ಕಿಚ್ಚನಿಂದಾಗಿ ವೈಷ್ಣವಿ ಹೆಸರು ಬದಲಾಯಿಸಲು ಪೋಷಕರು ತೀರ್ಮಾನ

ವಾರ ಬಿಗ್‍ಬಾಸ್ ಫಿನಾಲೆ ವೀಕ್ ಆಗಿರುವುದರಿಂದ ಮನೆಯ ಸ್ಪರ್ಧಿಗಳಿಗೆ ಬಿಗ್‍ಬಾಸ್ ಸರ್‍ಪ್ರೈಸ್ ಮೇಲೆ ಸರ್‍ಪ್ರೈಸ್‍ಗಳನ್ನು ನೀಡುತ್ತಿದ್ದಾರೆ. ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್ ಹಾಗೂ ಸೆಕೆಂಡ್ ಇನ್ನಿಂಗ್ಸ್ ಎರಡರಲ್ಲಿಯೂ ಬಹುತೇಕ ಸ್ಪರ್ಧಿಗಳಿಗೆ ಕುಟುಂಬದವರಿಂದ ಕರೆ ಬಂದಿತ್ತು. ಆದ್ರೆ ಇಷ್ಟು ದಿನವಾದರೂ ವೈಷ್ಣವಿ ಗೌಡಗೆ ಮಾತ್ರ ಯಾವುದೇ ಕರೆ ಬಂದಿರಲಿಲ್ಲ. ಸದ್ಯ ಕೊನೆಗೂ ಈಗ ವೈಷ್ಣವಿಗೆ ಮನೆಯವರಿಂದ ಕರೆ ಬಂದಿದೆ.

ಬಿಗ್‍ಬಾಸ್ 44ನೇ ದಿನ ವೈಷ್ಣವಿ ಗೌಡ ಫ್ಯಾಮಿಲಿ ಫೋಟೋವನ್ನು ದೊಡ್ಮನೆಯ ಟಿವಿ ಸ್ಕ್ರೀನ್ ಮೇಲೆ ಹಾಕಿ ವೈಷ್ಣವಿಗೆ ಬಿಗ್‍ಬಾಸ್ ಸರ್‍ಪ್ರೈಸ್ ನೀಡಿದ್ದಾರೆ. ಇದನ್ನು ನೋಡಿ ವೈಷ್ಣವಿ ಮನೆಯ ಇತರ ಸದಸ್ಯರಿಗೆ ತಮ್ಮ ಫ್ಯಾಮಿಲಿ ಪರಿಚಯ ಮಾಡಿಕೊಡುವ ಮೂಲಕ ಸಂತಸಗೊಂಡಿದ್ದಾರೆ.

ನಂತರ ವೈಷ್ಣವಿ ತಾಯಿ ಕರೆ ಮಾಡಿ, ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದೇವೆ. ನಮ್ಮ ಬಗ್ಗೆ ಯಾವುದೇ ಟೆನ್ಷನ್ ಮಾಡಿಕೊಳ್ಳಬೇಡ. ನಿನ್ನ ಎಲ್ಲಾ ಬಿಗ್‍ಬಾಸ್ ಮನೆಯ ಫ್ರೆಂಡ್ಸ್‍ಗೆ ವಿಶ್ ಮಾಡಿದ್ವಿ ಅಂತ ಹೇಳು, ಮಂಜು ಜೊತೆ ನೀನು ಮಾಡುತ್ತಿದ್ದ ಕಾಮಿಡಿ ಸೂಪರ್ ಆಗಿತ್ತು. ನೀನು ಪ್ರತಿಯೊಂದು ಟಾಸ್ಕ್ ಆಡುತ್ತಿದ್ದ ರೀತಿ ಬಹಳ ಚೆನ್ನಾಗಿತ್ತು. ನಿನ್ನ ಬಗ್ಗೆ ಮನೆಯಲ್ಲಿ ಜಾಸ್ತಿ ಮಾತನಾಡುತ್ತಿರುತ್ತೇವೆ. ನೀನು 9 ತಿಂಗಳಿಗೆ ತುಂಬಾ ಚೆನ್ನಾಗಿ ಮಾತನಾಡಲು ಶುರು ಮಾಡಿದೆ. ನೀನು ದೊಡ್ಡವಳಾದ ನಂತರ ಅಪ್ಪ ಸ್ಮೋಕ್ ಮಾಡುವುದನ್ನು ನಿಲ್ಲಿಸುವುದಕ್ಕೆ ತುಂಬಾ ಟ್ರೈ ಮಾಡಿದ್ದನ್ನು ಈಗಲೂ ಅಪ್ಪ ತುಂಬಾ ನೆನಪಿಸಿಕೊಳ್ಳುತ್ತಾರೆ ಎಂದರು.

blank

ಮೊದಲ ಮಗುವಿನ ನಂತರ ನಾನು-ಅಪ್ಪ ದೇವರ ಬಳಿ ಹೆಣ್ಣು ಮಗು ಆಗಬೇಕೆಂದು ಬೇಡಿಕೊಂಡಿ. ನಂತರ ನೀನು ಹುಟ್ಟಿದೆ. ನೀನು ಮಗು ಇದ್ದಾಗ ತುಂಬಾ ಕ್ಯೂಟ್ ಆಗಿದ್ದೆ. ಅಪ್ಪ ನಿನಗೆ ರೇಷ್ಮ ಎಂದು ಹೆಸರಿಡಬೇಕೆಂದು ಕೊಂಡಿದ್ದರು. ಆದ್ರೆ ದೇವರ ಹತ್ತಿರ ಬೇಡಿಕೊಂಡಿದ್ದರಿಂದ ವೈಷ್ಣವಿ ಎಂದು ಹೆಸರಿಟ್ವಿ. ತುಂಬಾ ವರ್ಷಗಳ ನಂತರ ಸುದೀಪ್ ಸರ್ ಮುಖಾಂತರ ಈ ಆಸೆ ಈಡೇರಿತು. ಮುಂದೆ ನಿನ್ನ ಹೆಸರನ್ನು ರೇಷ್ಮ ವೈಷ್ಣವಿ ಎಂದು ಇಡುತ್ತೇವೆ. ತುಂಬಾ ಜನ ಬಿಗ್‍ಬಾಸ್ ಮನೆಗೆ ವೈಷ್ಣವಿಯನ್ನು ಕಳುಹಿಸಬೇಡಿ ಎಂದರು. ಆದ್ರೆ ನೀನು ಬಿಗ್‍ಬಾಸ್ ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿ ನೋಡಿ, ವೈಷ್ಣವಿಯನ್ನು ಕಳುಹಿಸಿದನ್ನು ನೋಡಿ ತುಂಬಾ ಒಳ್ಳೆಯದಾಯಿತು ಅಂತ ಹೇಳ್ತಿದ್ದಾರೆ. ನಿನಗೆ ಒಳ್ಳೆ ಟೈಂನಲ್ಲಿ ಬಿಗ್‍ಬಾಸ್ ವೇದಿಕೆ ಸಿಕ್ಕಿದೆ. ನೀನು ಈ ವೇದಿಕೆ ಮೂಲಕ ಏನು ಕಲಿಯುತ್ತೀಯಾ ಅದು ನಿನ್ನ ಲೈಫ್‍ನಲ್ಲಿ ತುಂಬಾ ಮುಖ್ಯವಾಗುತ್ತದೆ. ನಿನ್ನ ಬಗ್ಗೆ ಹೇಳಲು ನನಗೆ ತುಂಬಾ ಹೆಮ್ಮೆಯಾಗುತ್ತದೆ. ದೇವರಲ್ಲಿ ನಾನು ಬೇಡಿದಕ್ಕೂ, ನೀನು ನನಗೆ ಒಳ್ಳೆಯ ಹೆಸರು ತಂದು ಕೊಡುತ್ತಿರುವುದಕ್ಕೂ ತುಂಬಾ ಸಂತೋಷವಾಗುತ್ತಿದೆ. ನೀನು ಬಿಗ್‍ಬಾಸ್ ಗೆಲ್ಲಬೇಕೆಂಬುದು ನಿನ್ನ ಫ್ರೆಂಡ್ಸ್, ಫ್ಯಾನ್ಸ್ ಹಾಗೂ ನನ್ನ ಆಸೆ. ನೀನು ಗೆಲ್ಲಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಶುಭಾ ಹಾರೈಸುತ್ತೇನೆ. ಇದನ್ನೂ ಓದಿ: ಸ್ಮೈಲ್, ಸ್ಮೈಲ್- ಬಾಲಿವುಡ್ ಬೆಡಗಿಗೆ ಕಿಚ್ಚನ ವಿಶ್

Source: publictv.in Source link