ವಿಷಪೂರಿತ ಆಹಾರ ಸೇವನೆ; ಒಂದೇ ಕುಟುಂಬದ ಏಳು ಮಂದಿ ಅಸ್ವಸ್ಥ

ವಿಷಪೂರಿತ ಆಹಾರ ಸೇವನೆ; ಒಂದೇ ಕುಟುಂಬದ ಏಳು ಮಂದಿ ಅಸ್ವಸ್ಥ

ಬಾಗಲಕೋಟೆ: ವಿಷಪೂರಿತ ಆಹಾರ ಸೇವಿಸಿದ ಪರಿಣಾಮ ಒಂದೇ ಮನೆಯ ಏಳು ಮಂದಿ ಅಸ್ವಸ್ಥರಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ರಾತ್ರಿ ನಡೆದಿದೆ. ತಾಯಿ, ಮಗ, ಸೊಸೆ ಮತ್ತು ನಾಲ್ವರು ಮೊಮ್ಮಕ್ಕಳು ಅಸ್ವಸ್ಥಗೊಂಡಿದ್ದಾರೆ.

ಇತ್ತೀಚೆಗೆ ಸೊಸೆ ಶಾಂತಾ ತನ್ನ ತವರು ಮನೆಗೆ ಹೋಗಿ ಬರುವಾಗ ಗೋಧಿ ತಂದಿದ್ದರು. ಈ ಗೋಧಿಯಿಂದ ಮಾಡಿದ ಚಪಾತಿ ಸೇವನೆ ಮಾಡಿ ಒಂದೇ ಕುಟುಂಬದ ತಾಯಿ ದುಂಡವ್ವ ಮಹಾರುದ್ರಪ್ಪ ಕಡ್ಲೆಪ್ಪನವರ (60), ಮಗ ಲಕ್ಷ್ಮಣ (38), ಸೊಸೆ ಶಾಂತಾ (28) ಮೊಮ್ಮಕ್ಕಳಾದ ತೇಜಸ್ವಿನಿ (12), ಪಲ್ಲವಿ (10), ಪ್ರಥಮ್‌ (8) ಮತ್ತು ಸಾಕ್ಷಿ (6) ಎಂಬುವರು ಅಸ್ವಸ್ಥರಾಗಿದ್ದಾರೆ. ಎಲ್ಲರಿಗೂ ವಾಂತಿ-ಭೇದಿಯಾಗಿದೆ.

blank

ಇನ್ನು, ಮೊದಲು ಪ್ರಾಥಮಿಕ ಚಿಕಿತ್ಸೆಗಾಗಿ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಈಗ ಹೆಚ್ಚುವರಿ ಚಿಕಿತ್ಸೆಗಾಗಿ ಎಲ್ಲರನ್ನೂ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಹೆಚ್ಚುವರಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಎಲ್ಲರೂ ಸೇಫ್​​ ಆಗಿದ್ದಾರೆ.

Source: newsfirstlive.com Source link