ್ಲಿ ಇರುವ ಯಾವುದೇ ಆಸ್ತಿಯನ್ನೂ ಮಾರಾಟ ಮಾಡದಂತೆ ಹನಿ ಸಿಂಗ್​ಗೆ ನ್ಯಾಯಾಲಯ ಸೂಚಿಸಿದೆ.

ಒಟ್ಟನ್ನಲ್ಲಿ ರಿಚ್ ಆಗಿ, ಡಿಫೆರೆಂಟ್ ಆಗಿ ಹಾಡುಗಳನ್ನು ಬರೆದು ನಿರ್ದೇಶನ ಮಾಡಿ ಎಲ್ಲರ ಮನಸಿನಲ್ಲಿ ಉಳಿದ್ದಿದ್ದ ಹನಿ ಸಿಂಗ್., ತನ್ನ ಇನ್ನೊಂದು ಮುಖ ತೋರಿ ಆರೋಪಿ ಸ್ಥಾನದಲ್ಲಿ ತಲೆ ಬಗ್ಗಿಸಿ ನಿಂತಿದ್ದಾರೆ. ಹಣ, ಹೆಸರು ಪ್ರತಿಷ್ಟೆ ಬಂದ ಮೇಲೆ ಜನ ಬದಲಾಗ್ತಾರೆ ಅನ್ನೊ ಮಾತ್ ಕೇಳಿದ್ದಿರ ಅಲ್ವಾ, ಈಗ ಹನಿ ಸಿಂಗ್ ಮಾಡಿರುವುದೆ ಅದೆ ಅನ್ನುವ ಹಾಗಾಗಿದೆ. ಮಾಡಿದ್ದುಣ್ಣೋ ಮಾರಾಯ ಅನ್ನುವ ಹಾಗೆ ದೆಹಲಿ ಕೋರ್ಟ್ ಹನಿಯ ಬೆನ್ನು ಹತ್ತಿದೆ.

ಇದನ್ನೂ ಓದಿ: ಱಪರ್ ಯೋ ಯೋ ​ಹನಿ ಸಿಂಗ್​ ವಿರುದ್ಧ ಪತ್ನಿಯಿಂದಲೇ ಕಂಪ್ಲೇಂಟ್​​; ಅಷ್ಟಕ್ಕೂ ಏನಾಯ್ತು?

Source: newsfirstlive.com Source link